ಆಸ್ಪ್ರೇಲಿಯನ್‌ ಓಪನ್‌: 72 ಟೆನಿಸಿಗರು ಕ್ವಾರಂಟೈನ್‌!

ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿಗೆ ಸಜ್ಜಾಗಿದ್ದ 72 ಟೆನಿಸ್ ಆಟಗಾರರು ಇದೀಗ ಕೊರೋನಾ ಭೀತಿಗೆ ಸಿಲುಕಿದ್ದು, ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Australian Open Tournament 72 tennis players in Quarantine after coronavirus cases on flights kvn

ಮೆಲ್ಬರ್ನ್‌(ಜ.19): ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಆಡಲು ಮೆಲ್ಬರ್ನ್‌ಗೆ ತೆರಳಿರುವ ಟೆನಿಸಿಗರ ಪೈಕಿ ಕಠಿಣ ಕ್ವಾರಂಟೈನ್‌ಗೆ ಒಳಪಟ್ಟ ಟೆನಿಸಿಗರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ. 

ಆಟಗಾರರನ್ನು ಕರೆತಂದ ಮತ್ತೊಂದು ವಿಮಾನದಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿರುವು ಕಾರಣ ಆಟಗಾರರನ್ನು ಪ್ರಾಥಮಿಕ ಸಂಪರ್ಕಿತರು ಎಂದು ಗುರುತಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. 

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್: ಭಾರತದ ಸವಾಲು ಅಂತ್ಯ

ಆಟಗಾರರು ತಾವು ಉಳಿದುಕೊಂಡಿರುವ ಹೋಟೆಲ್‌ಗಳಲ್ಲಿ ಕಠಿಣ ನಿಯಮ ವಿಧಿಸಲಾಗಿದೆ. ಅನಗತ್ಯವಾಗಿ ತಮ್ಮ ಕೊಠಡಿಯ ಬಾಗಿಲು ತೆರೆದರೆ 20,000 ಆಸ್ಪ್ರೇಲಿಯನ್‌ ಡಾಲರ್‌ (11 ಲಕ್ಷ ರು.) ದಂಡ ವಿಧಿಸುವುದಾಗಿ ಆಟಗಾರರಿಗೆ ಆಯೋಜಕರು ಎಚ್ಚರಿಸಿದ್ದಾರೆ.

ಇಂದಿನಿಂದ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ

ಬ್ಯಾಂಕಾಕ್‌: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್‌, ಮಂಗಳವಾರದಿಂದ ಇಲ್ಲಿ ಆರಂಭವಾಗಲಿರುವ ಥಾಯ್ಲೆಂಡ್‌ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. 

ಕಳೆದ ವಾರ ನಡೆದಿದ್ದ ಏಷ್ಯಾ ಹಂತದ ಮೊದಲ ಟೂರ್ನಿಯಲ್ಲಿ ಭಾರತದ ಶಟ್ಲರ್‌ಗಳು ನೀರಸ ಪ್ರದರ್ಶನ ತೋರಿದ್ದರು. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ಮೂಲಕ ಫಾರ್ಮ್‌ಗೆ ಮರಳುವ ಉತ್ಸಾಹದಲ್ಲಿ ಭಾರತದ ಶಟ್ಲರ್‌ಗಳಿದ್ದಾರೆ. ಸಿಂಧು, ಮೊದಲ ಸುತ್ತಲ್ಲಿ ವಿಶ್ವ ನಂ.12 ಥಾಯ್ಲೆಂಡ್‌ನ ಬುಸ್ನಾನ್‌ರನ್ನು ಎದುರಿಸಿದರೆ, ಸೈನಾ, 4ನೇ ಶ್ರೇಯಾಂಕಿತೆ ರಚನಾಕ್‌ ಇಂಟನಾನ್‌ ಎದುರು ಸೆಣಸಲಿದ್ದಾರೆ. ಉಳಿದಂತೆ ಪುರುಷರ ವಿಭಾಗದಲ್ಲಿ ಶ್ರೀಕಾಂತ್‌, ಪ್ರಣೀತ್‌, ಕಶ್ಯಪ್‌, ಪ್ರಣಯ್‌, ಸೌರಭ್‌ ಹಾಗೂ ಸಮೀರ್‌ ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ.
 

Latest Videos
Follow Us:
Download App:
  • android
  • ios