ಮಗನ ಮೊದಲ ವರ್ಷದ ಹುಟ್ಟು ಹಬ್ಬ; ಸಾನಿಯಾ ಭಾವನಾತ್ಮಕ ಸಂದೇಶ !
ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಂಪತಿ ತಮ್ಮ ಪುತ್ರನ ಮೊದಲ ವರ್ಷದ ಹುಟ್ಟು ಹಬ್ಬ ಅದ್ಧೂರಿಯಾಗಿ ಆಚರಿಸಿದ್ದಾರೆ. ಇದೇ ವೇಳೆ ಸಾನಿಯಾ ಭಾವನಾತ್ಮಕ ಸಂದೇಶವೊಂದನ್ನು ರವಾನಿಸಿದ್ದಾರೆ.
ಹೈದರಾಬಾದ್(ಅ.30): ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್, ತಮ್ಮ ಪುತ್ರ ಇಝಾನ್‌ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಕಳೆದ ವರ್ಷ(2018) ಅಕ್ಟೋಬರ್ 30 ರಂದು ಸಾನಿಯಾ ಮಿರ್ಜಾ ಗಂಡು ಮಗುವಿನಗೆ ಜನ್ಮ ನೀಡಿದ್ದರು. ಇದೀಗ ಸಾಮಾಜಿಕ ಜಾಲತಾಣದ ಮೂಲಕ ಮಗನ ಹುಟ್ಟು ಹಬ್ಬಕ್ಕೆ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: 4 ತಿಂಗಳಲ್ಲಿ 26 ಕೆ.ಜಿ ತೂಕ ಇಳಿಸಿದ ಸಾನಿಯಾ!
ಒಂದು ವರ್ಷದ ಹಿಂದೆ ಈ ಜಗತ್ತಿಗೆ ನೀನು ಕಾಲಿಟ್ಟೆ, ಬಳಿಕ ನಮ್ಮ ಜಗತ್ತೇ ನೀನಾದೆ. ಹುಟ್ಟಿದ ದಿನವೇ ನಗು ನೀಡಿದೆ. ಇದೀಗ ವಿಶ್ವದ ಎಲ್ಲೇ ಹೋದರು ನಗವನ್ನು ಪಸರಿಸು. ನನ್ನ ಪ್ರೀತಿಯ ಹುಡುಗ, I LOVE YOU. ಇಂದು ನಾನು ಭರವಸೆ ನೀಡುತ್ತೇನೆ. ನನ್ನ ಕೊನೆಯ ಉಸಿರಿನವರೆಗೂ ನಿನ್ನ ಜೊತೆಗೆ, ನಿನ್ನ ಪರವಾಗಿ ಇರುತ್ತೇನೆ. ಹುಟ್ಟು ಹಬ್ಬದ ಶುಭಾಶಯಗಳು ಎಂದು ಸಾನಿಯಾ ಸಾಮಾಜಿ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: 2019ರಲ್ಲಿ ಟೆನಿಸ್’ಗೆ ಮರಳುವ ವಿಶ್ವಾಸದಲ್ಲಿ ಸಾನಿಯಾ
ಮಗನ ಹುಟ್ಟು ಹಬ್ಬಕ್ಕೆ ಸಾನಿಯಾ ಸಂದೇಶದ ಬೆನ್ನಲ್ಲೇ, ಬಾಲಿವುಡ್ ಸೆಲೆಬ್ರೆಟಿಗಳಾದ ನೇಹಾ ಧೂಪಿಯಾ, ಹುಮಾ ಖರೇಷಿ ಸೇರಿದಂತೆ ಹಲವರು ಶುಭಕೋರಿದ್ದಾರೆ.