ಆರ್ಲಿಯಾನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್: ಫೈನಲ್‌ನಲ್ಲಿ ಎಡವಿದ ಗರಗ-ಪಂಜಾಲ
ಆರ್ಲಿಯಾನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿ ಅಚ್ಚರಿ ಮೂಡಿಸಿದ್ದ ಗರಗ-ಪಂಜಾಲ ಪ್ರಶಸ್ತಿ ಸುತ್ತಿನಲ್ಲಿ ಎರಡವಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಪ್ಯಾರಿಸ್(ಮಾ.29): ಆರ್ಲಿಯಾನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಚಿನ್ನದ ಭರವಸೆ ಮೂಡಿಸಿದ್ದ ಕೃಷ್ಣ ಪ್ರಸಾದ್ ಗರಗ ಹಾಗೂ ವಿಷ್ಣುವರ್ಧನ್ ಗೌಡ ಪಂಜಾಲ ಜೋಡಿಯೂ ಫೈನಲ್‌ನಲ್ಲಿ ನಿರಾಸೆ ಅನುಭವಿಸಿತು.
ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಇಂಗ್ಲೆಂಡ್‌ನ ಬೆನ್ ಲೇನ್ ಹಾಗೂ ಸೀನ್ ವೆಂಡಿ ವಿರುದ್ಧ 21-19, 14-21, 19-21 ಗೇಮ್‌ಗಳಿಂದ ಸೋಲುಂಡಿತು. ಯಾವುದೇ ಪದಕದ ಭರವಸೆ ಮೂಡಿಸಿರದ ಈ ಜೋಡಿಯು ಅಚ್ಚರಿ ಎಂಬಂತೆ ಫೈನಲ್ ಪ್ರವೇಶಿಸಿತ್ತು.
ಆರ್ಲಿಯಾನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್: ಸೆಮೀಸ್‌ನಲ್ಲಿ ಮುಗ್ಗರಿಸಿದ ಸೈನಾ
20 ವರ್ಷದ ವಿಷ್ಣು ಆಡುತ್ತಿರುವ ಸೀನಿಯರ್ ಲೆವೆಲ್‌ನ ಮೊದಲ ಅಂತಾರಾಷ್ಟ್ರೀಯ ಪಂದ್ಯಾವಳಿ ಇದಾಗಿತ್ತು. 56 ನಿಮಿಷಗಳ ಕಾಲ ಸಾಗಿದ ಪಂದ್ಯದಲ್ಲಿ ಮೊದಲ ಗೇಮ್‌ನಲ್ಲಿ ಇಂಗ್ಲೆಂಡ್‌ನ ಜೋಡಿಗೆ ಆಘಾತ ನೀಡಿದ ಗರಗ-ಪಂಜಾಲ, 2 ಮತ್ತು 3ನೇ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿತು.