ಪ್ರತಿ ಕ್ರೀಡೆಗಳಲ್ಲಿ ಅದರದ್ದೇ ಅಪಾಯವಿದೆ. ಆದರೆ ಬಾಕ್ಸಿಂಗ್, ರಸ್ಲಿಂಗ್, ಪವರ್ ಲಿಫ್ಟಿಂಗ್ ಕ್ರೀಡೆಗಳಲ್ಲಿ ಅಪಾಯದ ಪ್ರಮಾಣ ಹೆಚ್ಚು. ಇದೀಗ 900 ಪೌಂಡ್ ತೂಕ ಎತ್ತುವ ಪ್ರಯತ್ನದಲ್ಲಿದ್ದ ಪವರ್ ಲಿಫ್ಟರ್ ಮೊಣಕಾಲು ಮುರಿತಕ್ಕೊಳಗಾದ ಘಟನೆ ನಡೆದಿದೆ.

ರಷ್ಯಾ(ಆ.14): ಪವರ್ ಲಿಫ್ಟಿಂಗ್ ಅಪಾಯಕಾರಿ ಕ್ರೀಡೆ. ಘನ ಘಾತ್ರದ ಭಾರ ಎತ್ತುವ ಈ ಸ್ಪರ್ಧೆಯಲ್ಲಿ ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಕತ್ತು, ಸೊಂಟ, ಬೆನ್ನು ಮೂಳೆಗಳೇ ಮುರಿದಿದೆ. ಇದೀಗ ರಷ್ಯಾದ ಪವರ್ ಲಿಫ್ಟರ್ ಅಲೆಕ್ಸಾಂಡರ್ ಸಿದ್ದಿಕ್ ಮೊಣಕಾಲು ಮುರಿತಕ್ಕೊಳಗಾದ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್‌ನಲ್ಲಿ ದಾಖಲೆ; 5 ಚಿನ್ನ ಗೆದ್ದ ಆರತಿ ಅರುಣ್!.

900 ಪೌಂಡ್ ಭಾರ ಎತ್ತುವ ಪ್ರಯತ್ನದಲ್ಲಿದ್ದ ಅಲೆಕ್ಸಾಂಡರ್‌ಗೆ ಆಘಾತ ಕಾದಿತ್ತು ಲಿಫ್ಟ್ ಮಾಡಿ ಪೊಸಿಶನ್ ಬರುವಷ್ಟರಲ್ಲಿ ಅಲೆಕ್ಸಾಂಡರ್‌ ಅತೀಯಾದ ಭಾರದಿಂದ ನೆಲಕ್ಕೆ ಕುಸಿದಿದ್ದಾರೆ. ಈ ವೇಳೆ ಪವರ್ ಲಿಫ್ಟ್ ಸ್ಕಾಟ್‌ನೊಂದಿಗೆ ನೆಲಕ್ಕೆ ಕುಸಿದ ಪರಿಣಾಮ ಎರಡೂ ಮೊಣಕಾಲು ಮುರಿದಿದೆ.

Scroll to load tweet…

ತಕ್ಷಣವೇ ತಜ್ಞ ವೈದ್ಯರ ತಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಸತತ 6 ಗಂಟೆಗಳ ಶಸ್ತ್ರ ಚಿಕಿತ್ಸೆ ಮೂಲಕ ಮುರಿತಕ್ಕೊಳಗಾದ ಮೊಣಕಾಲಿನ ಸರ್ಜರಿ ಮಾಡಲಾಗಿದೆ. ಮೊಣಕಾಲು ಮುರಿತ ಕಾರಣ ಕನಿಷ್ಠ 2 ತಿಂಗಳು ಅಲುಗಾಡದಂತೆ ಸೂಚಿಸಿದ್ದಾರೆ. ಪತ್ನಿಗೆ ಆಘಾತವಾಗಿದೆ. ಅಭಿಮಾನಿಗಳು, ಕ್ರೀಡಾ ಆಸಕ್ತರು ನೊಂದಿದ್ದಾರೆ. ಇದು ಕೆಟ್ಟ ಸಮಯ ಎಂದು ಅಲೆಕ್ಸಾಂಡರ್ ಸರ್ಜರಿ ಬಳಿಕ ಪ್ರತಿಕ್ರಿಯಿಸಿದ್ದಾರೆ.