* ಆಸ್ಪ್ರೇಲಿಯನ್‌ ಓಪನ್‌ ಸೆಮಿಫೈನಲ್‌ನಲ್ಲಿ ಸುಲಭ ಜಯ* ಚೊಚ್ಚಲ ಫೈನಲ್‌ಗೆ ಕಾಲಿನ್ಸ್‌* ಬಾರ್ಟಿಗೆ 3ನೇ ಪ್ರಶಸ್ತಿ ಗುರಿ 

ಮೆಲ್ಬರ್ನ್‌ (ಜ.28): ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ಫೈನಲ್‌ಗೆ ವಿಶ್ವ ನಂ.1, ಆಸ್ಪ್ರೇಲಿಯಾದ ಆ್ಯಶ್ಲೆ ಬಾರ್ಟಿ ಹಾಗೂ ಅಮೆರಿಕದ ಡೇನಿಯಲ್‌ ಕಾಲಿನ್ಸ್‌ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಬಾರ್ಟಿ, 2017ರ ಯುಎಸ್‌ ಓಪನ್‌ ರನ್ನರ್‌ ಅಪ್‌, ಅಮೆರಿಕದ ಮ್ಯಾಡಿಸನ್‌ ಕೀಸ್‌ ವಿರುದ್ಧ 6-1, 6-3 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು.

ಮತ್ತೊಂದು ಸೆಮೀಸ್‌ನಲ್ಲಿ 2020ರ ಫ್ರೆಂಚ್‌ ಓಪನ್‌ ಚಾಂಪಿಯನ್‌, ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ವಿರುದ್ಧ ಕಾಲಿನ್ಸ್‌ 6-4, 6-1ರಲ್ಲಿ ಸುಲಭ ಗೆಲುವು ಪಡೆದರು. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಬಾರ್ಟಿ ಹಾಗೂ ಕಾಲಿನ್ಸ್‌ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

2019ರಲ್ಲಿ ಫ್ರೆಂಚ್‌ ಓಪನ್‌, 2021ರಲ್ಲಿ ವಿಂಬಲ್ಡನ್‌ ಚಾಂಪಿಯನ್‌ ಆಗಿದ್ದ ಬಾರ್ಟಿ, 1980ರ ಬಳಿಕ ಮೊದಲ ಬಾರಿಗೆ ತವರಿನ ಗ್ರ್ಯಾನ್‌ ಸ್ಲಾಂ ಫೈನಲ್‌ ಪ್ರವೇಶಿಸಿದ ಆಸ್ಪ್ರೇಲಿಯಾದ ಟೆನಿಸ್‌ ಪಟು ಎನ್ನುವ ದಾಖಲೆ ಬರೆದಿದ್ದಾರೆ. ಬಾರ್ಟಿ 3ನೇ ಗ್ರ್ಯಾನ್‌ ಸ್ಲಾಂ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಕಾಲಿನ್ಸ್‌ ಇದೇ ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಂ ಫೈನಲ್‌ಗೇರಿದ್ದು, ಚೊಚ್ಚಲ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದಾರೆ.

ಇಂದು ಪುರುಷರ ಸಿಂಗಲ್ಸ್‌ ಸೆಮೀಸ್‌: ದಾಖಲೆಯ 21ನೇ ಗ್ರ್ಯಾನ್‌ ಸ್ಲಾಂ ಗೆಲುವಿನ ಮೇಲೆ ಕಣ್ಣಿಟ್ಟಿರುವ ರಾಫೆಲ್‌ ನಡಾಲ್‌, ಶುಕ್ರವಾರ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ 7ನೇ ಶ್ರೇಯಾಂಕಿತ ಇಟಲಿಯ ಮ್ಯಾಟಿಯೊ ಬೆರಟ್ಟಿನಿ ವಿರುದ್ಧ ಸೆಣಸಲಿದ್ದಾರೆ. ಮತ್ತೊಂದು ಸೆಮಿಫೈನಲ್‌ನಲ್ಲಿ ವಿಶ್ವ ನಂ.2 ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಹಾಗೂ ನಂ.4 ಗ್ರೀಸ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ ಮುಖಾಮುಖಿಯಾಗಲಿದ್ದಾರೆ.

RIP Charanjit Singh ಹಾಕಿ ದಿಗ್ಗಜ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ತಂದುಕೊಟ್ಟ ನಾಯಕ ಚರಣಜಿತ್ ಸಿಂಗ್ ನಿಧನ!
ಹಾಕಿ: ಪ್ರೊ ಲೀಗ್‌ಗೆ ಭಾರತ ತಂಡ ಪ್ರಕಟ

ನವದೆಹಲಿ: ಮುಂಬರುವ ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿಯ ಆತಿಥೇಯ ದ.ಆಫ್ರಿಕಾ ಹಾಗೂ ಫ್ರಾನ್ಸ್‌ ವಿರುದ್ಧದ ಪಂದ್ಯಗಳಿಗೆ 20 ಮಂದಿಯ ಭಾರತ ತಂಡ ಪ್ರಕಟಿಸಲಾಗಿದೆ. ಟೂರ್ನಿ ಫೆ.8ರಿಂದ 13ರ ವರೆಗೆ ನಡೆಯಲಿದ್ದು, ಮನ್‌ಪ್ರೀತ್‌ ಸಿಂಗ್‌ ತಂಡವನ್ನು ಮುನ್ನಡೆಸಲಿದ್ದಾರೆ. ಹರ್ಮನ್‌ಪ್ರೀತ್‌ ಸಿಂಗ್‌ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಐವರನ್ನು ಮೀಸಲು ಆಟಗಾರರಾಗಿ ಆಯ್ಕೆ ಮಾಡಲಾಗಿದೆ. ಸಂಭವನೀಯರ ತಂಡದಲ್ಲಿದ್ದ ಕರ್ನಾಟಕದ ಮೊಹಮದ್‌ ರಾಹೀಲ್‌, ಅಂತಿಮ 20ರ ತಂಡದಲ್ಲಿ ಸ್ಥಾನ ಪಡೆದಿಲ್ಲ. ಭಾರತ ಫೆ.4ರಂದು ಬೆಂಗಳೂರಿನಿಂದ ದ.ಆಫ್ರಿಕಾಕ್ಕೆ ತೆರಳಲಿದ್ದು, ಫೆ.8ರಂದು ಮೊದಲ ಪಂದ್ಯದಲ್ಲಿ ಫ್ರಾನ್ಸ್‌ ವಿರುದ್ಧ ಆಡಲಿದೆ. ಫೆ.9ಕ್ಕೆ ದ.ಆಫ್ರಿಕಾ ವಿರುದ್ಧ ಸ್ಪರ್ಧಿಸಲಿರುವ ಭಾರತಕ್ಕೆ, ಫೆ.12ಕ್ಕೆ ಮತ್ತೊಮ್ಮೆ ಫ್ರಾನ್ಸ್‌ ಎದುರಾಗಲಿದೆ. ಮರುದಿನ ದ.ಆಫ್ರಿಕಾ ವಿರುದ್ಧ 2ನೇ ಪಂದ್ಯ ಆಡಲಿದೆ.

Australian Open : ಸೆಮೀಸ್‌ಗೆ ಲಗ್ಗೆಯಿಟ್ಟ ಮೆಡ್ವೆಡೆವ್‌, ಸಿಟ್ಸಿಪಾಸ್‌
3ನೇ ಟಿ20: ಇಂಗ್ಲೆಂಡ್‌ ವಿರುದ್ಧ ಗೆದ್ದ ವಿಂಡೀಸ್‌
ಬ್ರಿಡ್ಜ್‌ಟೌನ್‌:
ಇಂಗ್ಲೆಂಡ್‌ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಆತಿಥೇಯ ವೆಸ್ಟ್‌ಇಂಡೀಸ್‌ 20 ರನ್‌ಗಳ ಜಯ ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ವಿಂಡೀಸ್‌ 2-1ರ ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 5 ವಿಕೆಟ್‌ ಕಳೆದುಕೊಂಡು 224 ರನ್‌ ಕಲೆ ಹಾಕಿತು. ರೋವ್‌ಮನ್‌ ಪೊವೆಲ್‌ ಕೇವಲ 53 ಎಸೆತಗಳಲ್ಲಿ 4 ಬೌಂಡರಿ, 10 ಸಿಕ್ಸರ್‌ಗಳೊಂದಿಗೆ 107 ರನ್‌ ಸಿಡಿಸಿದರು. ನಿಕೋಲಸ್‌ ಪೂರನ್‌ 70 ರನ್‌ ಬಾರಿಸಿದರು. ಈ ಜೋಡಿ 3ನೇ ವಿಕೆಟ್‌ಗೆ 122 ರನ್‌ ಜೊತೆಯಾಟವಾಡಿ ಇಂಗ್ಲೆಂಡ್‌ಗೆ ಸಿಂಹಸ್ವಪ್ನವಾಯಿತು. ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 9 ವಿಕೆಟ್‌ಗೆ 204 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಟಾಮ… ಬ್ಯಾಂಟನ್‌ 39 ಎಸೆತಗಳಲ್ಲಿ 73 ರನ್‌ ಸಿಡಿಸಿದರು. ಸರಣಿಯ 4ನೇ ಪಂದ್ಯ ಜ.30ಕ್ಕೆ ನಡೆಯಲಿದೆ.