ಥಾಯ್ಲೆಂಡ್‌ ಓಪನ್‌: ಸಿಂಧು, ಶ್ರೀಕಾಂತ್‌ಗೆ ಜಯ

ಥಾಯ್ಲೆಂಡ್ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಬ್ಯಾಡ್ಮಿಂಟನ್ ಪಟುಗಳಾದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ ಭರ್ಜರಿ ಶುಭಾರಂಭ ಮಾಡುವ ಮೂಲಕ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

PV Sindhu K Srikanth Cruises Into Second Round at Thailand Open kvn

ಬ್ಯಾಂಕಾಕ್(ಜ.20)‌: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಕೆ.ಶ್ರೀಕಾಂತ್‌, ಇಲ್ಲಿ ಮಂಗಳವಾರದಿಂದ ಆರಂಭವಾದ ಥಾಯ್ಲೆಂಡ್‌ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಸೈನಾ ನೆಹ್ವಾಲ್‌, ಮೊದಲ ಸುತ್ತಲ್ಲಿ ಸೋತು ಹೊರಬಿದ್ದಿದ್ದಾರೆ.

ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಲ್ಲಿ ಸಿಂಧು, ವಿಶ್ವ ನಂ.12 ಥಾಯ್ಲೆಂಡ್‌ನ ಬುಸ್ನಾನ್‌ ವಿರುದ್ಧ 21-17, 21-13 ರಿಂದ ಗೆಲುವು ಪಡೆದರು. ಮತ್ತೊಂದು ಸಿಂಗಲ್ಸ್‌ನಲ್ಲಿ ಸೈನಾ, ಮಾಜಿ ವಿಶ್ವ ಚಾಂಪಿಯನ್‌ ಇಂಟಾನಾನ್‌ ವಿರುದ್ಧ 17-21, 8-21 ರಿಂದ ಸೋಲುಂಡರು. ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌, ಸಿಥಿಕೋಮ್‌ ತಮ್ಮಾಸಿನ್‌ ಎದುರು 21-11, 21-11 ರಿಂದ ಜಯ ಪಡೆದರು.

ಆಸ್ಪ್ರೇಲಿಯನ್‌ ಓಪನ್‌: 72 ಟೆನಿಸಿಗರು ಕ್ವಾರಂಟೈನ್‌!

ಮತ್ತೊಂದು ಪಂದ್ಯದಲ್ಲಿ ಸಮೀರ್‌ ವರ್ಮಾ, ವಿಶ್ವ ನಂ.10 ಲೀ ಜೀ ಜಿಯಾ ವಿರುದ್ಧ 18-21, 27-25, 21-19 ರಿಂದ ಅಚ್ಚರಿಯ ಗೆಲುವಿನೊಂದಿಗೆ 2ನೇ ಸುತ್ತಿಗೇರಿದರು. ಉಳಿದಂತೆ ಪಿ.ಕಶ್ಯಪ್‌ ಮೊದಲ ಸುತ್ತಲ್ಲಿ ನಿವೃತ್ತಿ ಪಡೆದರೆ, ಸೌರಭ್‌ ಸೋತರು.
 

Latest Videos
Follow Us:
Download App:
  • android
  • ios