* ಡೇವಿಸ್‌ ಕಪ್ ಟೆನಿಸ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಘಾತಕಾರಿ ಸೋಲು* ಫಿನ್ಲೆಂಡ್‌ ಎದುರು ಭಾರತ 1-3ರಲ್ಲಿ ಸೋತು ಹಿಂಬಡ್ತಿ ಪಡೆದಿದೆ. * ಮೊದಲ ದಿನವೇ 2 ಸಿಂಗಲ್ಸ್‌ ಪಂದ್ಯಗಳಲ್ಲಿ ಸೋತು 0-2ರಿಂದ ಹಿನ್ನಡೆ ಅನುಭವಿಸಿದ್ದ ಭಾರತ

ಎಸ್ಪೂ(ಸೆ.19‌): ಡೇವಿಸ್‌ ಕಪ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಭಾರತ ಮುಖಭಂಗ ಅನುಭವಿಸಿದೆ. ಫಿನ್ಲೆಂಡ್‌ ವಿರುದ್ಧ ವಿಶ್ವ ಗುಂಪು-1ರ ಪಂದ್ಯದಲ್ಲಿ ಭಾರತ 1-3ರಲ್ಲಿ ಸೋತು ಹಿಂಬಡ್ತಿ ಪಡೆದಿದೆ. 2022ರ ಡೇವಿಸ್‌ ಕಪ್‌ನಲ್ಲಿ ಭಾರತ, ವಿಶ್ವ ಗುಂಪು-1ರಲ್ಲಿ ಉಳಿದುಕೊಳ್ಳಬೇಕಿದ್ದರೆ ಪ್ಲೇ-ಆಫ್‌ನಲ್ಲಿ ಆಡಬೇಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲ ದಿನವೇ ಎರಡೂ ಸಿಂಗಲ್ಸ್‌ ಪಂದ್ಯಗಳಲ್ಲಿ ಸೋತು 0-2ರಿಂದ ಹಿನ್ನಡೆ ಅನುಭವಿಸಿದ್ದ ಭಾರತ, ಶನಿವಾರ ಡಬಲ್ಸ್‌ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತು. ಕೊನೆ ಕ್ಷಣದಲ್ಲಿ ರೋಹನ್‌ ಬೋಪಣ್ಣ ಜೊತೆ ದಿವಿಜ್‌ ಶರಣ್‌ ಬದಲಿಗೆ ರಾಮ್‌ಕುಮಾರ್‌ ರಾಮನಾಥನ್‌ರನ್ನೇ ಕಣಕ್ಕಿಳಿಸಲು ತಂಡದ ನಾಯಕ ರೋಹಿತ್‌ ರಾಜ್‌ಪಾಲ್‌ ನಿರ್ಧರಿಸದರು. 

Scroll to load tweet…

ನಮ್ಮ ಸಂಬಂಧ ಸರಿಯಿರಲಿಲ್ಲ: ಭೂಪತಿ ಬಗ್ಗೆ ಪೇಸ್‌ ಅಚ್ಚರಿಯ ಹೇಳಿಕೆ

ಆದರೆ ನಿರ್ಣಾಯಕ ಪಂದ್ಯದಲ್ಲಿ ಬೋಪಣ್ಣ-ರಾಮ್‌ಕುಮಾರ್‌ ಜೋಡಿಯು 6-7, 6-7 ಸೆಟ್‌ಗಳಲ್ಲಿ ಹೆನ್ರಿ ಕೊಂಟಿನೆನ್‌ ಹಾಗೂ ಹಾರ್ರಿ ಹೆಲಿಯೊವಾರ ಜೋಡಿ ವಿರುದ್ಧ ಸೋಲುಂಡಿತು. ಔಪಚಾರಿಕವೆನಿಸಿದ್ದ 4ನೇ ಪಂದ್ಯದಲ್ಲಿ ಪ್ರಜ್ನೇಶ್‌ ಗೆದ್ದು ಸೋಲಿನ ಅಂತರವನ್ನು 1-3ಕ್ಕೆ ತಗ್ಗಿಸಿದರು.