Pro Kabaddi League: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದ ಬೆಂಗಳೂರು ಬುಲ್ಸ್‌..!

* ಬೆಂಗಳೂರು ಬುಲ್ಸ್‌ ತಂಡದ ಪ್ಲೇ ಆಫ್‌ ಕನಸು ಜೀವಂತ

* ಜೈಪುರ ಪಿಂಕ್ ಪ್ಯಾಂಥರ್ಸ್‌ ವಿರುದ್ಧ 45-37 ಅಂಕಗಳಿಂದ ಬುಲ್ಸ್‌ಗೆ ಗೆಲುವು

* ಬೆಂಗಳೂರು ಬುಲ್ಸ್‌ ಪರ ಭರತ್‌ 15, ಪವನ್‌ 10 ರೈಡ್‌ ಅಂಕ ಗಳಿಸಿದರು

Pro Kabaddi League Bengaluru bulls beats Jaipur Pink Panthers Close to Play off Spot kvn

ಬೆಂಗಳೂರು(ಫೆ.14): 8ನೇ ಆವೃತ್ತಿಯ ಪ್ರೊ ಕಬಡ್ಡಿಯ (Pro Kabaddi League) ನಿರ್ಣಾಯಕ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ (Bengaluru Bulls) ಜಯಗಳಿಸಿದ್ದು, ಪ್ಲೇ-ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಬುಲ್ಸ್‌, ಜೈಪುರ ಪಿಂಕ್ ಪ್ಯಾಂಥರ್ಸ್‌ (Jaipur Pink Panthers) ವಿರುದ್ಧ 45-37 ಅಂಕಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಪವನ್‌ ಕುಮಾರ್‌ ಶೆರಾವತ್ (Pawan Sehrawat) ಪಡೆ 20 ಪಂದ್ಯಗಳಲ್ಲಿ 60 ಅಂಕದೊಂದಿಗೆ 4ನೇ ಸ್ಥಾನಕ್ಕೇರಿದ್ದು, 19 ಪಂದ್ಯಗಳಲ್ಲಿ 52 ಅಂಕ ಸಂಪಾದಿರಸಿರುವ ಜೈಪುರ 8ನೇ ಸ್ಥಾನದಲ್ಲೇ ಉಳಿದಿದೆ. 

ಬೆಂಗಳೂರು ಬುಲ್ಸ್‌ ಪರ ಭರತ್‌ 15, ಪವನ್‌ 10 ರೈಡ್‌ ಅಂಕ ಗಳಿಸಿದರು. ಭಾನುವಾರದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಹರಾರ‍ಯಣ ಸ್ಟೀಲ​ರ್ಸ್‌ 37-26 ಅಂಕಗಳಿಂದ ಗೆಲುವು ಸಾಧಿಸಿತು. 20 ಪಂದ್ಯಗಳಲ್ಲಿ 63 ಅಂಕ ಪಡೆದಿರುವ ಹರ್ಯಾಣ 3ನೇ ಸ್ಥಾನದಲ್ಲಿದ್ದರೆ, ಯು ಮುಂಬಾ 6ನೇ ಸ್ಥಾನದಲ್ಲಿದೆ. ಸೋಮವಾರ ಪಾಟ್ನಾ ಪೈರೇಟ್ಸ್‌- ತೆಲುಗು ಟೈಟಾನ್ಸ್‌, ದಬಾಂಗ್ ಡೆಲ್ಲಿ - ಯು.ಪಿ. ಯೋಧಾ, ಗುಜರಾತ್‌ - ಪುಣೇರಿ ಪಲ್ಟಾನ್‌ ಮುಖಾಮುಖಿಯಾಗಲಿವೆ.

ಬೆಂಗಳೂರು ಓಪನ್‌: ತೈಪೆಯ ಚುನ್‌ ಸಿಂಗಲ್ಸ್‌ ಚಾಂಪಿಯನ್‌

ಬೆಂಗಳೂರು: ಚೈನೀಸ್‌ ತೈಪೆಯ ಚುನ್‌-ಸಿನ್‌ ಸೆಂಗ್‌ ಫೈ ಬೆಂಗಳೂರು ಓಪನ್‌ ಎಟಿಪಿ ಟೆನಿಸ್‌ ಟೂರ್ನಿಯ (Bengaluru Open ATP Tennis Tournament) ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ 1 ಗಂಟೆ 40 ನಿಮಿಷಗಳ ಕಾಲ ನಡೆದ ಫೈನಲ್‌ ಪಂದ್ಯದಲ್ಲಿ 20 ವರ್ಷದ ಚುನ್‌, ಕ್ರೊವೇಷಿಯಾದ ಬೊರ್ನಾ ಗೊಜೊ ವಿರುದ್ಧ 6-4, 7-5 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದರು. ಸೆನ್‌ 7200 ಅಮೆರಿಕನ್‌ ಡಾಲರ್‌(ಸುಮಾರು 5.4 ಲಕ್ಷ ರು.) ನಗದು ಬಹುಮಾನ ಪಡೆದರೆ, ಗೊಜೊಗೆ 4240 ಅಮೆರಿಕನ್‌ ಡಾಲರ್‌ (ಸುಮಾರು 3.19 ಲಕ್ಷ ರು.) ಲಭಿಸಿತು.

Pro Kabaddi League: ಬುಲ್ಸ್‌ಗಿಂದು ಮಾಡು ಇಲ್ಲವೇ ಮಡಿ ಪಂದ್ಯ

ಬೆಂಗಳೂರು ಓಪನ್‌: ಸಾಕೇತ್‌-ರಾಮ್‌ಗೆ ಪ್ರಶಸ್ತಿ

ಬೆಂಗಳೂರು: ಭಾರತದ ಸಾಕೇತ್‌ ಮೈನೇನಿ ಹಾಗೂ ರಾಮ್‌ಕುಮಾರ್‌ ರಾಮನಾಥನ್‌ ಬೆಂಗಳೂರು ಓಪನ್‌ ಎಟಿಪಿ ಟೆನಿಸ್‌ ಟೂರ್ನಿಯ ಡಬಲ್ಸ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಫೈನಲ್‌ನಲ್ಲಿ ಭಾರತೀಯ ಜೋಡಿಯು ಫ್ರಾನ್ಸ್‌ನ ಹ್ಯುಗೊ ಗ್ರೀನಿಯರ್‌ ಹಾಗೂ ಅಲೆಕ್ಸಾಂಡರ್‌ ಮುಲ್ಲರ್‌ ವಿರುದ್ಧ 6-3, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ದಾಖಲಿಸಿತು. ಚಾಲೆಂಜರ್‌ ಹಂತದಲ್ಲಿ ಇದು ಸಾಕೇತ್‌ ಗೆದ್ದ 9ನೇ ಡಬಲ್ಸ್‌ ಪ್ರಶಸ್ತಿಯಾಗಿದ್ದು, ರಾಮ್‌ಕುಮಾರ್‌ಗೆ 3ನೇ ಪ್ರಶಸ್ತಿ ಎನಿಸಿದೆ.

Tokyo 2020: ಒಲಿಂಪಿಕ್ಸ್‌ನಲ್ಲಿ ಟಿಟಿ ಕೋಚ್ ಫಿಕ್ಸಿಂಗ್ ನಿಜ: ಡೆಲ್ಲಿ ಹೈಕೋರ್ಟ್‌ ಮಹತ್ವದ ತೀರ್ಪು

ಟಿ20: ಪ್ರೇಕ್ಷಕರ ಪ್ರವೇಶಕ್ಕೆ ಬಂಗಾಳ ಕ್ರಿಕೆಟ್‌ ಮನವಿ

ಕೋಲ್ಕತಾ: ಭಾರತ ಹಾಗೂ ವಿಂಡೀಸ್‌ (India vs West Indies) ನಡುವಿನ 3 ಪಂದ್ಯಗಳ ಟಿ20 ಸರಣಿ ವೇಳೆ ಈಡನ್‌ ಗಾರ್ಡನ್‌ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ನೀಡುವಂತೆ ಬಿಸಿಸಿಐಗೆ (BCCI) ಬೆಂಗಾಲ್‌ ಕ್ರಿಕೆಟ್‌ ಸಂಸ್ಥೆ(ಸಿಎಬಿ) ಮನವಿ ಮಾಡಿದೆ. ಪಶ್ಚಿಮ ಬಂಗಾಳ ಸರ್ಕಾರ ಕ್ರೀಡಾಂಗಣಕ್ಕೆ ಶೇ.75 ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡಿತ್ತು. ಆದರೆ ಬಿಸಿಸಿಐ ಕೋವಿಡ್‌ (COVID 19) ಮುನ್ನೆಚ್ಚರಿಕಾ ಕ್ರಮವಾಗಿ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ನೀಡದಿರಲು ನಿರ್ಧರಿಸಿದೆ. ಹೀಗಾಗಿ ಸಿಎಬಿ ಪ್ರೇಕ್ಷಕರಿಗೆ ಅನುಮತಿ ನೀಡುವಂತೆ ಬಿಸಿಸಿಐಗೆ ಪತ್ರ ಬರೆದಿದೆ.
 

Latest Videos
Follow Us:
Download App:
  • android
  • ios