ರಾಷ್ಟ್ರೀಯ ವೇಟ್‌ಲಿಫ್ಟರ್ ಯಸ್ವಿಕಾ ಆಚಾರ್ಯ ಜಿಮ್‌ನಲ್ಲಿ 270 ಕೆ.ಜಿ ಸ್ಕ್ವಾಟ್ ಮಾಡುವಾಗ ತೂಕ ಜಾರಿ ಸಾವನ್ನಪ್ಪಿದರು. ತರಬೇತುದಾರರ ನಿರ್ಲಕ್ಷ್ಯ, ತೂಕದ ಸ್ಟ್ಯಾಂಡ್ ಎತ್ತರ  ಮತ್ತು ರಬ್ಬರ್ ಮ್ಯಾಟ್‌ನಿಂದ ಬ್ಯಾಲೆನ್ಸ್ ತಪ್ಪಿರುವುದು ಕಾರಣವೆಂದು ಹೇಳಲಾಗಿದೆ. ತೂಕ ಎತ್ತುವಾಗ ಅರ್ಹ ತರಬೇತುದಾರರ ಬೆಂಬಲ, ಸುರಕ್ಷಿತ ಸಲಕರಣೆಗಳು, ಬೆಲ್ಟ್, ಲಿಫ್ಟ್ ಶೂ, ಗ್ಲೌಸ್ ಧರಿಸುವುದು ಮತ್ತು ಪ್ರೊಗ್ರೆಸ್ಸಿವ್ ಓವರ್‌ಲೋಡ್ ತರಬೇತಿ ಮುಖ್ಯವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಿಮ್ (Gym) ನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ರಾಷ್ಟ್ರ ಮಟ್ಟದ ವೇಟ್ ಲಿಫ್ಟರ್ ಯಸ್ವಿಕಾ ಆಚಾರ್ಯ (national level weightlifter Yasvika Acharya) ಸಾವನ್ನಪ್ಪಿದ ಸುದ್ದಿ ಎಲ್ಲರಿಗೂ ತಿಳಿದೇ ಇದೆ. 270 ಕಿ.ಗ್ರಾಂ ಸ್ಕ್ವಾಟ್ ರಾಡ್ ಜಾರಿ ಕತ್ತಿನ ಮೇಲೆ ಬಿದ್ದು ಅವರು ಸಾವನ್ನಪ್ಪಿದ್ದಾರೆ. 17 ವರ್ಷದ ಯಸ್ವಿಕಾ ಸಾವಿಗೆ ಜಿಮ್ ಟ್ರೈನರ್ ಕಾರಣ ಅಂತ ಒಬ್ಬರು ಹೇಳಿದ್ರೆ ಮತ್ತೆ ಕೆಲವರು ಸ್ಲಿಪ್ ಆಗಿ ಯಸ್ವಿಕಾ ಸಾವನ್ನಪ್ಪಿದ್ದಾರೆ ಎನ್ನುತ್ತಿದ್ದಾರೆ. ಯಸ್ವಿಕಾ ಸಾವನ್ನಪ್ಪಿದ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ನಾಲ್ಕು ಬಾರಿ ಮಿಸ್ಟರ್ ಇಂಡಿಯಾ ಕಿರೀಟ ಧರಿಸಿರುವ, ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತರಾದ ಬಾಡಿಬಿಲ್ಡರ್ ಮುಖೇಶ್ ಸಿಂಗ್ ಮಾಧ್ಯಮಕ್ಕೆ ಯಸ್ವಿಕಾ ಸಾವಿಗೆ ಕಾರಣ ಏನು ಎಂಬುದನ್ನು ಹೇಳಿದ್ದಾರೆ.

ಹೆವಿ ಲಿಫ್ಟಿಂಗ್ ನಲ್ಲಿ ಆದ ತಪ್ಪುಗಳು ಏನು? : ಈಗ ನಡೆದ ಘಟನೆ ನೋಡಿದ್ರೆ ವೇಟ್ ಲಿಫ್ಟ್ ಮಾಡುವಾಗ ಸಾಕಷ್ಟು ತಪ್ಪು ನಡೆದಿದೆ ಎಂದವರು ಹೇಳಿದ್ದಾರೆ. ಮೊದಲನೇಯದಾಗಿ ರ‍್ಯಾಕ್ ಅಂದ್ರೆ ಬಾರ್ಬೆಲ್ ಹಿಡಿದಿಡಲು ಸ್ಟ್ಯಾಂಡ್ ಎತ್ತರ ಯಸ್ವಿಕಾ ಭುಜಕ್ಕಿಂತ ಸುಮಾರು 1-2 ಇಂಚುಗಳಷ್ಟು ಎತ್ತರದಲ್ಲಿತ್ತು. ಭುಜದ ಮೇಲೆ ಅದನ್ನು ಇಡಲು ಯಸ್ವಿಕಾ ಕಾಲನ್ನು ಎತ್ತಬೇಕಾಯ್ತು. ಒಂದು ಇಂಚು ಕಾಲನ್ನು ಎತ್ತಿದ ನಂತ್ರ ಅವರು ತಮ್ಮ ಭುಜದ ಮೇಲೆ ಇಟ್ಟುಕೊಂಡ್ರು. ಎಲ್ಲ ಭಾರ ಕಾಲ್ಬೆರಳಿನ ಮೇಲೆ ಬಿದ್ದ ಕಾರಣ ಅವರು ಬ್ಯಾಲೆನ್ಸ್ ಕಳೆದುಕೊಂಡ್ರು ಎಂದು ಮುಖೇಶ್ ಸಿಂಗ್ ಹೇಳಿದ್ದಾರೆ. 

ವ್ಯಾನಿಟಿ ವ್ಯಾನ್ ನಿಂದ ಬರ್ತಿತ್ತು ಶಬ್ದ, ಒಳಗೆ ಹೋದ್ರೆ ಮೊಹಮ್ಮದ್ ಸಿರಾಜ್ ಜೊತೆಗಿದ್ರು ಈ

ಎರಡನೇಯದಾಗಿ ಯಸ್ವಿಕಾ, ತೂಕ ಎತ್ತಿ ಕಾಲನ್ನು ಹಿಂದಕ್ಕೆ ಇಡ್ತಿದ್ದಂತೆ ರಬ್ಬರ್ ಮ್ಯಾಟ್ ಕಾರ್ನರ್ ಗೆ ಕಾಲು ಹೋಗುತ್ತೆ. ಇದ್ರಿಂದ ಬ್ಯಾಲೆನ್ಸ್ ಸಂಪೂರ್ಣ ತಪ್ಪುತ್ತೆ. ತೂಕ ಎತ್ತುವ ಸಂದರ್ಭದಲ್ಲಿ ಹಿಂದಿನ ಜಾಗ ಸಮತಟ್ಟಾಗಿರುವಂತೆ ನೋಡ್ಕೊಳ್ಬೇಕು. ಹಾಗೆಯೇ ಟ್ರೈನರ್ ಸಪೂರ್ಟ್ ಇಲ್ಲಿ ಕಾಣಿಸಲಿಲ್ಲ ಎಂದು ಮುಖೇಶ್ ಹೇಳಿದ್ದಾರೆ. ಇಷ್ಟು ಭಾರ ಎತ್ತುವಾಗ ಟ್ರೈನರ್ ಬೆಂಬಲಕ್ಕೆ ನಿಲ್ಬೇಕು. ಆದ್ರಿಲ್ಲ ತುದಿ ಬೆರಳಿನಲ್ಲಿ ಸಹಾಯ ಮಾಡಿದ್ದಾರೆಯೇ ವಿನಃ ಬ್ಯಾಲೆನ್ಸ್ ಮಾಡುವವರಿಗೆ ಟ್ರೈನರ್ ಬೆಂಬಲ ನೀಡಲಿಲ್ಲ. ಯಸ್ವಿಕಾಗೆ ಸಹಾಯ ಮಾಡಲು ನಿಂತಿದ್ದ ಜನರು ಸರಿಯಾಗಿ ಸಹಕರಿಸಲಿಲ್ಲ ಎಂದು ಮುಖೇಶ್ ಹೇಳಿದ್ದಾರೆ.

ಭಾರ ಎತ್ತುವಾಗ ಏನು ಮಾಡ್ಬೇಕು? : ಭಾರ ಎತ್ತುವಾಗ ಜನರು ಅನೇಕ ಎಚ್ಚರಿಕೆ ತೆಗೆದುಕೊಳ್ಬೇಕು. ಯಾವಾಗ್ಲೂ ಸೂಕ್ತ ತರಬೇತಿ ಪಡೆದಿರುವ ಹಾಗೂ ಅರ್ಹ ತರಬೇತುದಾರನಿಂದ ತರಬೇತಿ ಪಡೆಯಬೇಕು. ಭಾರ ಎತ್ತುವಾಗ ಅವರ ಬೆಂಬಲ ನಿಮಗೆ ಇರಬೇಕು. ಪೂರ್ವ ತಯಾರಿ ಇಲ್ಲದೆ ಇಷ್ಟು ಭಾರವನ್ನು ಎಂದಿಗೂ ಎತ್ತಬಾರದು. ಅಲ್ಲದೆ ಜಿಮ್ ನಲ್ಲಿರುವ ಭಾರದ ವಸ್ತು ಎಷ್ಟು ಸುರಕ್ಷಿತ ಎಂಬುದನ್ನು ಚೆಕ್ ಮಾಡ್ಬೇಕು. ಅದನ್ನು ಸರಿಯಾಗಿ ಮೆಂಟೇನ್ ಮಾಡಲಾಗಿದೆಯೇ ಎಂಬುದನ್ನು ಗಮನಿಸಬೇಕು. ಅಷ್ಟೇ ಅಲ್ಲ, ಭಾರ ಎತ್ತುವಾಗ ಬೆಲ್ಟ್ ಧರಿಸೋದನ್ನು ಮರೆಯಬಾರದು. ಲಿಫ್ಟ್ ಶೂ ಮತ್ತು ಗ್ಲೌಸ್ ಧರಿಸಲಾಗಿದೆಯೇ ಎಂಬುದನ್ನು ಚೆಕ್ ಮಾಡ್ಬೇಕು. 

WPL ಟಿ20ಗಾಗಿ ಮೆಟ್ರೋ ವಿಸ್ತರಣೆ: ಆರ್‌ಸಿಬಿ ಮ್ಯಾಚ್ ಟಿಕೆಟ್ ಬೆಲೆಗಿಂತ, ಮೆಟ್ರೋ ಟಿಕೆಟ್ ದರವೇ ಹೆಚ್ಚಾಯ್ತು!

ಪ್ರೊಗ್ರೆಸ್ಸಿವ್ ಓವರ್ ಲೋಡ್ ಟ್ರೈನಿಂಗ್ ಟೆಕ್ನಾಲಜಿಯನ್ನು ನೀವು ಬಳಸ್ಬೇಕು. ಅಂದ್ರೆ ನೀವು 100 ಕೆ.ಜಿ ತೂಕದಲ್ಲಿ 10 ರೆಪ್ಸ್ ಮಾಡ್ತಿದ್ದು, ಕೆ.ಜಿಯನ್ನು 105ಕ್ಕೆ ಏರಿಸಬೇಕು ಎಂದಾದ್ರೆ ಮೊದಲು 100 ಕೆ.ಜಿಯಲ್ಲಿ 12 ರೆಪ್ಸ್ ಮಾಡಿ. ನೀವು ಆರಾಮವಾಗಿ 15 ರೆಪ್ಸ್ ಮಾಡ್ತಿದ್ದರೆ ಆಗ ತೂಕವನ್ನು 105ಕ್ಕೆ ಹೆಚ್ಚಿಸಬಹುದು. ನಿಮ್ಮ ದೇಹದ ಶಕ್ತಿಯನ್ನು ಗಮನದಲ್ಲಿಟ್ಕೊಂಡು ನೀವು ಭಾರ ಎತ್ತಬೇಕು. ಇದಕ್ಕಿಂತ ಮೊದಲು ವಾರ್ಮ್ ಅಪ್ ಬಹಳ ಮುಖ್ಯ.

Scroll to load tweet…