ಪ್ಯಾರಿಸ್‌(ಅ.23): ಭಾರತದ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಶುಭಾಂಕರ್‌ ಡೇ, ಮಂಗಳವಾರದಿಂದ ಇಲ್ಲಿ ಆರಂಭವಾಗಿರುವ ಪ್ಯಾರಿಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ವಿಶ್ವ ಚಾಂಪಿಯನ್‌ ಸಿಂಧು, ಕೆನಡಾದ ಮಿಷೆಲ್‌ ಲೀ ವಿರುದ್ಧ 21-15, 21-13 ಗೇಮ್‌ಗಳಲ್ಲಿ ಜಯ ಪಡೆದರು. 

ಇದನ್ನೂ ಓದಿ: ಸೈನಾ ವೀಸಾ ಸಮಸ್ಯೆಗೆ ನೆರವಾದ ಗೃಹ ಸಚಿವಾಲಯ

ಕೇವಲ 44 ನಿಮಿಷಗಳಲ್ಲಿ ಸಿಂಧು ಪಂದ್ಯ ಜಯಿ​ಸಿ​ದರು. 2ನೇ ಸುತ್ತಿನಲ್ಲಿ ಸಿಂಧುಗೆ ವಿಶ್ವ ನಂ.26 ಸಿಂಗಾಪುರದ ಜಿಯಾ ಮಿನ್‌ ಎದು​ರಾ​ಗ​ಲಿ​ದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ ಬಳಿಕ 3 ಟೂರ್ನಿಗಳಲ್ಲಿ ಸಿಂಧು ಆರಂಭಿಕ ಸುತ್ತು​ಗ​ಳಲ್ಲೇ ಸೋಲು ಕಂಡಿ​ದ್ದರು.

ಇದನ್ನೂ ಓದಿ: ಕೇರಳ ದೇವಸ್ಥಾನಕ್ಕೆ ಭೇಟಿ: ಸಾಂಪ್ರದಾಯಿಕ ಲುಕ್ ನಲ್ಲಿ ಕಂಗೊಳಿಸಿದ ಸಿಂಧು

ಶುಭಾಂಕರ್‌ 2ನೇ ಸುತ್ತಿಗೆ: 
ಪುರು​ಷರ ಸಿಂಗಲ್ಸ್‌ ಮೊದಲ ಸುತ್ತಿ​ನಲ್ಲಿ ಶುಭಾಂಕರ್‌ ಡೇ, ವಿಶ್ವ ನಂ.17 ಇಂಡೋನೇಷ್ಯಾದ ಟಾಮಿ ಸುಗಿಯಾರ್ಟೊ ವಿರುದ್ಧ 15-21, 21-14, 21-17 ಗೇಮ್‌ಗಳಲ್ಲಿ ಅಚ್ಚರಿ ಗೆಲುವು ಪಡೆದರು. 2ನೇ ಸುತ್ತಿನಲ್ಲಿ ಶುಭಾಂಕರ್‌, ಇಂಡೋನೇಷ್ಯಾದ ಶೆಸರ್‌ ಹಿರೆನ್‌ ವಿರುದ್ಧ ಆಡ​ಲಿ​ದ್ದಾರೆ. ಕೆ.ಶ್ರೀಕಾಂತ್‌, ಪಿ,ಕ​ಶ್ಯಪ್‌, ಸೈನಾ ನೆಹ್ವಾಲ್‌ ಬುಧ​ವಾರ ತಮ್ಮ ಮೊದಲ ಸುತ್ತಿನ ಪಂದ್ಯ​ವ​ನ್ನಾ​ಡ​ಲಿ​ದ್ದಾ​ರೆ.