ನ್ಯೂಯಾರ್ಕ್(ಸೆ.07): ಯಎಸ್ ಓಪನ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಿನ್ನಡೆಯಲ್ಲಿದ್ದ ವಿಶ್ವದ ನಂಬರ್ 1 ಟೆನಿಸ್ ಪಟು ನೋವಾಕ್ ಜೊಕೋವಿಚ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಆದರೆ ಈ ಆಕ್ರೋಶದಿಂದ ಲೈನ್ ಅಂಪೈರ್‌ಗೆ ಚೆಂಡು ಬಡಿದಿದೆ.  ಇದರ ಪರಿಣಾಮ ವಿಶ್ವದ ನಂ.1 ಟೆನಿಸ್ ಪಟು ಜೊಕೋವಿಚ್ ಯುಸ್ ಓಪನ್ ಟೂರ್ನಿಯಿಂದ ಅನರ್ಹಗೊಂಡಿದ್ದಾರೆ.

ಯುಎಸ್‌ ಓಪನ್ 2020‌: ಪ್ಲಿಸ್ಕೋವಾ, ಜೋಕೋವಿಚ್ ಶುಭಾರಂಭ..

ಯುಎಸ್ ಒಪನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಿನ್ನಡೆಯಲ್ಲಿದ್ದ ನೋವಾಕ್ ಜೊಕೋವಿಚ್ ಎದುರಾಳಿ ಸ್ಪೇನ್‌ನ ಪಾಬ್ಲೋ ಕರೆನೋ ಬುಸ್ಟಾ ವಿರುದ್ಧ ಹಿನ್ನಡೆ ಅನುಭವಿಸಿದ್ದರು. ಮುನ್ನಡೆಗಾಗಿ ಪ್ರಯತ್ನಿಸುತ್ತಿದ್ದ ನೋವಾಕ್ ಮತ್ತೆ ಅಂಕ ಕಳೆದುಕೊಂಡಾಗ ಆಕ್ರೋಶ ಹೊರಹಾಕಿದ್ದಾರೆ. 

 

ಜೊಕೋವಿಚ್ ಟೀಕಿಸಬೇಡಿ, ಇದು ನನ್ನ ತಪ್ಪು ಎಂದ ಸರ್ಬಿಯಾ ಪ್ರಧಾನ ಮಂತ್ರಿ!.

ನೋವಾಕ್ ಕೈಯಲ್ಲಿದ್ದ ಚೆಂಡನ್ನು ಟೆನಿಸ್ ರಾಕೆಟ್‌ನಿಂದ ಹೊಡೆದಿದ್ದಾರೆ. ಇದು ಮಹಿಳಾ ಲೈನ್ ಅಂಪೈರ್‌ಗೆ ಬಡಿದಿದೆ. ಇದರಿಂದ ಮಹಿಳಾ ಸಿಬ್ಬಂದಿ ಅಂಪೈರ್ ಕುಸಿದಿದ್ದಾರೆ. ಜೊಕೊವಿಚ್ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ. ಆಕ್ರೋಶ ಹೊರಹಾಕಿದ ವೇಳೆ ಅಚಾನಕ್ಕಾಗಿ ಚೆಂಡು ಬಡಿದಿದೆ. ಆದರೆ ನಿಯಮದ ಪ್ರಕಾರ ಜೊಕೋವಿಚ್‌ಗೆ ಅನರ್ಹ ಶಿಕ್ಷೆ ನೀಡಲಾಗಿದೆ.

ಕೊರೋನಾ ವೈರಸ್ ಕಾರಣ ರಾಫೆಲ್ ನಡಾಲ್, ರೋಜರ್ ಫೆಡರರ್ ಸೇರಿದಂತೆ ಹಲವು ಸ್ಟಾರ್ ಟೆನಿಸ್ ಪಟುಗಳು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಜೊಕೊವಿಚ್ ಗೆಲವು ಬಹುತೇಕ ಪಕ್ಕಾ ಆಗಿತ್ತು. ಇದೀಗ ಈ ಬೆಳವಣಿಗೆಯಿಂದ ಜೊಕೋವಿಚ್ ಕನಸು ನುಚ್ಚು ನೂರಾಗಿದೆ.