ಒಲಿಂಪಿಕ್ಸ್ ಕಂಚು ಗೆಲ್ಲಲು ಮನು ಭಾಕರ್ ಮೇಲೆ ಕೇಂದ್ರ ಸರ್ಕಾರ ಖರ್ಚು ಮಾಡಿದ್ದು ಬರೋಬ್ಬರಿ ₹2 ಕೋಟಿ..!

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮನು ಭಾಕರ್ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. ಮನು ಭಾಕರ್ ಪದಕ ಗೆಲ್ಲಲು ಸರ್ಕಾರವು 2 ಕೋಟಿ ರುಪಾಯಿ ಖರ್ಚು ಮಾಡಿದೆ ಎಂದು ಕೇಂದ್ರ ಕ್ರೀಡಾಸಚಿವರು ತಿಳಿಸಿದ್ದಾರೆ.

Paris Olympics 2024 Union Sports Minister Mansukh Mandaviya Reveals Whopping Amount Spent On Manu Bhaker Training kvn

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾನುವಾರ ಭಾರತ ಪದಕದ ಖಾತೆ ತೆರೆದಿದೆ. ಹರ್ಯಾಣ ಮೂಲದ 22 ವರ್ಷದ ಯುವ  ಶೂಟರ್, ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಶೂಟಿಂಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎನ್ನುವ ಹಿರಿಮಗೆ ಮನು ಪಾತ್ರರಾ ಇದೀಗ ಕೇಂದ್ರ ಕ್ರೀಡಾ ಸಚಿವ ಮನ್ಸುಖ್‌ ಮಾಂಡವೀಯಾ, ಮನು ಭಾಕರ್ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ಆಕೆ ಪದಕ ಗೆಲ್ಲಲು ಎಷ್ಟು ಶ್ರಮವಿದೆ ಎಂದು ವಿವರಿಸಿದ್ದಾರೆ.

ಮನು ಭಾಕರ್, ಪದಕ ಜಯಿಸಿದ ಬಳಿಕ ಎಎನ್‌ಐ ಸುದ್ದಿಸಂಸ್ಥೆಯ ಜತೆ ಮಾತನಾಡಿದ ಮನ್ಸುಖ್‌ ಮಾಂಡವೀಯಾ, "ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಕಂಚಿನ ಪದಕ ಜಯಿಸುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಆಕೆಯ ಜತೆ ಮಾತನಾಡಿದ ಅವರು ತಾವು ಖೇಲೋ ಇಂಡಿಯಾದ ಭಾಗವಾಗಿದ್ದರು ಎಂದು ತಿಳಿಯಿತು. ಖೇಲೋ ಇಂಡಿಯಾ ಪ್ರಧಾನಿ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದರಿಂದ ದೇಶದಲ್ಲಿ ಕ್ರೀಡಾ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿ ಪಡಿಸಲಾಗಿದೆ. ಇದರ ಜತೆಗೆ ಈ ಯೋಜನೆ ಮೂಲಕ ಶಾಲಾ ಹಾಗೂ ಕಾಲೇಜು ಮಟ್ಟದಿಂದಲೇ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಪತ್ತೆಹಚ್ಚಲಾಗುತ್ತಿದೆ. ಈ ವೇಳೆ ಬೆಳಕಿಗೆ ಬಂದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಟಾಪ್ಸ್ ಯೋಜನೆ ಮೂಲಕ ಉತ್ತಮ ಕೋಚ್‌ಗಳಿಂದ ತರಬೇತಿ ನೀಡಲಾಗುತ್ತಾ ಬಂದಿದೆ. ಈ ಮೂಲಕ ಕ್ರೀಡಾಪಟುಗಳಿಗೆ ಯಾವುದೇ ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ" ಎಂದು ಹೇಳಿದ್ದಾರೆ.

ಕೋಚ್‌ ಜೊತೆ ಕಿತ್ತಾಡಿಕೊಂಡಿದ್ದ ಮನು ಭಾಕರ್‌ ಜೀವನ ಬದಲಾಯಿಸಿದ್ದು ಅದೇ ಕೋಚ್‌ನ 'ಆ ಒಂದು ಕಾಲ್‌..'!

"ಮನು ಭಾಕರ್ ಅವರ ತರಬೇತಿಗಾಗಿ ಇದುವರೆಗೂ ಕೇಂದ್ರ ಸರ್ಕಾರ ಸುಮಾರು 2 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದೆ. ಟ್ರೈನಿಂಗ್‌ಗಾಗಿ ಆಕೆಯನ್ನು ಜರ್ಮನಿ ಹಾಗೂ ಸ್ವಿಟ್ಜರ್‌ಲೆಂಡ್‌ಗೆ ಕಳಿಸಿಕೊಡಲಾಗಿತ್ತು. ಮನು ಭಾಕರ್‌ಗೆ ಬೇಕಾದ ಕೋಚ್ ಆಯ್ಕೆ ಮಾಡಿಕೊಳ್ಳಲು ಆಕೆಗೆ ಹಣಕಾಸಿನ ನೆರವು ನೀಡಲಾಗಿತ್ತು. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಲು ಅಗತ್ಯವಿರುವ ಎಲ್ಲಾ ಸೌಲಭ್ಯವನ್ನು ಒದಗಿಸುವ ವಾತಾವರಣವನ್ನು ನಾವು ಸೃಷ್ಟಿಸಿದ್ದೇವೆ. ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಮ್ಮ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ" ಎಂದು ಮನ್ಸುಕ್ ಮಾಂಡವೀಯಾ ಹೇಳಿದ್ದಾರೆ.

ಕಳೆದ ವರ್ಷ ಶೂಟಿಂಗ್‌ನಿಂದ ದೂರವಾಗಲು ನಿರ್ಧರಿಸಿದ್ದ ಮನು ಭಾಕರ್‌ಗೆ ಈಗ ಒಲಿಂಪಿಕ್ಸ್‌ ಪದಕ! ಇಂಟ್ರೆಸ್ಟಿಂಗ್ ಡೀಟೈಲ್ಸ್

ಒಲಿಂಪಿಕ್ಸ್‌ ಪದಕ ಗೆದ್ದ ಭಾರತದ 8ನೇ ಮಹಿಳೆ

ಮನು ಭಾಕರ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ 8ನೇ ಮಹಿಳಾ ಅಥ್ಲೀಟ್‌. 2000ದ ಸಿಡ್ನಿ ಒಲಿಂಪಿಕ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಭಾರತದ ಪರ ಮೊದಲ ಪದಕ (ಕಂಚು) ಗೆದ್ದಿದ್ದರು. 2012ರಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್‌ (ಕಂಚು), ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್‌ (ಕಂಚು), 2016ರಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು (ಬೆಳ್ಳಿ), ಕುಸ್ತಿಯಲ್ಲಿ ಸಾಕ್ಷಿ ಮಲಿಕ್‌ (ಕಂಚು), 2020ರಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು (ಬೆಳ್ಳಿ), ಬ್ಯಾಡ್ಮಿಂಟನ್‌ನಲ್ಲಿ ಸಿಂಧು (ಕಂಚು), ಬಾಕ್ಸಿಂಗ್‌ನಲ್ಲಿ ಲವ್ಲೀನಾ ಬೊರ್ಗೊಹೈನ್‌ (ಕಂಚು) ಪದಕ ಗೆದ್ದಿದ್ದರು. ಸಿಂಧು ಮಾತ್ರ 2 ಒಲಿಂಪಿಕ್ಸ್‌ ಪದಕ ಜಯಿಸಿದ್ದಾರೆ.

12 ವರ್ಷಗಳ ಪದಕ ಬರ ನೀಗಿಸಿದ ಮನು ಭಾಕರ್‌

ಭಾರತ ಒಲಿಂಪಿಕ್ಸ್‌ನ ಶೂಟಿಂಗ್‌ನಲ್ಲಿ ಕಳೆದ 12 ವರ್ಷಗಳಿಂದ ಎದುರಿಸುತ್ತಿದ್ದ ಪದಕ ಬರವನ್ನು ಮನು ನೀಗಿಸಿದರು. 2012ರಲ್ಲಿ ವಿಜಯ್‌ ಕುಮಾರ್‌ ಬೆಳ್ಳಿ, ಗಗನ್‌ ನಾರಂಗ್‌ ಕಂಚು ಗೆದ್ದಿದ್ದರು. ಆ ಬಳಿಕ ಕಳೆದೆರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆಲ್ಲಲು ಶೂಟರ್‌ಗಳು ವಿಫಲರಾಗಿದ್ದರು.

Latest Videos
Follow Us:
Download App:
  • android
  • ios