ನವದೆಹಲಿ(ಡಿ.23): ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯೂಎಫ್‌) 2021ರ ಮೊದಲಾರ್ಧದ ವೇಳಾಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಜನವರಿಯಿಂದ ಮೇ ತಿಂಗಳವರೆಗೂ ಟೋಕಿಯೋ ಒಲಿಂಪಿಕ್‌ ಅರ್ಹತಾ ಸುತ್ತಿನ ಟೂರ್ನಿಗಳು ಸತತವಾಗಿ ನಡೆಯಲಿವೆ. 

ಕೊರೋನಾದಿಂದಾಗಿ 2020ರಲ್ಲಿ ನಿಗದಿಯಾಗಿದ್ದ ಟೂರ್ನಿಗಳು ರದ್ದಾಗಿದ್ದು, ಮುಂದಿನ ವರ್ಷ ಕೆಲ ಟೂರ್ನಿಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. 2ನೇ ದರ್ಜೆ ಟೂರ್ನಿಗಳನ್ನು ರದ್ದುಗೊಳಿಸಲಾಗಿದೆ. 

ಕೊರೋನಾ ಬಳಿಕ ಸಿಂಧು, ಸೈನಾ ದೇಶದ ಪರ ಒಟ್ಟಿಗೆ ಸ್ಪರ್ಧಾ ಕಣಕ್ಕೆ

ಜನವರಿ 27 ರಿಂದ 31 ರವರೆಗೆ ನಡೆಯಲಿರುವ ಬಿಡಬ್ಲ್ಯೂಎಫ್‌ ವಿಶ್ವ ಟೂರ್‌ ಫೈನಲ್ಸ್‌, ಮಾರ್ಚ್2 ರಿಂದ 7 ರವರಗೆ ಸ್ವಿಸ್‌ ಓಪನ್‌, ಮಾರ್ಚ್ 9 ರಿಂದ 14 ರವರೆಗೆ ಜರ್ಮನಿ ಓಪನ್‌ ಹಾಗೂ ಮೇ 11ರಿಂದ 16 ರವರೆಗೆ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಗಳನ್ನು ಆಯೋಜಿಸಲಾಗಿದೆ. ಒಲಿಂಪಿಕ್‌ ಅರ್ಹತಾ ಸುತ್ತಿಗೆ ಇಂಡಿಯಾ ಓಪನ್‌ ಕೊನೆಯ ಟೂರ್ನಿಯಾಗಿದೆ ಎಂದು ಬಿಡಬ್ಲ್ಯೂಎಫ್‌ ಹೇಳಿದೆ.