ಬ್ಯಾಂಕಾಕ್(ಜ.12)‌: ಕೊರೋನಾ ಹಿನ್ನೆಲೆಯಲ್ಲಿ ಸುಮಾರು 10 ತಿಂಗಳ ಬಳಿಕ ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್‌, ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ ಟೂರ್ನಿಗೆ ಮರಳುತ್ತಿದ್ದಾರೆ. 

ಮಂಗಳವಾರ (ಜ.12)ದಿಂದ ಇಲ್ಲಿ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಒತ್ತಡದಲ್ಲಿರುವ ಭಾರತೀಯ ಶಟ್ಲರ್‌ಗಳಿಗೆ ಚೀನಾ, ಜಪಾನ್‌ನ ಕೆಲ ಪ್ರಮುಖ ಶಟ್ಲರ್‌ಗಳ ಅನುಪಸ್ಥಿತಿ ನೆರವಾಗಲಿದೆ. 

2021ರ ವಿಶ್ವ ಬ್ಯಾಡ್ಮಿಂಟನ್: 6 ತಿಂಗಳ ವೇಳಾಪಟ್ಟಿ ಪ್ರಕಟ

ಪುರುಷರ ಸಿಂಗಲ್ಸ್‌ನಲ್ಲಿ ಕೆ.ಶ್ರೀಕಾಂತ್‌, ಸಾಯಿ ಪ್ರಣೀತ್‌, ಪ್ರಣಯ್‌, ಸೌರಭ್‌ ವರ್ಮಾ, ಸಮೀರ್‌ ವರ್ಮಾ, ಡಬಲ್ಸ್‌ನಲ್ಲಿ ಸಾತ್ವಿಕ್‌, ಚಿರಾಗ್‌ ಶೆಟ್ಟಿ, ಮನು ಅತ್ರಿ, ಸುಮಿತ್‌ ರೆಡ್ಡಿ, ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು, ಸೈನಾ, ಡಬಲ್ಸ್‌ನಲ್ಲಿ ಅಶ್ವಿನಿ, ಸಿಕ್ಕಿ ರೆಡ್ಡಿ ಕಣದಲ್ಲಿದ್ದಾರೆ.