Pro Kabaddi League: ಹಾಲಿ ಚಾಂಪಿಯನ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಬೆಂಗಳೂರು ಬುಲ್ಸ್!

ಬೆಂಗಾಲ್ ವಾರಿಯರ್ಸ್ ವಿರುದ್ಧ 1 ಅಂಕದ ಗೆಲುವು
15 ಅಂಕ ಸಂಪಾದಿಸಿದ ಕ್ಯಾಪ್ಟನ್ ಪವನ್ ಶೇರಾವತ್ 
ದಬಾಂಗ್ ದೆಹಲಿ-ಗುಜರಾತ್ ಜೈಂಟ್ಸ್ ನಡುವಿನ ಪಂದ್ಯ ಟೈ

Pro Kabaddi League Season 8 bengaluru bulls beat defending champions bengal warriors san

ಬೆಂಗಳೂರು (ಡಿ. 26): ಸೋಲಿನೊಂದಿಗೆ ಪ್ರೊ ಕಬಡ್ಡಿ ಲೀಗ್ ಸೀಸನ್ 8 ಅನ್ನು (Pro Kabaddi League) ಆರಂಭಿಸಿದ್ದ ಬೆಂಗಳೂರು ಬುಲ್ಸ್  (Bengaluru Bulls)ತಂಡ ಸತತ ಎರಡು ಗೆಲುವಿನೊಂದಿಗೆ ಫಾರ್ಮ್ ಗೆ ಮರಳಿದೆ. ಭಾನುವಾರ ನಡೆದ ಪ್ರಮುಖ ಪಂದ್ಯದಲ್ಲಿ ನಾಯಕ ಪವನ್ ಶೇರಾವತ್ (Pawan Sehrawat ) ಅವರ ಸಾಹಸಿಕ ನಿರ್ವಹಣೆಯೊಂದಿಗೆ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್  Bengal Warriors ) ತಂಡವನ್ನು 1 ಅಂಕದ ಅಂತರದಿಂದ ಮಣಿಸಿದೆ. ದಿನದ ಇನ್ನೊಂದು ಪಂದ್ಯದಲ್ಲಿ ದಬಾಂಗ್ ದೆಹಲಿ ( Dabang Delhi ) ಹಾಗೂ ಗುಜರಾತ್ ಜೈಂಟ್ಸ್ (Gujarat Giants)ನಡುವಿನ ಮುಖಾಮುಖಿ ತಲಾ 24 ಅಂಕಗಳೊಂದಿಗೆ ಟೈ ಆಯಿತು.

ಕಂಠೀರವ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕದ ಬಿಸಿ ರಮೇಶ್ (BC Ramesh) ಕೋಚ್ ಆಗಿರುವ ಬೆಂಗಾಲ್ ವಾರಿಯರ್ಸ್ ತಂಡದ ವಿರುದ್ಧ ಬೆಂಗಳುರು ಬುಲ್ಸ್ 36-35 ಅಂಕಗಳ ಗೆಲುವು ಕಂಡಿತು. ತಂಡದ ನಾಯಕ ಪವನ್ ಶೇರಾವತ್ ಒಟ್ಟು 15 ಅಂಕ ಸಂಪಾದನೆ ಮಾಡುವ ಮೂಲಕ ಮತ್ತೊಮ್ಮೆ ತಂಡದ ಗೆಲುವಿಗೆ ಕಾರಣರಾದರು. ಇವರಿಗೆ ಉತ್ತಮ ಸಾಥ್ ನೀಡಿದ ಇನ್ನೊಬ್ಬ ರೈಡರ್ ಚಂದ್ರನ್ ರಂಜಿತ್ 6 ಅಂಕ ಸಂಪಾದನೆ ಮಾಡಿದರು.

ಎದುರಾಳಿ ಬೆಂಗಾಲ್ ವಾರಿಯರ್ಸ್ ತಂಡದ ಪರವಾಗಿ ನಾಯಕ ಮಣಿಂದರ್ ಸಿಂಗ್ (Maninder Singh) 17 ಅಂಕ ಸಂಪಾದನೆ ಮಾಡಿದರೆ, ಆಲ್ರೌಂಡರ್ ಮೊಹಮದ್ ನಭಿಬಕಾಶ್ 8 ಅಂಕ ಗಳಿಸಿದರು. ಕೊನೆಯ ನಿಮಿಷದವರೆಗೂ ಸಮಬಲದ ಹೋರಾಟದಲ್ಲಿಯೇ ಪಂದ್ಯ ಸಾಗುತ್ತಿದ್ದರಿಂದ ಬಹುತೇಕವಾಗಿ ಪಂದ್ಯ ಟೈ ಆಗಲಿದೆ ಎಂದೇ ಎಲ್ಲರೂ ನಿರೀಕ್ಷೆ ಇಟ್ಟಿದ್ದರು. ಈ ವೇಳೆ ದಾಳಿಗಿಳಿದ ಬೆಂಗಳೂರು ತಂಡದ ರೈಡರ್, ದಕ್ಷಿಣ ಕೊರಿಯಾದ ಡೋಂಗ್ ಗಿಯೋನ್ ಲೀ ಅದ್ಭುತ ರೈಡ್ ಮಾಡುವ ಮೂಲಕ ಎರಡು ಅಂಕ ಕಲೆಹಾಕಿ ಬೆಂಗಳೂರು ತಂಡದ ಸೂಪರ್ ಗೆಲುವಿಗೆ ಕಾರಣರಾದರು.
 


ಬೆಂಗಾಲ್ ವಾರಿಯರ್ಸ್ ವಿರುದ್ಧದ ಗೆಲುವಿನ ಮೂಲಕ ಐದು ಅಂಕ ಸಂಪಾದನೆ ಮಾಡಿದ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಲೀಗ್ ನಲ್ಲಿ ಆಡಿದ ಮೂರು ಪಂದ್ಯಗಳಿಂದ ಬೆಂಗಳೂರು ಬುಲ್ಸ್ ಒಟ್ಟು 10 ಅಂಕ ಸಂಪಾದನೆ ಮಾಡಿದೆ. ಬೆಂಗಾಲ್ ವಾರಿಯರ್ಸ್ ಈ ಪಂದ್ಯದಲ್ಲಿ ಸೋಲು ಕಂಡಿದ್ದರೂ 2ನೇ ಸ್ಥಾನದಲ್ಲಿ ಮುಂದುವರಿದಿದೆ. ದಬಾಂಗ್ ದೆಹಲಿ ಅಗ್ರಸ್ಥಾನದಲ್ಲಿಯೇ ಉಳಿದಿದೆ.

SA vs India Boxing Day Test: ದಕ್ಷಿಣ ಆಫ್ರಿಕಾ ಬೌಲರ್ಸ್ ಗೆ "ವಾಲ್" ಆದ KL , ಟೆಸ್ಟ್ ನಲ್ಲಿ 7ನೇ ಶತಕ ಸಿಡಿಸಿದ ರಾಹುಲ್!
ದಬಾಂಗ್ ದೆಹಲಿ-ಗುಜರಾತ್ ಪಂದ್ಯಟೈ: ದಿನದ 2ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ದಬಾಂಗ್ ದೆಹಲಿ ತಂಡ 24-24 ರಿಂದ ಟೈ ಫಲಿತಾಂಶ ಸಾಧಿಸಿದವು. ಪಂದ್ಯದ ಕೊನೆಯ ರೈಡ್ ನಲ್ಲಿ ಅಂಕ ಸಂಪಾದನೆ ಮಾಡುವಲ್ಲಿ ಯಶಸ್ವಿಯಾದ ದಬಾಂಗ್ ದೆಹಲಿ ತಂಡದ ನಾಯಕ ನವೀನ್ ಕುಮಾರ್ ಅಂಕ ಹಂಚಿಕೊಳ್ಳಲು ನೆರವಾದರು. ನವೀನ್ ಕುಮಾರ್ ಸತತ 24ನೇ ಪಂದ್ಯದಲ್ಲಿ ಸೂಪರ್ 10 ಸಾಧನೆ ಮಾಡಿದರೆ, ಗುಜರಾತ್ ತಂಡದ ಪರವಾಗಿ ರಾಕಶ್ ನರ್ವಾಲ್ 9 ಅಂಕ ಗಳಿಸಿದರು. ಪಂದ್ಯದ ಮೊದಲ ಅವಧಿಯ ಆಟದಲ್ಲಿ ಎರಡೂ ತಂಡಗಳು ರಕ್ಷಣಾತ್ಮಕ ಆಟವಾಡಲು ಆರಂಭಿಸಿದ್ದವು. ರೈಡಿಂಗ್ ಹಾಗೂ ಡಿಫೆಂಡಿಂಗ್ ನಲ್ಲಿ ಎರಡೂ ತಂಡಗಳು ತಾಳ್ಮೆ ಪ್ರದರ್ಶನ ಮಾಡಿದ್ದರಿಂದ ಮೊದಲ ಅವಧಿಯಲ್ಲಿ ಒಟ್ಟಾಗಿ 23 ಅಂಕಗಳಷ್ಟೇ ಬಂದವು. ಆದರೆ, 2ನೇ ಅವಧಿಯ ಆಟದಲ್ಲಿ ಎರಡೂ ತಂಡಗಳು ಮೈಚಳಿ ಬಿಟ್ಟು ಆಡಲು ಆರಂಭಿಸಿದವು. ರೈಡರ್ ಗಳ ಆಕರ್ಷಕ ನಿರ್ವಹಣೆಯಿಂದ ಸ್ಕೋರ್ ಬೋರ್ಡ್ ನಲ್ಲಿ ಅಂಕ ಏರುತ್ತಿದ್ದವು. ಒಂದು ಹಂತದಲ್ಲಿ ಮೂರು ಅಂಕಗಳ ಮುನ್ನಡೆಯಲ್ಲಿದ್ದ ದೆಹಲಿ ತಂಡ ಗೆಲುವು ಸಾಧಿಸುವುದು ನಿಶ್ಚಯವಾಗಿತ್ತಾದರೂ, ಗುಜರಾತ್ ಭರ್ಜರಿಯಾಗಿ ತಿರುಗೇಟು ನೀಡಿ ಮುನ್ನಡೆ ಕಂಡಿತ್ತು.

Latest Videos
Follow Us:
Download App:
  • android
  • ios