ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲು, ಮೇಜರ್ ಧ್ಯಾನ್ ಚಂದ್ಗೆ ಪ್ರಧಾನಿ ಮೋದಿ ಗೌರವ
* ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲು
* ಇನ್ನು ಮುಂದೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಕರೆಸಿಕೊಳ್ಳಲಿದೆ
* ಪ್ರಧಾನಿ ನರೇಂದ್ರ ಮೋದಿಯಿಂದ ಮಹತ್ವದ ಘೋಷಣೆ
ನವದೆಹಲಿ(ಆ.06): ಭಾರತೀಯ ಕ್ರೀಡಾಪಟುಗಳಿಗೆ ನೀಡಲಾಗುವ ದೇಶದ ಅತ್ಯನ್ನತ ಕ್ರೀಡಾಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ(ಆ.06)ವಾದ ಇಂದು ಮರು ನಾಮಕರಣ ಮಾಡಿದ್ದಾರೆ. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಹಾಕಿ ದಿಗ್ಗಜ ಧ್ಯಾನ್ ಚಂದ್ ಸ್ಮರಣಾರ್ಥ, ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಹೆಸರು ಬದಲಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಖೇಲ್ ರತ್ನ ಪ್ರಶಸ್ತಿಗೆ ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನಿಡಿ ಎಂದು ದೇಶದ ನಾನು ಮೂಲೆಗಳಿಂದ ನಾಗರಿಕರು ಮನವಿ ಮಾಡಿಕೊಂಡಿದ್ದರು. ಅವರ ಅಭಿಪ್ರಾಯಗಳಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅವರ ಭಾವನೆಗಳಿಗೆ ಬೆಲೆಕೊಟ್ಟು ಖೇಲ್ ರತ್ನ ಪ್ರಶಸ್ತಿಯು ಇನ್ನು ಮುಂದೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಕರೆಸಿಕೊಳ್ಳಲಿದೆ. ಜೈ ಹಿಂದ್ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು 1991-1992ರಿಂದ ನೀಡಲಾಗುತ್ತಿದೆ. ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಕ್ರೀಡಾಪಟು ಎನಿಸಿದ್ದಾರೆ. ವಿಶ್ವನಾಥ್ ಮಾತ್ರವಕ್ಕದೇ ಲಿಯಾಂಡರ್ ಪೇಸ್, ಸಚಿನ್ ತೆಂಡುಲ್ಕರ್, ಧನರಾಜ್ ಪಿಳ್ಳೈ, ಪುಲ್ಲೇಲಾ ಗೋಪಿಚಂದ್, ಅಭಿನವ್ ಬಿಂದ್ರಾ, ಅಂಜು ಬಾಬಿ ಬಾಬಿ ಜಾರ್ಜ್, ಮೇರಿ ಕೋಮ್ ಹಾಗೂ ಕಳೆದ ವರ್ಷ ಅಂದರೆ 2020ರಲ್ಲಿ ರೋಹಿತ್ ಶರ್ಮಾ, ರಾಣಿ ರಾಂಪಾಲ್ ಸೇರಿ ಐವರು ಕ್ರೀಡಾಪಟುಗಳು ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು.
Tokyo 2020 ನಿಮ್ಮ ಛಲದ ಆಟ ಕಿರಿಯರಿಗೆ ಸ್ಪೂರ್ತಿ: ರಾಣಿ ಪಡೆಗೆ ಪ್ರಧಾನಿ ಮೋದಿ ಶಹಬ್ಬಾಶ್
ಭಾರತ ಕಂಡ ದಿಗ್ಗಜ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ 1926ರಿಂದ 1949ರವರೆಗೆ ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳನ್ನಾಡುವ ಮೂಲಕ ವಿಶ್ವವಿಖ್ಯಾತರಾಗಿದ್ದರು. ಅಲಹಾಬಾದ್‌ನಲ್ಲಿ ಜನಿಸಿದ್ದ ಮೇಜರ್ ಧ್ಯಾನ್ ಚಂದ್ ತಮ್ಮ ವೃತ್ತಿಜೀವನಲ್ಲಿ 400ಕ್ಕೂ ಅಧಿಕ ಹಾಕಿ ಗೋಲುಗಳನ್ನು ಬಾರಿಸಿದ್ದಾರೆ. 1928, 1932 ಹಾಗೂ 1936ರ ಒಲಿಂಪಿಕ್ಸ್‌ನಲ್ಲಿ ಹಾಕಿ ಕ್ರೀಡೆಯಲ್ಲಿ ಭಾರತ ಚಿನ್ನದ ಪದಕ ಗೆಲ್ಲುವಲ್ಲಿ ಧ್ಯಾನ್ ಚಂದ್ ಮಹತ್ವದ ಪಾತ್ರ ನಿಭಾಯಿಸಿದ್ದರು.