ಲಂಡನ್‌(ನ.23): ಎಟಿಪಿ ವಿಶ್ವ ಟೂರ್‌ ಫೈನಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ರಷ್ಯಾದ ಡೇನಿಲ್‌ ಮೆಡ್ವೆಡೆವ್‌ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಯುಎಸ್ ಓಪನ್ ಚಾಂಪಿಯನ್ ಡೊಮಿನಿಕ್‌ ಥೀಮ್‌ ಎದುರು ಪ್ರಾಬಲ್ಯ ಮೆರೆದ ಮೆಡ್ವೆಡೆವ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಹೌದು, ಎಟಿಪಿ ವಿಶ್ವ ಟೂರ್‌ ಫೈನಲ್ಸ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ನಂ.3 ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಹಾಗೂ ನಂ.4 ರಷ್ಯಾದ ಡೇನಿಲ್‌ ಮೆಡ್ವೆಡೆವ್‌ ಮುಖಾಮುಖಿಯಾಗಿದ್ದರು. ಖಾಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೊಮಿನಿಕ್ ಥಿಮ್ ವಿರುದ್ಧ 4-6, 7-6(7/2) ಗಹಾಗೂ 6-4 ಸೆಟ್‌ಗಳಿಂದ ಜಯಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಇದಕ್ಕೂ ಮೊದಲು ವಿಶ್ವ ನಂ.1 ಸರ್ಬಿಯಾದ ನೊವಾಕ್‌ ಜೋಕೋವಿಚ್‌ ಹಾಗೂ ನಂ.2 ಸ್ಪೇನ್‌ನ ರಾಫೆಲ್‌ ನಡಾಲ್‌ ಫೈನಲ್‌ ಪ್ರವೇಶಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಜೋಕೋವಿಚ್‌, ಥೀಮ್‌ ಎದುರು ಮತ್ತು ನಡಾಲ್‌, ಮಡ್ವೆಡೆವ್‌ ವಿರುದ್ಧ ಸೋತು ಹೊರಬಿದ್ದಿದ್ದಾರೆ. 

ಲಾಕ್‌ಡೌನ್‌ ಬಳಿಕ ಬೆಂಗಳೂರಲ್ಲಿ ಮೊದಲ ಟೆನಿಸ್‌ ಟೂರ್ನಿ

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ಸೆಮೀಸ್‌ನಲ್ಲಿ ನಡಾಲ್‌, ಮೆಡ್ವೆಡೆವ್‌ ಎದುರು 6-3, 6-7(4-7), 3-6 ಸೆಟ್‌ಗಳಲ್ಲಿ ಪರಾಭವ ಹೊಂದಿದರು. ಶನಿವಾರ ನಡೆದಿದ್ದ ಸೆಮೀಸ್‌ನಲ್ಲಿ ಜೋಕೋವಿಚ್‌, ಥೀಮ್‌ ವಿರುದ್ಧ 5-7, 7-6(12-10), 6-7(5-7) ಸೆಟ್‌ಗಳಲ್ಲಿ ಸೋತಿದ್ದರು.