ನವದೆಹಲಿ(ಏ.03): ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮ್ಯೂನಿಕ್‌ನಲ್ಲಿ ನಡೆಯಬೇಕಿದ್ದ ಶೂಟಿಂಗ್‌ ವಿಶ್ವಕಪ್‌ ರದ್ದುಗೊಂಡ ಬೆನ್ನಲ್ಲೇ ಇಲ್ಲಿ ಮೇ-ಜೂನ್‌ನಲ್ಲಿ ನಡೆಯಬೇಕಿರುವ ವಿಶ್ವಕಪ್‌ ಕೂಟವನ್ನೂ ರದ್ದುಗೊಳಿಸುವಂತೆ ಭಾರತೀಯ ರಾಷ್ಟ್ರೀಯ ರೈಫಲ್‌ ಸಂಸ್ಥೆ (ಎನ್‌ಆರ್‌ಎಐ) ಮೇಲೆ ಒತ್ತಡ ಹೆಚ್ಚಾಗುತ್ತಿದೆ. 

ಕೊರೋನಾ ವೈರಸ್ ಆತಂಕ; ಭಾರತೀಯ ಕ್ರೀಡೆಗೆ ತಟ್ಟಿದ ಬಿಸಿ!

ಮಾ.15ರಿಂದ 26ರ ವರೆಗೂ ನಡೆಯಬೇಕಿದ್ದ ಕೂಟವನ್ನು ಮಾ.11ರಂದು ಮುಂದೂಡಲಾಗಿತ್ತು. ಬಳಿಕ ಮೇ 5ರಿಂದ 12ರ ವರೆಗೆ ರೈಫಲ್‌ ಹಾಗೂ ಜೂ.2ರಿಂದ 9ರ ವರಗೆ ಪಿಸ್ತೂಲ್‌ ಸ್ಪರ್ಧೆಗಳನ್ನು ನಡೆಸಲು ನಿರ್ಧರಿಸಲಾಗಿತ್ತು. ಇದೀಗ ಎರಡೂ ಕೂಟವನ್ನು ರದ್ದುಗೊಳಿಸಬೇಕಾಗಬಹುದು ಎಂದು ಎನ್‌ಆರ್‌ಎಐ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೋನಾ ವಿರುದ್ಧ ಹೋರಾಟ: ಸಿಎಂ ರಿಲೀಫ್‌ ಫಂಡ್‌ಗೆ ಶಾಸಕರ 600 ಕೋಟಿ ನಿಧಿ

ಕೊರೋನಾ ವೈರಸ್ ಕ್ರೀಡಾ ಜಗತ್ತನ್ನೇ ಸ್ತಬ್ಧಗೊಳಿಸಿದೆ. ಈಗಾಗಲೇ ಭೀತಿಯಿಂದಾಗಿ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ 2021ಕ್ಕೆ ಮುಂದೂಡಲ್ಪಟ್ಟಿದೆ. ಇನ್ನು ಭಾರತದಲ್ಲಿ ನಡೆಯುತ್ತಿದ್ದ ಇಂಡೋ-ಆಫ್ರಿಕಾ ಏಕದಿನ ಸರಣಿ ಕೂಡಾ ದಿಢೀರ್ ಆಗಿ ಸ್ತಬ್ಧವಾಗಿದೆ. ಇನ್ನುಳಿದಂತೆ ಬಹುನಿರೀಕ್ಷಿತ ಐಪಿಎಲ್ ಟೂರ್ನಿಯೂ ಸದ್ಯಕ್ಕೆ ನಡೆಯುವುದು ಅನುಮಾನ ಎನಿಸಿದೆ. ಈಗಾಗಲೇ ಐಪಿಎಲ್ ಟೂರ್ನಿ ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ.