ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ತಮ್ಮ ಪಿಸ್ತೂಲ್ ಕೈಕೊಟ್ಟ ಕಾರಣ ಭಾಕರ್ ಫೈನಲ್‌ಗೇರಲು ವಿಫಲವಾಗಿದ್ದರು. ಈ ಬಾರಿ ಪದಕ ನಿರೀಕ್ಷೆಯಲ್ಲಿರುವ 22 ವರ್ಷದ ಭಾಕರ್, ಇಂದು ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ
ಪ್ಯಾರಿಸ್: ಭಾರತದ ಬಹುತೇಕ ಶೂಟರ್‌ಗಳು ಶನಿವಾರ ನಿರಾಸೆ ಮೂಡಿಸಿದರೂ, ಸ್ಟಾರ್ ಶೂಟರ್ ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ. ಮನು ಭಾಕರ್ ಅವರು ಅರ್ಹತಾ ಸುತ್ತಿನಲ್ಲಿ 600ಕ್ಕೆ 580 ಅಂಕಗಳನ್ನು ಸಂಪಾದಿಸಿ ಮೂರನೇ ಸ್ಥಾನಿಯಾಗಿ ಪದಕ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ತಮ್ಮ ಪಿಸ್ತೂಲ್ ಕೈಕೊಟ್ಟ ಕಾರಣ ಭಾಕರ್ ಫೈನಲ್‌ಗೇರಲು ವಿಫಲವಾಗಿದ್ದರು. ಈ ಬಾರಿ ಪದಕ ನಿರೀಕ್ಷೆಯಲ್ಲಿರುವ 22 ವರ್ಷದ ಭಾಕರ್, ಇಂದು ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ. ಇಂದು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್ ಪಂದ್ಯವು ಮಧ್ಯಾಹ್ನ 3.30ಕ್ಕೆ ನಡೆಯಲಿದೆ.
ಫೈನಲ್ ಪಂದ್ಯದ ನೇರ ಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನೆಮಾ
ಸಮಯ: ಮಧ್ಯಾಹ್ನ 3.30ರಿಂದ
20 ವರ್ಷದಲ್ಲೇ ಫೈನಲ್‌ಗೇರಿದ ಭಾರತದ ಮೊದಲ ಶೂಟರ್
ಮನು ಕಳೆದ 20 ವರ್ಷಗಳಲ್ಲೇ ಒಲಿಂಪಿಕ್ಸ್ ವೈಯಕ್ತಿಕ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಶೂಟರ್ ಎನಿಸಿಕೊಂಡಿದ್ದಾರೆ. 2004ರ ಅಥೆನ್ಸ್ ಒಲಿಂಪಿಕ್ಸ್‌ನ ಮಹಿಳೆಯರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಸುಮಾ ಶಿರೂರ್ ಫೈನಲ್‌ಗೇರಿದ್ದರು. ಆದರೆ 8ನೇ ಸ್ಥಾನ ಪಡೆದು ಪದಕ ತಪ್ಪಿಸಿಕೊಂಡಿದ್ದರು.
ಸಾತ್ವಿಕ್-ಚಿರಾಗ್, ಸೇನ್ ಶುಭಾರಂಭ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ತಾರಾ ಶಟ್ಲರ್‌ಗಳು ಶುಭಾರಂಭ ಮಾಡಿದ್ದಾರೆ. ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.18 ಲಕ್ಷ್ಯ ಸೇನ್ ಅವರು ಗ್ವಾಟೆಮಾಲಾ ದೇಶದ, ವಿಶ್ವ ರ್‍ಯಾಂಕಿಂಗ್‌ನಲ್ಲಿ 41ನೇ ಸ್ಥಾನದಲ್ಲಿರುವ ಕೆವಿನ್ ಕಾರ್ಡನ್ ವಿರುದ್ಧ 21-8, 22-20 ಗೇಮ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಪುರುಷರ ಡಬಲ್ಸ್‌ನಲ್ಲಿ ಪದಕ ಗೆಲ್ಲುವ ಫೇವರಿಟ್ ಎನಿಸಿಕೊಂಡಿರುವ, ವಿಶ್ವ ನಂ.3 ಸಾತ್ವಿಕ್-ಚಿರಾಗ್ ಅವರು ಆರಂಭಿಕ ಸುತ್ತಿನಲ್ಲಿ ಶ್ರೇಯಾಂಕರಹಿತ, ಫ್ರಾನ್ಸ್‌ನ ಲುಕಾಸ್-ಲಾಬರ್ ರೊನನ್ ವಿರುದ್ಧ 21-17, 21-14 ನೇರ ಗೇಮ್‌ಗಳಲ್ಲಿ ಗೆದ್ದು 2ನೇ ಸುತ್ತು ಪ್ರವೇಶಿಸಿದರು.
ಟಿಟಿಯಲ್ಲಿ ಗೆಲುವು: ಇದೇ ವೇಳೆ ಪುರುಷರ ಟೇಬಲ್ ಟೆನಿಸ್‌ನಲ್ಲಿ ಹರ್ಮಿತ್ ದೇಸಾಯಿ ಮೊದಲ ಸುತ್ತಿನಲ್ಲಿ ಜೋರ್ಡನ್‌ನ ಝೈದ್ ಅಬು ಯಮನ್ ವಿರುದ್ಧ 4-0 ಅಂತರದಲ್ಲಿ ಜಯಭೇರಿ ಬಾರಿಸಿದರು.
ಪ್ಯಾರಿಸ್ ಒಲಿಂಪಿಕ್ಸ್ ಕಣದಲ್ಲಿ ಐವರು ಆಳ್ವಾಸ್ ಹಳೆಯ ವಿದ್ಯಾರ್ಥಿಗಳು!
ಕ್ರೀಡಾಕೂಟದ ಮೊದಲ ಪದಕ ಗೆದ್ದ ಕಜಕಸ್ತಾನ
ಪ್ಯಾರಿಸ್ ಒಲಿಂಪಿಕ್ಸ್‌ನ ಮೊದಲ ಪದಕ ಕಜಕಸ್ತಾನದ ಪಾಲಾಯಿತು. ಶನಿವಾರ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಕಜಕಸ್ತಾನದ ಅಲೆಕ್ಸಾಂಡ್ರಾ ಲೆ ಹಾಗೂ ಇಸ್ಲಾಂ ಸತ್ಪಯೆವ್ ಕಂಚು ತಮ್ಮದಾಗಿಸಿಕೊಂಡರು. ಇನ್ನು, ಚೀನಾದ ಕೂಟದ ಮೊದಲ ಚಿನ್ನ, ದ.ಕೊರಿಯಾ ಮೊದಲ ಬೆಳ್ಳಿ ಪದಕ ಜಯಿಸಿತು.
