Asianet Suvarna News Asianet Suvarna News

ಪ್ರೊ ಕಬಡ್ಡಿ: ಗುಜರಾತ್‌ಗೆ ಗೆಲುವಿನ ವಿದಾಯ

2 ಬಾರಿ ರನ್ನರ್ ಅಪ್‌ ತಂಡ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡ ಈ ಬಾರಿ ಪ್ಲೇ ಆಫ್ ಪ್ರವೇಶಿಸಲು ವಿಫಲರಾದರೂ, ಲೀಗ್ ಹಂತದ ಕೊನೆಯ ಪಂದ್ಯವನ್ನು ಗೆಲುವಿನೊಂದಿಗೆ ಮುಕ್ತಾಯಗೊಳಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Pro Kabaddi 2019 Sonu stars as Gujarat Fortunegiants end their campaign on a high
Author
New Delhi, First Published Oct 9, 2019, 11:01 AM IST
  • Facebook
  • Twitter
  • Whatsapp

ನವದೆಹಲಿ[ಅ.09]: ಪ್ರೊ ಕಬಡ್ಡಿ 7ನೇ ಆವೃತ್ತಿಯ ಪ್ಲೇ ಆಫ್‌ ಹಂತಕ್ಕೆ ಈಗಾಗಲೇ ಯಾವ್ಯಾವ ತಂಡಗಳು ಎನ್ನುವುದು ಅಂತಿಮ ಆಗಿದೆ. ಔಪಚಾರಿಕ ಪಂದ್ಯದಲ್ಲಿ ಗುಜರಾತ್ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ.

ಒಂದೇ ರೈಡ್‌ನಲ್ಲಿ ಪ್ರದೀಪ್ ನರ್ವಾಲ್‌ಗೆ 6 ಅಂಕ..!

ಸೋಮವಾರ ಟೂರ್ನಿಯಿಂದ ಹೊರಬಿದ್ದ ತಂಡಗಳ ನಡುವಣ ರೋಚಕ ಹಣಾಹಣಿಯಲ್ಲಿ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌, ತೆಲುಗು ಟೈಟಾನ್ಸ್‌ ವಿರುದ್ಧ 48-38ರಲ್ಲಿ ಗೆಲುವು ಸಾಧಿಸಿತು. ಇದರೊಂದಿಗೆ ಗುಜರಾತ್‌ ತನ್ನ ಕೊನೆಯ ಪಂದ್ಯದಲ್ಲಿ ಜಯದ ವಿದಾಯ ಕಂಡರೆ, ಟೈಟಾನ್ಸ್‌ 13ನೇ ಸೋಲು ಕಂಡಿತು. ಮೊದಲಾರ್ಧದಲ್ಲಿ ಗುಜರಾತ್‌ 13-21 ರಿಂದ ಹಿನ್ನಡೆದಿತ್ತು. ಗುಜರಾತ್ ಪರ ಸೋನು 17 ಅಂಕ ಪಡೆದು ಮಿಂಚಿದರೆ, ರೋಹಿತ್ ಗುಲಿಯಾ9 ಹಾಗೂ ಜಿ.ಬಿ ಮೋರೆ 7 ಅಂಕ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇನ್ನು ಸಿದ್ಧಾರ್ಥ್ ದೇಸಾಯಿ 13 ಅಂಕ ಪಡೆದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಈ ಸೋಲಿನೊಂದಿಗೆ ಟೈಟಾನ್ಸ್ ಕೊನೆಯಿಂದ ಎರಡನೇ ಸ್ಥಾನದಲ್ಲೇ ಉಳಿಯಿತು. 

ತಲೈವಾಸ್‌ಗೆ ರೋಚಕ ಜಯ:

2ನೇ ಪಂದ್ಯದಲ್ಲಿ ತಮಿಳ್‌ ತಲೈವಾಸ್‌, ಜೈಪುರ ಪಿಂಕ್‌ ಪ್ಯಾಂಥರ್ಸ್‌ ಎದುರು 35-33 ಅಂಕಗಳ ರೋಚಕ ಗೆಲುವು ಪಡೆಯಿತು. ಮೊದಲಾರ್ಧದಲ್ಲಿ ತಲೈವಾಸ್‌ 19-14ರಿಂದ ಮುನ್ನಡೆದಿತ್ತು. ಟೂರ್ನಿಯಲ್ಲಿ ತಲೈವಾಸ್‌, ಬುಧವಾರ ಬೆಂಗಾಲ್‌ ಎದುರು ಕೊನೆಯ ಪಂದ್ಯವನ್ನಾಡಲಿದೆ.

ವಿ. ಅಜಿತ್ ಕುಮಾರ್ 10 ಅಂಕ ಪಡೆದರೆ, ರಾಹುಲ್ 5 ಅಂಕ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನ ಹೊರತಾಗಿಯೂ ತಲೈವಾಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ. 


 

Follow Us:
Download App:
  • android
  • ios