ವಿಶ್ವ ಪ್ಯಾರಾ ಕ್ಲೈಂಬಿಂಗ್: ರಾಜ್ಯದ ಸುನಿತಾಗೆ ಒಲಿದ ಕಂಚು
* ಪ್ಯಾರಾ ಕ್ಲೈಬಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಕನ್ನಡತಿ ಸುನಿತಾ
* ಮಹಿಳೆಯರ ಲೀಡ್ ಬಿ3 ವಿಭಾಗದಲ್ಲಿ ಸುನಿತಾ ದುಂಡಪ್ಪನವರಿಗೆ ಒಲಿದ ಕಂಚಿನ ಪದಕ
* ರಷ್ಯಾದ ಮಾಸ್ಕೋದಲ್ಲಿ ನಡೆದ ಪ್ಯಾರಾ ಕ್ಲೈಬಿಂಗ್ ವಿಶ್ವ ಚಾಂಪಿಯನ್‌ಶಿಪ್
ಬೆಳಗಾವಿ(ಸೆ.19): ಪ್ಯಾರಾ ಕ್ಲೈಬಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಸುನಿತಾ ದುಂಡಪ್ಪನವರ ಐತಿಹಾಸಿಕ ಕಂಚಿನ ಪದಕ ಜಯಿಸಿದ್ದಾರೆ. ರಷ್ಯಾದ ಮಾಸ್ಕೋದಲ್ಲಿ ನಡೆದ ಚಾಂಪಿಯನ್‌ಶಿಪ್‌ನ ಮಹಿಳೆಯರ ಲೀಡ್ ಬಿ3 ವಿಭಾಗದಲ್ಲಿ ಸುನಿತಾ ಪದಕ ಸಾಧನೆ ಮಾಡಿದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಗೆದ್ದ ಏಕೈಕ ಪದಕವಿದು ಎನ್ನುವುದು ವಿಶೇಷ.
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ತೋಲಗಿ ಗ್ರಾಮದ ಸುನಿತಾ, ಸಮರ್ಥನಂ ಅಂಗವಿಕಲ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಾರೆ. ಇದೇ ಮೊದಲ ಬಾರಿಗೆ ಅರೆ ದೃಷ್ಟಿದೋಷವುಳ್ಳವರ ವಿಭಾಗ (ಬಿ3 ಅಥವಾ ಅರೆ ದೃಷ್ಟಿದೋಷ)ದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಪ್ಯಾರಾಕ್ಲೈಂಬಿಂಗ್ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಸಮರ್ಥನಂ ಸಂಸ್ಥೆಯ ಮೂವರು ಆಟಗಾರರು ಭಾರತವನ್ನು ಪ್ರತಿನಿಧಿಸಿದ್ದರು. ಸಮರ್ಥನಂ ಸಂಸ್ಥೆಯ ಕ್ರೀಡಾ ಸಂಯೋಜಕಿ ಶಿಖಾ ಜೊತೆ ಮೂವರು ಕ್ರೀಡಾಪಟುಗಳು ರಷ್ಯಾದ ಮಾಸ್ಕೋಗೆ ತೆರಳಿದ್ದರು. ಮೂವರ ಪೈಕಿ ಬೆಳಗಾವಿಯ ಸುನಿತಾ ದುಂಡಪ್ಪನವರಗೆ ಕಂಚಿನ ಪದಕ ಸಿಕ್ಕಿದೆ. ಸುನಿತಾ ದುಂಡಪ್ಪನವರ ಸಾಧನೆಗೆ ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹಾಂತೇಶ ಕಿವಡಸಣ್ಣವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡೇವಿಸ್ ಕಪ್: ಫಿನ್ಲೆಂಡ್ ವಿರುದ್ಧ ಭಾರತ ಟೆನಿಸ್ ಸೋಲು..!
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಮರ್ಥನಂ ಸಂಸ್ಥೆಯ ಮೂವರು ಆಟಗಾರರು ಭಾರತವನ್ನು ಪ್ರತಿನಿಧಿಸಿದ್ದರು. 20 ರಾಷ್ಟ್ರಗಳ ಸುಮಾರು 120 ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು.