Asianet Suvarna News Asianet Suvarna News

Pro Kabaddi League: ಫೆಬ್ರವರಿ 13ರ ವರೆಗಿನ ಪಂದ್ಯಗಳ ವೇಳಾಪಟ್ಟಿ ಪ್ರಕಟ

* ಪ್ರೊ ಕಬಡ್ಡಿ ಲೀಗ್‌ನ ಆಯೋಜಕರಿಂದ ಫೆಬ್ರವರಿ 13ರ ವರೆಗಿನ ವೇಳಾಪಟ್ಟಿ ಪ್ರಕಟ

* ಈ ಅವಧಿಯಲ್ಲಿ ನಡೆಯಲಿದೆ 5 ದಿನ ತಲಾ ಮೂರು ಪಂದ್ಯಗಳು

* ಪ್ಲೇ ಆಫ್‌ ಪ್ರವೇಶಿಸುವ ದೃಷ್ಟಿಯಿಂದ ಬೆಂಗಳೂರು ಪಾಲಿಗಿವೆ ಮಹತ್ವದ ಪಂದ್ಯಗಳು

Pro Kabaddi League 2022 organizers declare schedule for February 5 to 13 kvn
Author
Bengaluru, First Published Feb 6, 2022, 8:59 AM IST

ಬೆಂಗಳೂರು(ಫೆ.06): 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ (Pro Kabaddi League) ಮುಂದಿನ ಒಂದು ವಾರದ ವೇಳಾಪಟ್ಟಿಯನ್ನು ಆಯೋಜಕರು ಶನಿವಾರ ಪ್ರಕಟಿಸಿದ್ದು, ಫೆಬ್ರವರಿ 5ರಿಂದ 13ರ ವರೆಗೆ ಒಟ್ಟು 23 ಪಂದ್ಯಗಳು ನಡೆಯಲಿವೆ. ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ (Bengaluru Bulls) 3 ಪಂದ್ಯಗಳನ್ನು ಆಡಲಿದೆ. 18 ಪಂದ್ಯಗಳಲ್ಲಿ 9 ಗೆಲುವುಗಳನ್ನು ಕಂಡಿರುವ ಬುಲ್ಸ್‌ 54 ಅಂಕ ಕಲೆಹಾಕಿದೆ. ದಬಾಂಗ್‌ ಡೆಲ್ಲಿ (Dabang Delhi)(57), ಪಾಟ್ನಾ ಪೈರೇಟ್ಸ್‌ (Patna Pirates) (54) ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆದಿವೆ. 

ಅಂಕಪಟ್ಟಿಯಲ್ಲಿ ಅಗ್ರ 6 ಸ್ಥಾನಗಳನ್ನು ಪಡೆಯಲು ತಂಡಗಳ ನಡುವೆ ಪೈಪೋಟಿ ಹೆಚ್ಚಾಗಿದ್ದು, ಬುಲ್ಸ್‌ ಪ್ಲೇ-ಆಫ್ಸ್‌ ರೇಸ್‌ನಲ್ಲಿ ಉಳಿದುಕೊಳ್ಳಬೇಕಿದ್ದರೆ ಬಾಕಿ ಇರುವ 4 ಪಂದ್ಯಗಳಲ್ಲಿ ಕನಿಷ್ಠ 2ರಿಂದ 3 ಪಂದ್ಯಗಳನ್ನು ಗೆಲ್ಲಬೇಕಿದೆ. ಬುಲ್ಸ್‌ ಫೆಬ್ರವರಿ 6ರಂದು ಗುಜರಾತ್‌ ತಂಡವನ್ನು ಎದುರಿಸಲಿದ್ದು, ಫೆಬ್ರವರಿ 11ಕ್ಕೆ ಜೈಪುರ, ಫೆಬ್ರವರಿ 13ಕ್ಕೆ ಪಾಟ್ನಾ ವಿರುದ್ಧ ಸೆಣಸಾಡಲಿದೆ. ಫೆಬ್ರವರಿ 6, 11, 12 ಹಾಗೂ 13ರಂದು ತಲಾ 3 ಪಂದ್ಯಗಳು ನಡೆಯಲಿವೆ.

ಫೆಬ್ರವರಿ 05ರಿಂದ 13ರವರೆಗೆ ನಡೆಯಲಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯಲ್ಲಿ 5 ದಿನ ತಲಾ ಮೂರು ಪಂದ್ಯಗಳು ನಡೆಯಲಿವೆ. ಫೆಬ್ರವರಿ 06ರಂದ ಸಹಾ ಮೂರು ಪಂದ್ಯಗಳ ನಡೆಯಲಿವೆ. ಇನ್ನುಳಿದಂತೆ ಸೋಮವಾರದಿಂದ ಗುರುವಾರದವರೆಗೆ ತಲಾ ಎರಡು ಪಂದ್ಯಗಳು ನಡೆಯಲಿವೆ. 

 
 
 
 
 
 
 
 
 
 
 
 
 
 
 

A post shared by Pro Kabaddi (@prokabaddi)

ಯೋಧಾ, ಮುಂಬಾ ತಂಡಗಳಿಗೆ ಗೆಲುವು

ಬೆಂಗಳೂರು: 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಯು.ಪಿ.ಯೋಧಾ (UP Yoddha) ಸೋಲಿನ ಸರಪಳಿ ಕಳಚಿಕೊಂಡಿದ್ದು, ಆವೃತ್ತಿಯಲ್ಲಿ 6ನೇ ಗೆಲುವು ದಾಖಲಿಸಿದೆ. ಶನಿವಾರ ತೆಲುಗು ಟೈಟಾನ್ಸ್‌(Telugu Titans) ವಿರುದ್ಧದ ಪಂದ್ಯದಲ್ಲಿ ಯೋಧಾ, 39-35 ಅಂಕಗಳಿಂದ ಜಯಗಳಿಸಿತು. 

ತಾರಾ ರೈಡರ್‌ ಪ್ರದೀಪ್‌ ನರ್ವಾಲ್‌ (Pardeep Narwal) 9 ರೈಡ್‌ ಮೂಲಕ ಕೇವಲ 3 ಅಂಕ ಗಳಿಸಿದರು. ಸುರೆಂದ್ರ ಗಿಲ್‌ 12 ಅಂಕ ಪಡೆದರು. ಟೈಟಾನ್ಸ್‌ 16 ಪಂದ್ಯಗಳಲ್ಲಿ 12ನೇ ಸೋಲುಂಡಿದ್ದು, ಕೇವಲ 1 ಪಂದ್ಯದಲ್ಲಿ ಗೆದ್ದಿದೆ. ಮತ್ತೊಂದು ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ವಿರುದ್ಧ ಯು ಮುಂಬಾ 35-33 ಅಂಕಗಳಿಂದ ಗೆದ್ದಿತು. ಮುಂಬೈಗೆ ಇದು 6ನೇ ಗೆಲುವಾಗಿದೆ. ಭಾನುವಾರ ಪಾಟ್ನಾ-ಬೆಂಗಾಲ್‌, ಬೆಂಗಳೂರು-ಗುಜರಾತ್‌, ಡೆಲ್ಲಿ-ಯೋಧಾ ಮುಖಾಮುಖಿಯಾಗಲಿವೆ.

Laver Cup 2022: ದಿಗ್ಗಜರ ಸಮಾಗಮ, ಒಟ್ಟಾಗಿ ಟೆನಿಸ್ ಆಡಲಿದ್ದಾರೆ ಫೆಡರರ್‌-ನಡಾಲ್‌..!

ಸದ್ಯ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ, ಪಾಟ್ನಾ ಪೈರೇಟ್ಸ್‌ ಹಾಗೂ ಬೆಂಗಳೂರು ಬುಲ್ಸ್‌ ತಂಡಗಳು ಮೊದಲ ಮೂರು ಸ್ಥಾನಗಳಲ್ಲೇ ಮುಂದುವರೆದಿದ್ದರೆ, ಹರ್ಯಾಣ ಸ್ಟೀಲರ್ಸ್‌, ಯು ಮುಂಬಾ ಹಾಗೂ ಯು.ಪಿ. ಯೋಧಾ ತಂಡಗಳು ಕ್ರಮವಾಗಿ 4,5 ಹಾಗೂ ಆರನೇ ಸ್ಥಾನದಲ್ಲಿವೆ. ಇನ್ನುಳಿದಂತೆ ಬೆಂಗಾಲ್ ವಾರಿಯರ್ಸ್‌, ಗುಜರಾತ್ ಫಾರ್ಚೂನ್‌ಜೈಂಟ್ಸ್ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಕೊನೆಯ ಮೂರು ಸ್ಥಾನಗಳಲ್ಲಿ ಉಳಿದುಕೊಂಡಿವೆ.

ಚಳಿಗಾಲದ ಒಲಿಂಪಿಕ್ಸ್‌: 45 ಮಂದಿಗೆ ಕೊರೋನಾ

ಬೀಜಿಂಗ್‌: ಶುಕ್ರವಾರ ಉದ್ಘಾಟನೆಗೊಂಡ ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ 45 ಕೋವಿಡ್‌ ಪ್ರಕರಣಗಳು ದೃಢಪಟ್ಟಿದೆ. ಅಥ್ಲೀಟ್ಸ್‌ ಹಾಗೂ ಅಧಿಕಾರಿಗಳಲ್ಲಿ 25 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಉಳಿದ 20 ಪ್ರಕರಣಗಳು ಮಾಧ್ಯಮ ಹಾಗೂ ಕಾರ್ಮಿಕರಲ್ಲಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಗೇಮ್ಸ್‌ಗೆ ಸಂಬಂಧಿಸಿದಂತೆ ಜ.23ರ ಬಳಿಕ ಒಟ್ಟು 353 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.

ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾರತದಿಂದ ಏಕೈಕ ಅಥ್ಲೀಟ್‌ ಪಾಲ್ಗೊಂಡಿದ್ದಾರೆ. 31 ವರ್ಷದ, ಜಮ್ಮು ಮತ್ತು ಕಾಶ್ಮೀರ ಆರಿಫ್‌ ಭಾರತದ ಏಕೈಕ ಸ್ಪರ್ಧಿಯಾಗಿದ್ದು, ಸ್ಲಾಲೊಮ್‌ ಹಾಗೂ ಜೈಂಟ್‌ ಸ್ಲಾಲೊಮ್‌ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. 
 

Follow Us:
Download App:
  • android
  • ios