Asianet Suvarna News Asianet Suvarna News

ಅಕ್ಟೋಬರ್ 26ರಿಂದ ಬೆಂಗಳೂರಲ್ಲಿ ರಾಷ್ಟ್ರೀಯ ಹಿರಿಯರ ಈಜು

* 74ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನ ವೇಳಾಪಟ್ಟಿ ಪ್ರಕಟ

* ರಾಜ್ಯಗಳ ಸುಮಾರು 1,500ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ

* ಬಸವನಗುಡಿಯ ನವೀಕೃತ ಈಜು ಕೊಳದಲ್ಲಿ ನಡೆಯಲಿದೆ ಸ್ಪರ್ಧೆ

senior national aquatic championships in Bengaluru on October 26 to 29 kvn
Author
Bengaluru, First Published Oct 19, 2021, 9:32 AM IST

ಬೆಂಗಳೂರು(ಅ.19): 74ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ ಹಾಗೂ 37ನೇ ಸಬ್‌ ಜೂನಿಯರ್‌, 47ನೇ ರಾಷ್ಟ್ರೀಯ ಜೂನಿಯರ್‌ ಈಜು ಸ್ಪರ್ಧೆಗಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಕೋವಿಡ್‌ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ (national aquatic championships) ಆಯೋಜಿಸಲಾಗಿದೆ.

ಸಬ್‌ಜೂನಿಯರ್‌, ಜೂನಿಯರ್‌ ಈಜು ಸ್ಪರ್ಧೆಗಳು ಅಕ್ಟೋಬರ್ 19ರಿಂದ 23ರವರೆಗೆ ಹಾಗೂ ಹಿರಿಯರ ಚಾಂಪಿಯನ್‌ಶಿಪ್‌ ಅಕ್ಟೋಬರ್ 26ರಿಂದ 29ರವರೆಗೆ ನಡೆಯಲಿದೆ. ಟೂರ್ನಿಯಲ್ಲಿ ದೇಶದ ಎಲ್ಲಾ ರಾಜ್ಯಗಳ ಸುಮಾರು 1,500ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಭಾರತೀಯ ಈಜು ಫೆಡರೇಷನ್‌(ಎಸ್‌ಎಫ್‌ಐ) ತಿಳಿಸಿದೆ.

ಉಬರ್‌ ಕಪ್‌: ಕ್ವಾರ್ಟರ್‌ ಪ್ರವೇಶಿಸಿದ ಭಾರತ ತಂಡ

ಈಜು ವಿಭಾಗದ ಸ್ಪರ್ಧೆಗಳು ಬಸವನಗುಡಿಯ ನವೀಕೃತ ಈಜು ಕೊಳದಲ್ಲಿ ನಡೆಯಲಿದ್ದು, ಡೈವಿಂಗ್‌ ಹಾಗೂ ವಾಟರ್‌ ಪೋಲೋ ಸ್ಪರ್ಧೆಗಳು ಕ್ರಮವಾಗಿ ಅಲ್ಸೂರಿನ ಕೆನ್ಸಿಂಗ್ಟನ್‌ ಈಜು ಕೊಳ ಹಾಗೂ ನೆಟ್ಕಲಪ್ಪ ಈಜು ಕೇಂದ್ರದಲ್ಲಿ ನಡೆಯಲಿವೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ಶ್ರೀಹರಿ ನಟರಾಜ್‌, ಕೇರಳದ ಸಾಜನ್‌ ಪ್ರಕಾಶ್‌, ಗುಜರಾತ್‌ನ ಮಾನಾ ಪಟೇಲ್‌ ಹಿರಿಯರ ಚಾಂಪಿಯನ್‌ಶಿಪ್‌ನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ.

ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಸಾಧನೆ

ಜಮಖಂಡಿ: ಬೆಂಗಳೂರಿನ ವಿಜಯನಗರದ ಅಕ್ವೇಟಿಕ್‌ ಈಜುಗೊಳ್ಳದಲ್ಲಿ ಕರ್ನಾಟಕ ಸ್ವಿಮ್ಮಿಂಗ್‌ ಅಸೋಸಿಯಶನ್‌ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮಾಸ್ಟರ್‌ ಸ್ವಿಮ್ಮಿಂಗ್‌ ಸ್ಪರ್ಧೆಯಲ್ಲಿ ತಾಲೂಕಿನ ಕ್ರೀಡಾಪಟುಗಳು ಸಾಧನೆಗೈದಿದ್ದಾರೆ.

ನಗರದ ರನಜೀತ ಗಾಂಧಿ 50 ಮೀ ಮತ್ತು 100 ಮೀ.ಬಟರ್‌ಪ್ಲಾಯ್‌ ಬಂಗಾರ, 200 ಮೀ ಮಿಡ್‌ರಿಲೆ ಸ್ಪರ್ಧೆಯಲ್ಲಿ ಬಂಗಾರ ಪದಕ ಪಡೆದುಕೊಂಡಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಗಿರಮಲ್ಲಯ್ಯ ಮಠಪತಿ 100 ಮೀಟರ್ ಬ್ರೆಸ್‌ ಸ್ಟ್ರೋಕ್‌ ಸ್ಪರ್ಧೆಯಲ್ಲಿ ಬಂಗಾರ ಮತ್ತು 50 ಮೀಟರ್ ಬ್ರೆಸ್‌ ಸ್ಟ್ರೋಕ್‌ ಬೆಳ್ಳಿ ಪದಕ ಪಡೆದಿದ್ದಾರೆ. ಬಾಗಲಕೋಟೆ ಸಿಪಿಐ ಮಲ್ಲಯ್ಯ ಮಠಪತಿ 50 ಮೀ. ಮತ್ತು 100 ಮೀ. ಬಟರ್‌ಪ್ಲಾಯ್‌ ಸ್ಪರ್ಧೆಯಲ್ಲಿ ಬಂಗಾರ, 200 ಮೀ.ಐ.ಎಂ. ರಿಲೆ ಸ್ಪರ್ಧೆಯಲ್ಲಿ ಬಂಗಾರ ಪದಕ ಪಡೆದಿದ್ದಾರೆ. 

ಕೆಲ ಕ್ರೀಡಾ ಒಕ್ಕೂಟಗಳು ಅಥ್ಲೀಟ್‌ಗಳನ್ನು ಬೆಳೆಯಲು ಬಿಡುತ್ತಿಲ್ಲ : ವಾಸ್ತವ ಬಿಚ್ಚಿಟ್ಟ ಕಿರಣ್ ರಿಜಿಜು

ನಿವೃತ್ತ ಶಿಕ್ಷಕ ಮಲ್ಲಪ್ಪ ನ್ಯಾಮಗೌಡ 50ಮೀ ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಬಸವರಾಜ ಪಾರಶೆಟ್ಟಿ 50ಮೀಟರ್ ಮತ್ತು 100 ಮೀ.ಬ್ರೆಸ್‌ ಸ್ಟ್ರೋಕ್‌ ಸ್ಪರ್ಧೆಯಲ್ಲಿ ಬಂಗಾರದ ಪದಕ, ಬಸವರಾಜ ನ್ಯಾಮಗೌಡ 100 ಮೀಟರ್ ಮತ್ತು 400ಮೀಟರ್ ಪ್ರೀಸ್ಟಾಯಿಲ್‌ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಇಂದಿನಿಂದ ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ ಆರಂಭ

ಒಡೆನ್ಸೆ(ಡೆನ್ಮಾರ್ಕ್): ಡೆನ್ಮಾರ್ಕ್ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಮಂಗಳವಾರ ಆರಂಭವಾಗಲಿದ್ದು, ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಬಳಿಕ ವಿಶ್ರಾಂತಿ ಪಡೆದಿದ್ದ ಭಾರತದ ತಾರಾ ಶಟ್ಲರ್‌, ಹಾಲಿ ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು (PV Sindhu) ಕಣಕ್ಕಿಳಿಯಲಿದ್ದಾರೆ. 4ನೇ ಶ್ರೇಯಾಂಕಿತೆ ಸಿಂಧು ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಟರ್ಕಿಯ ನೆಸ್ಲಿಹಾನ್‌ ಯಿಗಿಟ್‌ ವಿರುದ್ಧ ಸೆಣಸಲಿದ್ದಾರೆ.

ಗಾಯದಿಂದಾಗಿ ಉಬರ್‌ ಕಪ್‌ (Uber Cup) ಟೂರ್ನಿಯನ್ನು ಅರ್ಧದಲ್ಲೇ ತೊರೆದಿದ್ದ ಲಂಡನ್‌ ಒಲಿಂಪಿಕ್ಸ್‌ ಕಂಚು ವಿಜೇತೆ ಸೈನಾ ನೆಹ್ವಾಲ್‌ (Saina Nehwal) ಕೂಡಾ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಇವರ ಜೊತೆಗೆ, ತಾರಾ ಶಟ್ಲರ್‌ಗಳಾದ ಕಿದಂಬಿ ಶ್ರೀಕಾಂತ್‌, ಸಾಯ್‌ ಪ್ರಣೀತ್‌, ಚಿರಾಗ್‌ ಶೆಟ್ಟಿ, ಸಾತ್ವಿಕ್‌, ಪಿ.ಕಶ್ಯಪ್‌, ಸಿಕ್ಕಿ ರೆಡ್ಡಿ, ಅಶ್ವಿನಿ ಪೊನ್ನಪ್ಪ, ಸಮೀರ್‌ ವರ್ಮಾ, ಅರ್ಜುನ್‌, ಧ್ರುವ್‌ ಕಪಿಲಾ ಸೇರಿದಂತೆ ಹಲವರು ಸ್ಪರ್ಧಿಸಲಿದ್ದಾರೆ.

Follow Us:
Download App:
  • android
  • ios