ಆರ್ಲಿಯಾನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್: ಸೆಮೀಸ್‌ನಲ್ಲಿ ಮುಗ್ಗರಿಸಿದ ಸೈನಾ
ಆರ್ಲಿಯಾನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತದ ತಾರಾ ಆಟಗಾರ್ತಿ ಸೈನಾ ನೆಹ್ವಾಲ್ ಹೋರಾಟ ಅಂತ್ಯವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಪ್ಯಾರಿಸ್(ಮಾ.28): ಭಾರತದ ತಾರಾ ಆಟಗಾರ್ತಿ ಸೈನಾ ನೆಹ್ವಾಲ್ ಆರ್ಲಿಯಾನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸೋಲುಂಡಿದ್ದಾರೆ. ಆದರೆ, ಯಾವುದೇ ನಿರೀಕ್ಷೆ ಮೂಡಿಸದ ಕೃಷ್ಣ ಪ್ರಸಾದ್ ಗರಗ ಹಾಗೂ ವಿಷ್ಣುವರ್ಧನ್ ಗೌಡ ಪಂಜಾಲ ಜೋಡಿ ಪುರುಷರ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಸೆಮೀಸ್ ಪಂದ್ಯದಲ್ಲಿ ಡೆನ್ಮಾರ್ಕ್ನ ಲೈನ್ ಕ್ರಿಸ್ಟೋಫರ್ಸನ್ ವಿರುದ್ಧ ಸೈನಾ 17-21, 17-21 ಗೇಮ್‌ಗಳಿಂದ ಸೋಲುಂಡರು. ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಡೆನ್ಮಾರ್ಕ್ ಆಟಗಾರ್ತಿ, ಕೇವಲ 28 ನಿಮಿಷದಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಜೋಡಿ ಥಾಯ್ಲೆಂಡ್‌ನ ಜೊಂಗ್‌ಕೋಲ್ಫಾನ್ ಮತ್ತು ರವೀಂಡಾ ಪ್ರಜೊಂಗ್ಜೈ ಜೋಡಿ ವಿರುದ್ಧ 18-21, 9-21 ಗೇಮ್‌ಗಳಿಂದ ಸೋಲುಂಡರು.
ಆರ್ಲಿಯಾನ್ಸ್ ಮಾಸ್ಟರ್ಸ್: ಸೆಮೀಸ್‌ಗೆ ಸೈನಾ, ಶ್ರೀಕಾಂತ್‌ಗೆ ಸೋಲು
ಅಚ್ಚರಿ ಮೂಡಿಸಿ ಗರಗ-ಪಂಜಾಲ:
ಪುರುಷರ ಡಬಲ್ಸ್‌ನ ಸೆಮಿಫೈನಲ್ ಪಂದ್ಯದಲ್ಲಿ ಕೃಷ್ಣಪ್ರಸಾದ್ ಗರಗ ಹಾಗೂ ವಿಷ್ಣುವರ್ಧನ್ ಗೌಡ ಪಂಜಾಲ ಜೋಡಿ ಇಂಗ್ಲೆಂಡ್‌ನ ಕ್ಯಾಲಮ್ ಹೆಮ್ಮಿಂಗ್ ಹಾಗೂ ಸ್ಟೀವನ್ ಸ್ಟಾಲ್‌ವುಡ್ ವಿರುದ್ಧ 21-17, 21-17 ವಿರುದ್ಧ ಅಚ್ಚರಿಯ ಜಯ ಸಾಧಿಸಿ ಫೈನಲ್ ಪ್ರವೇಶಿಸಿದರು. ಪದಕದ ಕಾರಣವಲ್ಲದಿದ್ದರೂ ಮುಂಬರುವ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಅಂಕಗಳ ಪಡೆಯುವ ದೃಷ್ಟಿಯಿಂದ ಟೂರ್ನಿ ಮಹತ್ವದಾಗಿತ್ತು.