ರಿಯಾದ್‌(ಜ.13): ವಿಶ್ವದ ಅತ್ಯಂತ ಕಠಿಣ ಮೋಟಾರ್‌ ರ‍್ಯಾಲಿ ಡಕಾರ್‌ನಲ್ಲಿ ಅಹಿತಕರ ಘಟನೆಯೊಂದು ಸಂಭವಿಸಿದೆ. 

ಗಿಲ್‌ ಕಾರಿಗೆ ಅಡ್ಡ ಬಂದ ಮೂವರ ದುರ್ಮ​ರ​ಣ

ಪೋರ್ಚುಗಲ್‌ನ ಅನುಭವಿ ಸವಾರ ಪೌಲೋ ಗೊಂಕಾಲ್ವೆಸ್‌ ಭಾನುವಾರ ಅಪಘಾತಕ್ಕೊಳಗಾಗಿ ಹೃದಾಯಾಘಾತದಿಂದ ಸಾವನ್ನಪ್ಪಿದ್ದಾರೆ. 13ನೇ ಬಾರಿಗೆ ಡಕಾರ್‌ ರಾರ‍ಯಲಿಯಲ್ಲಿ ಪಾಲ್ಗೊಂಡಿದ್ದ ಅವರು 4 ಬಾರಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದರು. 2015ರಲ್ಲಿ ರನ್ನರ್‌-ಅಪ್‌ ಪ್ರಶಸ್ತಿ ಸಹ ಗೆದ್ದಿದ್ದರು. 

40 ವರ್ಷದ ಪೌಲೋ, ಭಾರತದ ಹೀರೋ ಮೋಟಾರ್‌ಸ್ಪೋರ್ಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು. 7ನೇ ಸ್ಟೇಜ್‌ನಲ್ಲಿ 276 ಕಿ.ಮೀ ಕ್ರಮಿಸಿದ ಬಳಿಕ ಅಪಘಾತಕ್ಕೀಡಾದರು. ತಕ್ಷಣ ಅವರನ್ನು ಕರೆತರಲು ಹೆಲಿಕಾಪ್ಟರ್‌ ಕಳುಹಿಸಲಾಯಿತು. ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಅವರು ಹೃದಯಾಘಾತದಿಂದ ಪ್ರಾಣಬಿಟ್ಟಿದ್ದರು ಎಂದು ಆಯೋಜಕರು ತಿಳಿಸಿದ್ದಾರೆ.