ಯೋಗಾಸನಕ್ಕೆ ಪ್ರೋತ್ಸಾಹ ನೀಡುವ ಉದ್ದೇಸದಿಂದ 2021ರ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಯೋಗಾಸನವನ್ನು ಸೇರ್ಪಡೆಗೊಳಿಸಿರುವುದಾಗಿ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮಾ.26): ಈ ವರ್ಷದಿಂದ ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟದಲ್ಲಿ ಯೋಗಾಸನವನ್ನು ಸೇರ್ಪಡೆಗೊಳಿಸಿರುವುದಾಗಿ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಗುರುವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ. 

ಯೋಗಾಸನವನ್ನು ಸ್ಪರ್ಧಾತ್ಮಕ ಕ್ರೀಡೆಯನ್ನಾಗಿ ಅಭಿವೃದ್ಧಿ ಪಡಿಸುವ ಸಲುವಾಗಿ ಈ ಯೋಜನೆ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಇದೇ ವೇಳೆ ರಾಷ್ಟ್ರೀಯ ಯೋಗಾಸನ ಕ್ರೀಡಾ ಫೆಡರೇಷನ್‌(ಎನ್‌ವೈಎಸ್‌ಎಫ್‌)ಗೆ ದೇಶದಲ್ಲಿ ಯೋಗಾಸನವನ್ನು ಅಭಿವೃದ್ಧಿಪಡಿಸಲು ಕ್ರೀಡಾ ಸಚಿವಾಲಯದಿಂದ ಮಾನ್ಯತೆ ನೀಡಿರುವುದಾಗಿ ರಿಜಿಜು ಹೇಳಿದ್ದಾರೆ.

Scroll to load tweet…

2021ರ ಖೇಲೋ ಇಂಡಿಯಾ ಯೂತ್‌ ಗೇಮ್‌ನಲ್ಲಿ ಪುರುಷರ ಹಾಗೂ ಮಹಿಳೆಯರ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. 

ಸೆಮೀಸ್‌ಗೆ ಶ್ರೀಕಾಂತ್‌, ಕ್ವಾರ್ಟರ್‌ಗೇರಿದ ಸೈನಾ

ಪ್ಯಾರಿಸ್‌: ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ರ‍್ಯಾಂಕಿಂಗ್‌ ಅಂಕಗಳನ್ನು ಕಲೆಹಾಕುವ ಸಲುವಾಗಿ ಇಲ್ಲಿ ನಡೆಯುತ್ತಿರುವ ಆರ್ಲಿಯಾನ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಆಡುತ್ತಿರುವ ಭಾರತದ ತಾರಾ ಶಟ್ಲರ್‌ಗಳಾದ ಕಿದಂಬಿ ಶ್ರೀಕಾಂತ್‌ ಹಾಗೂ ಸೈನಾ ನೆಹ್ವಾಲ್‌, ಜಯದ ಓಟ ಮುಂದುವರಿಸಿದ್ದಾರೆ. 

ಶ್ರೀಕಾಂತ್‌ ಸೆಮಿಫೈನಲ್‌ ಪ್ರವೇಶಿಸಿದರೆ, ಸೈನಾ ಕ್ವಾರ್ಟರ್‌ ಫೈನಲ್‌ಗೇರಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಶ್ರೀಕಾಂತ್‌, ಮಲೇಷ್ಯಾದ ಜೂನ್‌ ವೀ ಚೀಮ್‌ ವಿರುದ್ಧ 21-17, 22-20 ಗೇಮ್‌ಗಳಲ್ಲಿ ಜಯಿಸಿದರು. ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಸೈನಾ, ಫ್ರಾನ್ಸ್‌ನ ಮಾರಿ ಬಟೋಮೀನೆ ವಿರುದ್ಧ 18-21, 21-15, 21-10 ಗೇಮ್‌ಗಳಲ್ಲಿ ಗೆದ್ದು ಮುನ್ನಡೆದರು.