* ದಾಖಲೆಯ ಮೊತ್ತಕ್ಕೆ ಯು.ಪಿ. ಯೋಧ ಪಾಲಾದ ನಂ.1 ರೇಡರ್ ಪ್ರದೀಪ್ ನರ್ವಾಲ್* 1.65 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡ ಯೋಧ* ಹರಾಜಿನಲ್ಲಿ 30 ಲಕ್ಷ ಮೂಲ ಬೆಲೆ ಹೊಂದಿದ್ದ ಪ್ರದೀಪ್‌ಗೆ ಭಾರೀ ಬೇಡಿಕೆ ಇತ್ತು

ಮುಂಬೈ(ಆ.31): ಪ್ರೊ ಕಬಡ್ಡಿ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಬಿಕರಿಯಾದ ಆಟಗಾರ ಎನ್ನುವ ದಾಖಲೆಯನ್ನು ನಂ.1 ರೈಡರ್‌ ಪ್ರದೀಪ್‌ ನರ್ವಾಲ್‌ ಬರೆದಿದ್ದಾರೆ. ಸೋಮವಾರ ನಡೆದ 8ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪ್ರದೀಪ್‌ರನ್ನು ಬರೋಬ್ಬರಿ 1.65 ಕೋಟಿ ರುಪಾಯಿ ನೀಡಿ ಯು.ಪಿ.ಯೋಧ ತಂಡ ಖರೀದಿಸಿತು. ಈ ಮೂಲಕ 2018ರಲ್ಲಿ 1.58 ಕೋಟಿ ರು.ಗೆ ಹರಾರ‍ಯಣ ಸ್ಟೀಲ​ರ್ಸ್‌ ತಂಡಕ್ಕೆ ಸೇರ್ಪಡೆಗೊಂಡಿದ್ದ ಮೋನು ಗೋಯತ್‌ರ ದಾಖಲೆಯನ್ನು ಪ್ರದೀಪ್‌ ಮುರಿದರು.

ಹರಾಜಿನಲ್ಲಿ 30 ಲಕ್ಷ ಮೂಲ ಬೆಲೆ ಹೊಂದಿದ್ದ ಪ್ರದೀಪ್‌ಗೆ ಭಾರೀ ಬೇಡಿಕೆ ಇತ್ತು. ತೆಲುಗು ಟೈಟನ್ಸ್‌ ತಂಡ ಆರಂಭದಲ್ಲೇ 1.2 ಕೋಟಿ ರು. ಬಿಡ್‌ ಸಲ್ಲಿಸಿತು. ಉಳಿದ ತಂಡಗಳೂ ಹರಾಜು ಕೂಗಿದವು. ಆದರೆ ಅಂತಿಮವಾಗಿ ಯು.ಪಿ.ಯೋಧ 1.65 ಕೋಟಿ ರು.ಗೆ ಖರೀದಿಸಿತು. ಪಾಟ್ನಾ ತಂಡ ಫೈನಲ್‌ ಬಿಡ್‌ ಮ್ಯಾಚ್‌(ಎಫ್‌ಬಿಎಂ) ಕಾರ್ಡ್‌ ಬಳಕೆ ಮಾಡದ ಕಾರಣ, ಪ್ರದೀಪ್‌ ಯು.ಪಿ.ಪಾಲಾದರು.

Scroll to load tweet…
Scroll to load tweet…

ಇಂದು ಪ್ರೊ ಕಬಡ್ಡಿ ಆಟಗಾರರ ಹರಾಜು; ಪ್ರದೀಪ್ ನರ್ವಾಲ್ ಮೇಲೆ ಎಲ್ಲರ ಚಿತ್ತ

ಸೋಮವಾರ ಮಧ್ಯಾಹ್ನ ವಿದೇಶಿ ಆಟಗಾರರು, ಸಂಜೆ ಭಾರತೀಯ ತಾರಾ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು. ಬೆಂಗಳೂರು ಬುಲ್ಸ್‌ ಮಾಜಿ ನಾಯಕ ರೋಹಿತ್‌ ಕುಮಾರ್‌ 36 ಲಕ್ಷ ರು.ಗೆ ತೆಲುಗು ಟೈಟನ್ಸ್‌ ಪಾಲಾದರು. ತಾರಾ ರೈಡರ್‌ಗಳಾದ ಸಿದ್ಧಾರ್ಥ್ ದೇಸಾಯಿ (1.3 ಕೋಟಿ ರು.)ಗೆ ತೆಲುಗು ಟೈಟನ್ಸ್‌ನಲ್ಲೇ ಉಳಿದರು. ಮನ್‌ಜೀತ್‌ (92 ಲಕ್ಷ ರು.) ತಮಿಳ್‌ ತಲೈವಾಸ್‌ ಪಾಲಾದರೆ, ಸಚಿನ್‌ ತನ್ವರ್‌ (84 ಲಕ್ಷ ರು.) ಪಾಟ್ನಾ ತಂಡಕ್ಕೆ ಸೇರಿದರು. ಶ್ರೀಕಾಂತ್‌ ಜಾಧವ್‌ (72 ಲಕ್ಷ ರು.)ರನ್ನು ಯು.ಪಿ.ಯೋಧ ಖರೀದಿಸಿತು. ರಾಹುಲ್‌ ಚೌಧರಿ (40 ಲಕ್ಷ ರು.) ಪುಣೇರಿ ಪಲ್ಟನ್‌ ತಂಡಕ್ಕೆ ಸೇರ್ಪಡೆಗೊಂಡರು.

ಬೆಂಗಳೂರು ತಂಡ ಇರಾನ್‌ನ ಅಬೋಲ್‌ಫಜಲ್‌ ಮಗ್ಸೂದ್ಲು, ಕೊರಿಯಾದ ಡಾಂಗ್‌ ಜಿಯೊನ್‌ ಲೀ, ಬಾಂಗ್ಲಾದೇಶದ ಜಿಯಾವುರ್‌ ರಹಮಾನ್‌, ಭಾರತದ ಮಹೇಂದರ್‌ ಸಿಂಗ್‌, ಚಂದ್ರನ್‌ ರಂಜಿತ್‌ರನ್ನು ಖರೀದಿಸಿತು.

ಗರಿಷ್ಠ ಮೊತ್ತ ಪಡೆದ ಅಗ್ರ 5 ಆಟಗಾರರು

ಆಟಗಾರ ಮೊತ್ತ(ರು.ಗಳಲ್ಲಿ) ತಂಡ

ಪ್ರದೀಪ್‌ ನರ್ವಾಲ್‌ 1.65 ಕೋಟಿ ಯು.ಪಿ. ಯೋಧ

ಸಿದ್ಧಾರ್ಥ್‌ ದೇಸಾಯಿ 1.3 ಕೋಟಿ ತೆಲುಗು ಟೈಟನ್ಸ್‌

ಮನ್‌ಜೀತ್‌ 92 ಲಕ್ಷ ತಮಿಳ್‌ ತಲೈವಾಸ್‌

ಸಚಿನ್‌ ತನ್ವರ್‌ 84 ಲಕ್ಷ ಪಾಟ್ನಾ ಪೈರೇಟ್ಸ್‌

ರೋಹಿತ್‌ ಗುಲಿಯಾ 83 ಲಕ್ಷ ಹರಾರ‍ಯಣ ಸ್ಟೀಲ​ರ್ಸ್‌