ಯುವ ಪ್ರತಿಭಾನ್ವಿತ ಕುಸ್ತಿಪಟು ರಿತಿಕಾ ಪೋಗತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಿತಿಕಾ ಮೃತದೇಹ ದಿಗ್ಗಜ ಕುಸ್ತಿಪಟು ಮಹವೀರ್ ಸಿಂಗ್ ಪೋಗತ್ ಮನೆಯಲ್ಲಿ ಪತ್ತೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಸೊನೆಪತ್‌(ಮಾ.18): ಖ್ಯಾತ ಕುಸ್ತಿಪಟುಗಳಾದ ಗೀತಾ ಹಾಗು ಬಬೀತಾ ಸೋದರ ಸಂಬಂಧಿ 17 ವರ್ಷದ ರಿತಿಕಾ ಪೋಗತ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಭರತ್‌ಪುರದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯ ಫೈನಲ್‌ನಲ್ಲಿ ಸೋಲು ಕಂಡ ಬೆನ್ನಲ್ಲೇ ರಿತಿಕಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಿತಿಕಾ ಸ್ಟೇಟ್‌ ಲೆವೆಲ್‌ ಸಬ್‌ ಜೂನಿಯರ್ ಹಾಗೂ ಜೂನಿಯರ್ ವುಮೆನ್‌ ಕುಸ್ತಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.

ಕುಸ್ತಿಪಟುವಾಗಿದ್ದ ರಿತಿಕಾ ಮಾರ್ಚ್‌ 17ರಂದು ಸಾವನ್ನಪ್ಪಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ. ರಾಜಸ್ಥಾನದಲ್ಲಿ ನಡೆದ ಟೂರ್ನಿಯಲ್ಲಿ ಸೋಲೊಪ್ಪಿಕೊಂಡ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಊಹಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಹರ್ಯಾಣದ ಚಾರ್ಕಿ ದಾದ್ರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮ್‌ ಸಿಂಗ್ ಬಿಷ್ಣೋಯಿ ತಿಳಿಸಿದ್ದಾರೆ.

ಎರಡೇ ವಾರದಲ್ಲಿ ಎರಡನೇ ಚಿನ್ನ ಗೆದ್ದ ವಿನೇಶ್ ಪೋಗತ್; ಅಗ್ರಸ್ಥಾನಕ್ಕೆ ಲಗ್ಗೆ!

ಕಿರಿಯ ಸಹೋದರಿ ರಿತಿಕಾ ಆತ್ಮಕ್ಕೆ ಶಾಂತಿ ಸಿಗಲಿ. ನಿನ್ನ ಜೀವನ ಹೀಗೆ ಕೊನೆಯಾಗುತ್ತದೆ ಎಂದು ನಾನು ಊಹಿಸಿಯೂ ಇರಲಿಲ್ಲ. ನನಗೆ ಇಂದು ಬೆಳಗ್ಗೆ ಈ ದುರ್ಘಟನೆ ನಡೆದ ಬಗ್ಗೆ ವಿಷಯ ತಿಳಿಯಿತು. ಇಂತಹ ಸಂಕಷ್ಟದ ಸಮಯದಲ್ಲಿ ಜನರು ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ. ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ರಿತು ಪೋಗತ್‌ ಟ್ವೀಟ್‌ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಮಾರ್ಚ್‌ 12ರಿಂದ 14ರವರೆಗೆ ನಡೆದ ರಾಜ್ಯಮಟ್ಟದ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ರಿತಿಕಾ ಸೋಲು ಕಂಡ ಬಳಿಕ ಸಾಕಷ್ಟು ನಿರಾಸೆಗೆ ಒಳಗಾಗಿದ್ದರು ಎನ್ನಲಾಗಿದೆ.

Scroll to load tweet…
Scroll to load tweet…

ಪ್ರಾಥಮಿಕ ವರದಿಯ ಪ್ರಕಾರ, ರಿತಿಕಾ ಪೋಗತ್ ಮೃತದೇಹ, ಖ್ಯಾತ ಕುಸ್ತಿಪಟು ಮಹಾವೀರ್ ಸಿಂಗ್ ಪೋಗತ್ ಮನೆಯಲ್ಲಿ ಪತ್ತೆಯಾಗಿತ್ತು.