ಸಿನ್ಸಿನಾಟಿ ಓಪನ್: ಮೊದಲ ಸುತ್ತಿನಲ್ಲೇ ಬೋಪಣ್ಣ ಜೋಡಿಗೆ ಸೋಲು
ಸಿನ್ಸಿನಾಟಿ ಓಪನ್ ಪುರುಷರ ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಬೋಪಣ್ಣ, ಮೊದಲ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಮಾರ್ಸೆಲ್ ಹಾಗೂ ಅರ್ಜೆಂಟೀನಾದ ಜೆಬಲೊಸ್ ಜೋಡಿ ವಿರುದ್ಧ 4-6, 6-7 ಸೆಟ್‌ಗಳಲ್ಲಿ ಸೋಲು ಕಂಡರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನ್ಯೂಯಾರ್ಕ್(ಆ.25): 5 ತಿಂಗಳ ಬಳಿಕ ಮೊದಲ ಬಾರಿಗೆ ಸ್ಪರ್ಧಾತ್ಮಕ ಟೆನಿಸ್ ಪಂದ್ಯದಲ್ಲಿ ಆಡಿದ ಭಾರತದ ತಾರಾ ಟೆನಿಸಿಗ ರೋಹನ್ ಬೋಪಣ್ಣ ಸೋಲು ಅನುಭವಿಸಿದ್ದಾರೆ.
ಕೆನಡಾದ ಡೆನಿಸ್ ಶಾಪೊವಲೊವ್ ಜೊತೆ ಸಿನ್ಸಿನಾಟಿ ಓಪನ್ ಪುರುಷರ ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಬೋಪಣ್ಣ, ಮೊದಲ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಮಾರ್ಸೆಲ್ ಹಾಗೂ ಅರ್ಜೆಂಟೀನಾದ ಜೆಬಲೊಸ್ ಜೋಡಿ ವಿರುದ್ಧ 4-6, 6-7 ಸೆಟ್‌ಗಳಲ್ಲಿ ಸೋಲು ಕಂಡರು.
ಇದು ಮಾರ್ಚ್‌ನಲ್ಲಿ ಕ್ರೋವೇಷಿಯಾ ವಿರದ್ದ ನಡೆದ ಡೇವಿಸ್ ಕಪ್ ಬಳಿಕ ರೋಹನ್ ಆಡುತ್ತಿರುವ ಮೊದಲ ಸ್ಫರ್ಧಾತ್ಮಕ ಟೂರ್ನಿ ಇದಾಗಿತ್ತು. ಡೇವಿಸ್ ಕಪ್ ಟೂರ್ನಿಯಲ್ಲಿ ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರೊಂದಿಗೆ ಬೋಪಣ್ಣ ಕಣಕ್ಕಿಳಿದಿದ್ದರು.
ಜಾವಲಿನ್ ಪಟು ನೀರಜ್‌ಗಿಲ್ಲ ಖೇಲ್ ರತ್ನ: ನೆಟ್ಟಿಗರ ಆಕ್ಷೇಪ..!
ಇದೊಂದು ತುಂಬಾ ಕ್ಲೋಸ್ ಆದ ಮ್ಯಾಚ್ ಆಗಿ ಬದಲಾಯಿತು. ಇಂದಿನ ಪ್ರದರ್ಶನ ನನಗೆ ಸಮಾಧಾನ ನೀಡಿದೆ. ಅದರಲ್ಲೂ 5 ತಿಂಗಳುಗಳ ಬಳಿಕ ನೇರವಾಗಿ ಟೂರ್ನಮೆಂಟ್‌ಗೆ ಬಂದಿದ್ದೆವು. ನಾವು ಒಳ್ಳೆಯ ತಂಡದ ವಿರುದ್ಧ ಉತ್ತಮ ಹೋರಾಟವನ್ನೇ ನೀಡಿದ್ದೇವೆಂದು ಬೋಪಣ್ಣ ಪಿಟಿಐಗೆ ಹೇಳಿಕೆ ನೀಡಿದ್ದಾರೆ.
ಆಗಸ್ಟ್ 31ರಿಂದ ನ್ಯೂಯಾರ್ಕ್‌ನಲ್ಲಿ ಯುಎಸ್ ಓಪನ್ ಗ್ರ್ಯಾಂಡ್‌ಸ್ಲಾಂ ಆರಂಭಗೊಳ್ಳಲಿದ್ದು, ಈ ಟೂರ್ನಿ ಪೂರ್ವಭಾವಿ ಅಭ್ಯಾಸಕ್ಕಾಗಿ ನಡೆಯುತ್ತಿದೆ.