ಲಾಕ್‌ಡೌನ್ ಬಳಿಕ ಬೆಂಗಳೂರಲ್ಲಿ ಮೊದಲ ಟೆನಿಸ್ ಟೂರ್ನಿ
ಲಾಕ್‌ಡೌನ್ ತೆರವಿನ ಬಳಿಕ ಒಂದೊಂದೇ ಕ್ರೀಡಾಚಟುವಟಿಕೆಗಳು ಗರಿಗೆದರಲಾರಂಭಿಸಿವೆ. ಇದೀಗ ಉದ್ಯಾನ ನಗರಿ ಬೆಂಗಳೂರಿನಲ್ಲಿ ಲಾಕ್‌ಡೌನ್ ಬಳಿಕ ಟೆನಿಸ್ ಟೂರ್ನಿ ಆರಂಭವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು(ನ.21): ಕೊರೋನಾ ವೈರಸ್ ಹೆಮ್ಮಾರಿಯ ಭೀತಿಯಿಂದಾಗಿ ಲಾಕ್‌ಡೌನ್ ಆಗಿ ಬರೋಬ್ಬರಿ 8 ತಿಂಗಳ ಬಳಿಕ ರಾಜ್ಯದಲ್ಲಿ ಒಂದೊಂದೇ ಕ್ರೀಡಾ ಚಟುವಟಿಕೆಗಳು ನಡೆಯುತ್ತಿದೆ.
ಹೌದು, ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರಿಕೆಟ್ ಟೂರ್ನಿ ಆಯೋಜಿಸಿ ಸೈ ಎನಿಸಿಕೊಂಡಿದೆ. ಇದರ ಬಳಿಕ ಇದೀಗ ಇಲ್ಲಿನ ಕರ್ನಾಟಕ ರಾಜ್ಯ ಲಾನ್ ಟೆನಿಸ್ (ಕೆಎಸ್‌ಎಲ್‌ಟಿಎ) ಶುಕ್ರವಾರ (ನ.20) ದಿಂದ ರಾಷ್ಟ್ರೀಯ ಶ್ರೇಯಾಂಕಿತ 16 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ಟೆನಿಸ್ ಟೂರ್ನಿಯನ್ನು ಆಯೋಜಿಸಿದೆ. ಭಾನುವಾರದವರೆಗೂ ಟೂರ್ನಿ ನಡೆಯಲಿದೆ. ಟೂರ್ನಿಯಲ್ಲಿ 32 ಆಟಗಾರರು ಭಾಗವಹಿಸಲಿದ್ದು, ಸಿಂಗಲ್ಸ್ ವಿಭಾಗದ ಪಂದ್ಯಗಳು ಮಾತ್ರ ನಡೆಯಲಿವೆ.
10 ಟಿ20 ಪಂದ್ಯವನ್ನಾಡಿದ ಆಟಗಾರರಿಗೆ ಬಿಸಿಸಿಐನಿಂದ ಕೇಂದ್ರ ಗುತ್ತಿಗೆ.?
ಬಾಲಕರ ಮೊದಲ ಸುತ್ತಿನ ಪಂದ್ಯಗಳಲ್ಲಿ ಅದಿತ್, ಮಂದೀಪ್, ರಿಷಿ ವಂದನ್, ಅಶ್ವಿನ್, ಜಾಸನ್ ಹಾಗೂ ಬಾಲಕಿಯರ ವಿಭಾಗದಲ್ಲಿ ಸುಹಿತಾ, ಕಶಿಶ್, ಸುರಭಿ, ಸಾಯಿ ಜಾನವಿ, ಪ್ರೇಶಾ, ಅತ್ಮಿಕಾ, ಗಂಗಾ, ವನ್ಯಾ ಗೆಲುವು ಪಡೆದು ಮುಂದಿನ ಸುತ್ತಿಗೇರಿದರು. ಶನಿವಾರ ಕ್ವಾರ್ಟರ್ ಹಾಗೂ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.