ಡಕಾರ್ ರ‍್ಯಾಲಿ: ಅಮೆರಿಕದ ರಿಕಿ ಬ್ರಬೆಕ್‌ಗೆ ಪ್ರಶಸ್ತಿ
ಡಕಾರ್ ರ‍್ಯಾಲಿಯಲ್ಲಿ ಹೋಂಡಾ ತಂಡ ಬರೋಬ್ಬರಿ 31 ವರ್ಷಗಳ ಬಳಿಕ ಪ್ರಶಸ್ತಿ ಜಯಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ರಿಯಾದ್(ಜ.19): 12ನೇ ಹಂತದ ಡಕಾರ್ ರ‍್ಯಾಲಿಯಲ್ಲಿ ಖ್ಯಾತ ರೈಡರ್ ಅಮೆರಿಕ ಮೂಲದ ರಿಕಿ ಬ್ರಬೆಕ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 1989ರ ಬಳಿಕ ಹೋಂಡಾ ಪ್ರತಿಷ್ಠಿತ ರ‍್ಯಾಲಿಯಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
28 ವರ್ಷ ವಯಸ್ಸಿನ ಬ್ರಬೆಕ್ 2016ರಲ್ಲಿ ಟೀಮ್ ಎಚ್‌ಆರ್‌ಸಿ ಪರ ಮೊದಲ ಬಾರಿಗೆ ಡಕಾರ್ ರ‍್ಯಾಲಿಯಲ್ಲಿ ಸ್ಪರ್ಧಿಸಿದ್ದರು. ಇದೀಗ 5ನೇ ಬಾರಿಗೆ ಗೆಲುವಿನೊಂದಿಗೆ ಹೊಸ ಇತಿಹಾಸ ಬರೆದಿದ್ದಾರೆ.
ಡಕಾರ್: ಅಪಘಾತದಲ್ಲಿ ಸವಾರ ಪೌಲೋ ಸಾವು!
ಹೋಂಡಾ ತಂಡ ಡಕಾರ್ ರ‍್ಯಾಲಿಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದು 1981ರಲ್ಲಿ. 1986ರ ಆವೃತ್ತಿಯಲ್ಲಿ ಹೋಂಡಾ ಮೊದಲ ಬಾರಿಗೆ ಕಿರೀಟ ಎತ್ತಿ ಹಿಡಿದಿತ್ತು. ಈಗಾಗಲೇ ಮೂರು ಬಾರಿ ಈ ಪ್ರಶಸ್ತಿ ಬಾಚಿಕೊಂಡಿರುವ ಹೋಂಡಾ ಇದೀಗ ನಾಲ್ಕನೇ ಬಾರಿಗೆ ಪ್ರಶಸ್ತಿ ಸಾಧನೆ ಮಾಡಿದೆ.