ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌ ಬರೋಬ್ಬರಿ 2 ವರ್ಷಗಳ ಬಳಿಕ ಮೊದಲ ಬಾರಿಗೆ ಟೂರ್ನಿಯೊಂದರಲ್ಲಿ ಸೆಮೀಸ್ ಫೈನಲ್‌ ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಪ್ಯಾರಿಸ್(ಮಾ.27)‌: ಆರ್ಲಿಯಾನ್ಸ್‌ ಮಾಸ್ಟ​ರ್ಸ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ ಸೈನಾ ನೆಹ್ವಾಲ್‌ ಸೆಮಿಫೈನಲ್‌ ಪ್ರವೇಶಿಸಿದರೆ, ಕಿದಂಬಿ ಶ್ರೀಕಾಂತ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೈನಾ, ಅಮೆರಿಕದ ಐರಿಸ್‌ ವಾಂಗ್‌ ವಿರುದ್ಧ 21-19, 17-21, 21-19 ಗೇಮ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. 2 ವರ್ಷಗಳಲ್ಲಿ ಸೈನಾ ಮೊದಲ ಬಾರಿಗೆ ಟೂರ್ನಿಯೊಂದರ ಸೆಮೀಸ್‌ಗೇರಿದ್ದಾರೆ.

Scroll to load tweet…

ಖೇಲೋ ಇಂಡಿಯಾಗೆ ಯೋಗಾಸನ ಸೇರ್ಪಡೆ: ಕಿರಣ್ ರಿಜಿಜು

ಪುರುಷರ ಕ್ವಾರ್ಟರ್‌ ಫೈನಲ್‌ನಲ್ಲಿ ಶ್ರೀಕಾಂತ್‌, ಫ್ರಾನ್ಸ್‌ನ ಟೊಮಾ ಪೊಪೊವ್‌ ವಿರುದ್ಧ 19-21, 17-21 ಗೇಮ್‌ಗಳಲ್ಲಿ ಸೋತು ಹೊರಬಿದ್ದರು. ಇದೇ ವೇಳೆ ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿಮ ರೆಡ್ಡಿ ಜೋಡಿ ಸೆಮಿಫೈನಲ್‌ ಪ್ರವೇಶಿಸಿತು.

Scroll to load tweet…