ಟೆನಿಸ್ ಲೆಜೆಂಡ್ ನೋವಾಕ್ ಜೋಕೋವಿಚ್‌ಗೆ ಒಲಿದ ಚೊಚ್ಚಲ ಒಲಿಂಪಿಕ್ಸ್ ಚಿನ್ನ..!
ಟೆನಿಸ್ ದಂತಕಥೆ ನೋವಾಕ್ ಜೋಕೋವಿಚ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್: ಟೆನಿಸ್ ಲೋಕದ ದಿಗ್ಗಜ ಆಟಗಾರ ನೋವಾಕ್ ಜೋಕೋವಿಚ್ ಅವರ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕದ ಕನಸು ಕೊನೆಗೂ ನನಸಾಗಿದೆ. ಭಾನುವಾರ ಪ್ಯಾರಿಸ್ ಕ್ರೀಡಾಕೂಟದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಯುವ ತಾರೆ ಕಾರ್ಲೊಸ್ ಆಲ್ಕರಜ್ ವಿರುದ್ದ ಸರ್ಬಿಯಾದ ಜೋಕೋ 7-6(3), 7-6(2) ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು.
24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ಜೋಕೋವಿಚ್ 2008ರ ಒಲಿಂಪಿಕ್ಸ್ ನಲ್ಲೇ ಕಂಚಿನ ಪದಕ ಗೆದ್ದಿದ್ದರು. 2008, 2012 ಹಾಗೂ 2020ರಲ್ಲಿ ಸೆಮಿಫೈನಲ್‌ನಲ್ಲಿ ಸೋತಿದ್ದ ಅವರು ಈ ಬಾರಿ ಚಿನ್ನ ಗೆದ್ದಿದ್ದಾರೆ. ಈ ಮೂಲಕ, ಒಲಿಂಪಿಕ್ಸ್ ಸಿಂಗಲ್ಸ್‌ನಲ್ಲಿ 1908ರ ಬಳಿಕ ಈ ಸಾಧನೆ ಮಾಡಿದ ಅತಿ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಕ್ವಾರ್ಟರ್ ಫೈನಲಲ್ಲೇ ಸೋತ ಲವ್ಲೀನಾ: ಪದಕ ಕನಸು ಭಗ್ನ!
ಈ ಬಾರಿ ಒಲಿಂಪಿಕ್ಸ್‌ನ ಬಾಕ್ಸಿಂಗ್‌ನಲ್ಲಿ ಪದಕ ಗೆಲ್ಲುವ ಭಾರತದ ಕನಸು ಭಗ್ನಗೊಂಡಿದೆ. ಟೋಕಿಯೋ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತ ಲವ್ಲೀನಾ ಬೊರ್ಗೊಹೈನ್ ಭಾನುವಾರ ಮಹಿಳೆ ಯರ 75 ಕೆ.ಜಿ. ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ, ಚೀನಾದ ಲಿ ಕ್ವಿಯಾನ್ ವಿರುದ್ಧ 1-4 ಅಂತರದಲ್ಲಿ ಸೋಲನುಭವಿಸಿದರು.
ಸೆಮೀಸ್ ಕದನ ಸೋತ ಲಕ್ಷ್ಯ ಸೇನ್‌ಗಿದೆ ಇಂದು ಕಂಚು ಗೆಲ್ಲುವ ಬೆಸ್ಟ್ ಚಾನ್ಸ್..!
ಸೆಮಿಫೈನಲ್ ಪ್ರವೇಶಿಸಿದ್ದರೆ ಲವ್ಲೀನಾಗೆ ಕನಿಷ್ಠ ಕಂಚಿನ ಪದಕವಾದರೂ ಖಚಿತವಾಗುತ್ತಿತ್ತು. ಬಾಕ್ಸಿಂಗ್‌ನಲ್ಲಿ ಸೆಮೀಸ್ ಗೇರಿದರಿಗೂ ಕಂಚು ನೀಡಲಾಗುತ್ತದೆ. ಈ ಬಾರಿ ಒಲಿಂಪಿಕ್ಸ್ ನಲ್ಲಿ ಭಾರತದ ಒಟ್ಟು 6 ಬಾಕ್ಸರ್‌ಗಳು ಸ್ಪರ್ಧಿಸಿದ್ದರು
ಸ್ಕೀಟ್ ಶೂಟಿಂಗ್: ಭಾರತಕ್ಕೆ ನಿರಾಸೆ
ಪ್ಯಾರಿಸ್ ಕ್ರೀಡಾಕೂಟದ ಮಹಿಳೆಯರ ಶೂಟಿಂಗ್‌ನ ಸ್ಕೀಟ್ ವಿಭಾಗದಲ್ಲಿ ಭಾರತದ ಮಹೇಶ್ವರಿ ಚೌವ್ಹಾಣ್ ಹಾಗೂ ರಾಯ್ಝಾ ಧಿಲ್ಲೋನ ಅರ್ಹತಾ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಭಾನುವಾರ ಮಹೇಶ್ವರಿ 5 ಸುತ್ತುಗಳ ಒಟ್ಟು 125 ಅಂಕಗಳಲ್ಲಿ 118 ಅಂಕದೊಂದಿಗೆ 14ನೇ ಸ್ಥಾನ ಪಡೆದರು. ಧಿಲ್ಲೋನ್ ಕೇವಲ 113 ಅಂಕ ಗಳಿಸಿ 23ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ರಾಜ್ಯದ ಕ್ರೀಡಾ ಸಾಧಕರಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕಾತಿ ಪತ್ರ ವಿತರಣೆ
ಒಟ್ಟು 29 ಶೂಟರ್‌ಗಳಿದ್ದ ಸ್ಪರ್ಧೆಯಲ್ಲಿ ಅಗ್ರ-6 ಮಂದಿ ಫೈನಲ್ ಪ್ರವೇಶಿಸಿದರು. ಇನ್ನು, ಪುರುಷರ ವಿಭಾಗದ ಅರ್ಹತಾ ಸುತ್ತನಲ್ಲಿ ವಿಜಯ್‌ವೀರ್ ಸಿಧು 9ನೇ, ಅನೀಶ್ ಭನ್ವಾಲಾ 13ನೇ ಸ್ಥಾನ ಪಡೆದು ಹೊರಬಿದ್ದರು. ಅಗ್ರ-೮ ಶೂಟರ್‌ಗಳು ಫೈನಲ್ ಪ್ರವೇಶಿಸಿದರು.