ಪಾಕಿಸ್ತಾನ ಸೂಪರ್ ಲೀಗ್‌ಗೆ ಮತ್ತೊಂದು ವಿಘ್ನ ಎದುರಾಗಿದ್ದು, 7 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟ ಬೆನ್ನಲ್ಲೇ ಟಿ20 ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ದಿಢೀರ್ ಮುಂದೂಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಕರಾಚಿ(ಮಾ.05): 6 ಆಟಗಾರರು ಸೇರಿ ಒಟ್ಟು 7 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಬಳಿಕ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಟಿ20 ಟೂರ್ನಿಯನ್ನು ಸ್ಥಗಿತಗೊಳಿಲಾಗಿದೆ. 

ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ 6 ಆಟಗಾರರು ಹಾಗೂ ಓರ್ವ ಸಹಾಯಕ ಸಿಬ್ಬಂದಿ ಸೇರಿದಂತೆ 7 ಮಂದಿಗೆ ಕೋವಿಡ್ ಸೋಂಕು ದೃಢಗೊಳ್ಳುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಿಎಸ್‌ಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ತೀರ್ಮಾನ ತೆಗೆದುಕೊಂಡಿದೆ. ಈ ಕುರಿತಂತೆ ಪಿಎಸ್‌ಎಲ್‌ ತಂಡಗಳ ಮಾಲೀಕರ ಜತೆ ಚರ್ಚೆ ನಡೆಸಿ ಆಟಗಾರರ ಆರೋಗ್ಯ ಹಾಗೂ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣದಿಂದಲೇ ಟೂರ್ನಿಯನ್ನು ಮುಂದೂಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಪಿಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

Scroll to load tweet…

ರಾಗ ಬದಲಿಸಿದ ಸ್ಟೇನ್‌, ತಪ್ಪಾಯ್ತು ಕ್ಷಮಿಸಿ ಎಂದ ಆರ್‌ಸಿಬಿ ಮಾಜಿ ವೇಗಿ..!

ಫೆಬ್ರವರಿ 20ರಂದು ಆರಂಭಗೊಂಡಿದ್ದ ಟೂರ್ನಿಯಲ್ಲಿ ಒಟ್ಟು ನಡೆಯಬೇಕಿದ್ದ 34 ಪಂದ್ಯಗಳ ಪೈಕಿ ಕೇವಲ 14 ಪಂದ್ಯಗಳಷ್ಟೇ ಪೂರ್ಣಗೊಂಡಿದ್ದವು. ಬಯೋ ಸೆಕ್ಯೂರ್‌ ವಾತಾವರಣದಲ್ಲಿ ಟೂರ್ನಿ ನಡೆಸುತ್ತಿದ್ದರೂ, ಕೊರೋನಾ ಸಂಕು ತಗುಲಿದ್ದು ಹೇಗೆ ಎನ್ನುವುದನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ತನಿಖೆ ನಡೆಸಲು ಮುಂದಾಗಿದೆ. ಸದ್ಯ ಟೂರ್ನಿಯನ್ನು ಮುಂದೂಡಲಾಗಿದೆ. ಕಳೆದ ವರ್ಷವೂ ಕೋವಿಡ್‌ನಿಂದಾಗಿ ಪಿಎಸ್‌ಎಲ್‌ ಮುಂದೂಡಿಕೆಯಾಗಿತ್ತು.