Pro Kabaddi League: ಬೆಂಗಳೂರಿನಲ್ಲಿ ಕಬಡ್ಡಿ ತಂಡಗಳ ಕ್ವಾರಂಟೈನ್‌ ಆರಂಭ

* 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿ ಆರಂಭಕ್ಕೆ ಕ್ಷಣಗಣನೆ

* ಬೆಂಗಳೂರಿಗೆ ಬಂದಿಳಿದ ಯು.ಪಿ. ಯೋಧಾ ತಂಡ

* ಬೆಂಗಳೂರಿನಲ್ಲಿ ಬಯೋ ಬಬಲ್‌ ಪ್ರವೇಶಿಸಿದ ಯೋಧಾ ತಂಡ

PKL 2021 UP Yoddha leaves team base enters bio bubble in Bengaluru kvn

ಬೆಂಗಳೂರು(ಡಿ.06): 8ನೇ ಆವೃತ್ತಿಯ ಪ್ರೊ ಕಬಡ್ಡಿಗೆ (Pro Kabaddi League) ತಂಡಗಳ ಅಂತಿಮ ಹಂತದ ಸಿದ್ಧತೆ ಆರಂಭಗೊಂಡಿದೆ. ಈಗಾಗಲೇ ಒಂದೊಂದೇ ತಂಡಗಳು ಬೆಂಗಳೂರಿಗೆ ಆಗಮಿಸುತ್ತಿದ್ದು ಕ್ವಾರಂಟೈನ್‌ ಪ್ರಕ್ರಿಯೆ ಆರಂಭಿಸಿವೆ. ಭಾನುವಾರ ಯು.ಪಿ.ಯೋಧಾ (UP Yoddha) ತಂಡ ಬೆಂಗಳೂರಿಗೆ ಆಗಮಿಸಿತು. ಎಲ್ಲಾ ತಂಡಗಳ ಆಟಗಾರರು, ಸಹಾಯಕ ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು ಬೆಂಗಳೂರಿಗೆ ಆಗಮಿಸಿದ ಬಳಿಕ 7 ದಿನಗಳ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ.

ಪ್ರತಿ 72 ಗಂಟೆಗೊಮ್ಮೆ ಎಲ್ಲರನ್ನೂ ಆರ್‌ಟಿ-ಪಿಸಿಆರ್‌ ಕೋವಿಡ್‌ ಪರೀಕ್ಷೆಗೆ (RT-PCR COVID Test) ಒಳಪಡಿಸಲಾಗುತ್ತದೆ. ಕ್ವಾರಂಟೈನ್‌ ಅವಧಿ ಮುಕ್ತಾಯಗೊಂಡ ಬಳಿಕ ತಂಡಗಳು ಬಯೋಬಬಲ್‌ನೊಳಕ್ಕೆ (Bio Bubble) ಪ್ರವೇಶಿಸಲಿವೆ. ಡಿಸೆಂಬರ್ 22ರಿಂದ ಟೂರ್ನಿ ಆರಂಭಗೊಳ್ಳಲಿದ್ದು, ಎಲ್ಲಾ ಪಂದ್ಯಗಳು ಬೆಂಗಳೂರಲ್ಲೇ ನಡೆಯಲಿವೆ. ನಿತೀಶ್ ಕುಮಾರ್ ನೇತೃತ್ವದ ಯು.ಪಿ. ಯೋಧಾ ತಂಡವು ಉದ್ಘಾಟನಾ ಪಂದ್ಯದಿಂದಲೇ ತನ್ನ ಅಭಿಯಾನವನ್ನು ಆರಂಭಿಸಲಿದೆ. 

 

PKL 2021 UP Yoddha leaves team base enters bio bubble in Bengaluru kvn

2022ರ ಡೇವಿಸ್‌ ಕಪ್‌: ಭಾರತ-ಡೆನ್ಮಾರ್ಕ್ ಸೆಣಸು

ಮ್ಯಾಡ್ರಿಡ್‌: 2022ರ ಡೇವಿಸ್‌ ಕಪ್‌ (Davis Cup) ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಷನ್‌(ಐಟಿಎಫ್‌) (International Tennis Federation) ಭಾನುವಾರ ಪ್ರಕಟಿಸಿಸ್ದು, ವಿಶ್ವ ಗುಂಪು 1 ಪ್ಲೇ-ಆಫ್‌ ಹಂತದಲ್ಲಿ ಭಾರತ ಸ್ಪರ್ಧಿಸಲಿದೆ. ಭಾರತಕ್ಕೆ ಡೆನ್ಮಾರ್ಕ್ ಎದುರಾಗಲಿದ್ದು, ಈ ಮುಖಾಮುಖಿಯ ಮಾ.4 ಹಾಗೂ 5ರಂದು ಭಾರತದಲ್ಲಿ ನಡೆಯಲಿದೆ. 

ಆತಿಥ್ಯ ವಹಿಸುವ ನಗರವನ್ನು ಮುಂಬರುವ ದಿನಗಳಲ್ಲಿ ಆಯೋಜಕರು ಘೋಷಿಸಲಿದ್ದಾರೆ. ಪ್ಲೇ-ಆಫ್ ಹಂತದಲ್ಲಿ ಒಟ್ಟು 24 ತಂಡಗಳು ಸ್ಪರ್ಧಿಸಲಿದ್ದು, ಗೆಲ್ಲುವ 12 ತಂಡಗಳು ವಿಶ್ವ ಗುಂಪು 1 ಹಂತಕ್ಕೆ ಅರ್ಹತೆ ಪಡೆಯಲಿವೆ. ಸೋಲುವ ತಂಡಗಳು ವಿಶ್ವ ಗುಂಪು 2ಕ್ಕೆ ಹಿಂಬಡ್ತಿ ಪಡೆಯಲಿವೆ.

Junior Hockey World Cup: ಭಾರತದ ಕೈ ತಪ್ಪಿದ ಕಂಚು..!

ಇನ್ನು ಭಾನುವಾರ ನಡೆದ ಡೇವಿಸ್ ಕಪ್ ಫೈನಲ್‌ ಪಂದ್ಯದಲ್ಲಿ ಕ್ರೊವೇಷಿಯಾ ತಂಡವನ್ನು ಮಣಿಸಿದ ರಷ್ಯಾ ತಂಡವು (Russia Team) ಮೂರನೇ ಬಾರಿಗೆ ಡೇವಿಸ್ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಬಲಿಷ್ಠ ರಷ್ಯಾ ತಂಡವು 2-0 ಅಂತರದಲ್ಲಿ ಕ್ರೊವೇಷಿಯಾವನ್ನು ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಮೊದಲ ಸಿಂಗಲ್ಸ್‌ನಲ್ಲಿ ಆಂಡ್ರೆ ರುಬ್ಲೆವ್‌ 6-4, 7-5 ಸೆಟ್‌ಗಳಿಂದ ಬೋರ್ನಾ ಅವರನ್ನು ಮಣಿಸಿದರೆ, ಡೇನಿಯಲ್ ಮೆಡ್ವೆಡೆವ್‌ 7-6, 6-2 ನೇರ ಸೆಟ್‌ಗಳಿಗೆ ಮರಿನ್ ಸಿಲಿಕ್‌ ವಿರುದ್ದ ಗೆದ್ದು ಬೀಗಿದರು.

ಐಎಸ್‌ಎಲ್‌: ಮುಂಬೈ ವಿರುದ್ಧ ಸೋತ ಬಿಎಫ್‌ಸಿ

ಬಾಬೊಲಿಮ್‌: 8ನೇ ಆವೃತ್ತಿಯ ಐಎಸ್‌ಎಲ್‌ ಫುಟ್ಬಾಲ್‌ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) (Bengaluru FC) 2ನೇ ಸೋಲು ಕಂಡಿದೆ. ಶನಿವಾರ ರಾತ್ರಿ ನಡೆದ ಮುಂಬೈ ಸಿಟಿ ಎಫ್‌ಸಿ (Mumbai FC) ವಿರುದ್ಧದ ಪಂದ್ಯದಲ್ಲಿ ಸುನಿಲ್‌ ಚೆಟ್ರಿ (Sunil Chhetri) ಪಡೆ 1-3 ಗೋಲುಗಳ ಸೋಲು ಅನುಭವಿಸಿತು. 

Junior Hockey World Cup: ಭಾರತದ ಕೈ ತಪ್ಪಿದ ಕಂಚು..!

9ನೇ ನಿಮಿಷದಲ್ಲೇ ಇಗೊರ್‌ ಆ್ಯಂಗುಲೊ ಮುಂಬೈ ಪರ ಗೋಲು ಗಳಿಸಿದರು. 20ನೇ ನಿಮಿಷದಲ್ಲಿ ಕ್ಲೆಯಿಟನ್‌ ಸಿಲ್ವಾ ಬಾರಿಸಿದ ಗೋಲಿನ ನೆರವಿನಿಂದ ಸಮಬಲ ಸಾಧಿಸಿತು. ಆದರೆ 54, 85ನೇ ನಿಮಿಷದಲ್ಲಿ ಮುಂಬೈ ಗೋಲು ಬಾರಿಸಿ ಪಂದ್ಯ ತನ್ನದಾಗಿಸಿಕೊಂಡಿತು. 4 ಪಂದ್ಯಗಳಿಂದ ಕೇವಲ 4 ಅಂಕ ಗಳಿಸಿರುವ ಬಿಎಫ್‌ಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಬಾಂಗ್ಲಾ-ಪಾಕ್‌ ಟೆಸ್ಟ್‌: 2ನೇ ದಿನ ಮಳೆಗೆ ಬಲಿ

ಢಾಕಾ: ಪಾಕಿಸ್ತಾನ ಹಾಗೂ ಬಾಂಗ್ಲಾದೇಶ (Pakistan vs Bangladesh) ನಡುವಿನ 2ನೇ ಟೆಸ್ಟ್‌ಗೆ ಮಳೆ ಅಡ್ಡಿ ಪಡಿಸುತ್ತಿದೆ. 2ನೇ ದಿನವಾದ ಭಾನುವಾರ ಕೇವಲ 6.2 ಓವರ್‌ ಆಟ ನಡೆಯಿತು. ಮೊದಲ ದಿನದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 161 ರನ್‌ ಗಳಿಸಿದ್ದ ಪಾಕಿಸ್ತಾನ, 2ನೇ ದಿನದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 188 ರನ್‌ ಕಲೆಹಾಕಿದೆ. ಬಾಬರ್‌ ಆಜಂ 71, ಅಜರ್‌ ಅಲಿ 52 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.
 

Latest Videos
Follow Us:
Download App:
  • android
  • ios