ಪ್ರೊ ಕಬಡ್ಡಿ ಮಾಧ್ಯಮ ಹಕ್ಕು ಖರೀದಿಗೆ ಟೆಂಡರ್
ಪ್ರೊ ಕಬಡ್ಡಿ ಮಾಧ್ಯಮದ ಹಕ್ಕು ಪಡೆಯಲು ಮಶಾಲ್ ಸ್ಪೋರ್ಟ್ಸ್ ಸಂಸ್ಥೆ ಬಿಡ್ ಆಹ್ವಾನಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಫೆ.26): ಪ್ರೊ ಕಬಡ್ಡಿ ಟೂರ್ನಿಯ 2021-2025ರ ಆವೃತ್ತಿಯ ಮಾಧ್ಯಮ ಹಕ್ಕು ಮಾರಾಟಕ್ಕೆ ಟೂರ್ನಿಯ ಆಯೋಜಕರಾದ ಮಶಾಲ್ ಸ್ಪೋರ್ಟ್ಸ್ ಸಂಸ್ಥೆ ಟೆಂಡರ್ ಆಹ್ವಾನಿಸಿದೆ.
ಮಾಧ್ಯಮ ಹಕ್ಕು ಪಡೆಯಲು ಬಿಡ್ ಸಲ್ಲಿಸಲು ಆಸಕ್ತಿ ಹೊಂದಿರುವ ಸಂಸ್ಥೆಗಳು ಮಾ.12ರೊಳಗೆ ಅರ್ಜಿ ಸ್ವೀಕರಿಸಬೇಕಿದ್ದು, ಅರ್ಜಿ ಸಲ್ಲಿಸಲು ಏ.2ರ ವರೆಗೂ ಸಮಯಾವಕಾಶ ನೀಡಲಾಗಿದೆ. ಏ.5ರಂದು ಆನ್‌ಲೈನ್‌ನಲ್ಲಿ ಮಾಧ್ಯಮ ಹಕ್ಕು ಖರೀದಿಗೆ ಹರಾಜು ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.
ನನಗೆ ದೇಶ ಮೊದಲು, ಐಪಿಎಲ್‌ಗೆ ಕೈ ಕೊಡಲು ಮುಂದಾದ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ..!
ಭಾರತದಲ್ಲಿ ಐಪಿಎಲ್ ಬಳಿಕ ಫ್ರಾಂಚೈಸಿ ಲೀಗ್‌ವೊಂದರ ಮಾಧ್ಯಮ ಹಕ್ಕು ಹರಾಜು ಇದೇ ಮೊದಲ ಬಾರಿಗೆ ನಡೆಯಲಿದೆ. ಉದ್ಘಾಟನಾ ಆವೃತ್ತಿಯಿಂದ 7ನೇ ಆವೃತ್ತಿ ವರೆಗಿನ ಮಾಧ್ಯಮ ಹಕ್ಕು ಸ್ಟಾರ್ ಸಂಸ್ಥೆ ಬಳಿಯಿತ್ತು. ಕೋವಿಡ್ ಕಾರಣದಿಂದಾಗಿ 2020ರಲ್ಲಿ ಟೂರ್ನಿ ನಡೆದಿರಲಿಲ್ಲ.
ಐಎಸ್‌ಎಲ್: ಅಂತಿಮ ಪಂದ್ಯದಲ್ಲಿ ಸೋತ ಬಿಎಫ್‌ಸಿ
ಗೋವಾ: ಐಎಸ್‌ಎಲ್ ಫುಟ್ಬಾಲ್ ಟೂರ್ನಿಯ 7ನೇ ಆವೃತ್ತಿಯಲ್ಲಿ ತಾನಾಡಿದ ಅಂತಿಮ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ 3-2 ಗೋಲುಗಳಿಂದ ಜಮ್ಷೆಡ್‌ಪುರ ಎಫ್‌ಸಿ ವಿರುದ್ಧ ಸೋಲುಂಡಿತು. ಲೀಗ್ ಹಂತದಲ್ಲಿ ಆಡಿದ ಒಟ್ಟು 20 ಪಂದ್ಯಗಳಲ್ಲಿ ಬಿಎಫ್‌ಸಿ ಕೇವಲ 5ರಲ್ಲಿ ಗೆದ್ದು, 8ರಲ್ಲಿ ಸೋತು, 7 ಪಂದ್ಯ ಡ್ರಾ ಮಾಡಿಕೊಂಡಿತು. ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.