ಲಂಡನ್(ಮಾ.30): ಪಾಕಿಸ್ತಾನದ ದಿಗ್ಗಜ ಸ್ಕಾಶ್ ಆಟಗಾರ ಅಝಮ್ ಖಾನ್(95 ವರ್ಷ) ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಲಂಡನ್‌ನಲ್ಲಿ ನೆಲೆಸಿರುವ ಅಝಮ್ ಖಾನ್ ಕೊರೋನಾ ವೈರಸ್‌ನಿಂದ ಆಸ್ಪತ್ರೆ ದಾಖಲಾಗಿದ್ದರು.  ಇದೀಗ ಚಿಕಿತ್ಸೆಗೆ ದೇಹ ಸ್ಪಂಧಿಸದೇ ಸಾವನ್ನಪ್ಪಿದ್ದಾರೆ. ಕಳೆದವಾರ ಅಝಮ್ ಖಾನ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಲಂಡನ್‌ನ ಎಲಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಅಝಮ್ ಖಾನ್ ನಿಧನರಾಗಿದ್ದಾರೆ.

IPL 2020 ಟೂರ್ನಿ ರದ್ದಾದ್ರೆ ಕೆಲ ಕ್ರಿಕೆಟಿಗರ ಕೆರಿಯರ್ ಕ್ಲೋಸ್..!

1951 ರಿಂದ 1962ರ ವರೆಗೆ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದ ಅಝಮ್ ಖಾನ್ ಅತ್ಯುತ್ತಮ ಆಟಗಾರ ಹಾಗೂ ನಂ.1 ಸ್ಥಾನ ಅಲಂಕರಿಸಿದ್ದರು. ಶ್ರೇಷ್ಠ ಸ್ಕ್ವಾಶ್ ಪಟು ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅಜಮ್ ಖಾನ್ 1956ರಲ್ಲಿ ಪಾಕಿಸ್ತಾನದಿಂದ ಲಂಡನ್‌ಗೆ ಸ್ಥಳಾಂತರ ಗೊಂಡಿದ್ದರು. 1956ರಿಂದ ಲಂಡನ್‌ನಲ್ಲೇ ನೆಲೆಸಿದ್ದಾರೆ. 

ಅಝಮ್ ಖಾನ್ ಕರಿಯರ್‌ನ ಉತ್ತುಂಗದಲ್ಲಿದ್ದಾಗ ತಮ್ಮ 14 ವರ್ಷದ ಮಗ ದಿಢೀರ್ ಸಾವಿನಿಂದ ಚೇತರಿಸಿಕೊಳ್ಳಲಿಲ್ಲ. ಮಗನ ಸಾವಿನಿಂದ ಅಝಮ್ 1962ರಲ್ಲಿ ಸ್ಕ್ವಾಶ್ ಆಟಕ್ಕೆ ವಿದಾಯ ಹೇಳಿದರು. ಪಾಕಿಸ್ತಾನದಲ್ಲಿ ಪೇಶಾವರ ಹುಟ್ಟಿದ ಅಝಮ್ ಖಾನ್ ಇದೀಗ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ.