Asianet Suvarna News Asianet Suvarna News

ಮಾಸ್ಕ್ ಹಾಕದೇ ಪಂದ್ಯ ವೀಕ್ಷಿಸಿದ 30ಸಾವಿರ ಫ್ಯಾನ್ಸ್: 7 ತಿಂಗಳ ಬಳಿಕ ದಾಖಲೆ!

ಕೊರೋನಾ ವಕ್ಕರಿಸಿದ ಬಳಿಕ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಪಂದ್ಯಗಳು ಆರಂಭಗೊಂಡಿದ್ದರೂ ಅಭಿಮಾನಿಗಳಿಗೆ ಪ್ರವೇಶವಿಲ್ಲ. ಸದ್ಯ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲೂ ಕ್ರೀಡಾಂಗಣ ಪ್ರವೇಶಿಸಲು ಕ್ರಿಕೆಟ್ ಫ್ಯಾನ್ಸ್‌ಗೆ ಅವಕಾಶವಿಲ್ಲ. ಆದರೆ ನ್ಯೂಜಿಲೆಂಡ್‌ನಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ಇದು ರಬ್ಗಿ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

Netizens praise New zealand stadium packed with a mask free live audience during rugby match ckm
Author
Bengaluru, First Published Oct 13, 2020, 7:15 PM IST
  • Facebook
  • Twitter
  • Whatsapp

ವೆಲ್ಲಿಂಗ್ಟನ್(ಅ.13): ಜನಸಂದಣಿ ಮಾತು ಬದಿಗಿರಲಿ, ಒಬ್ಬರೆ ಓಡಾಡುತ್ತಿದ್ದರೂ ಮಾಸ್ಕ್ ಕಡ್ಡಾಯವಾಗಿದೆ. ಇಲ್ಲದಿದ್ದರೆ ದಂಡ ಕಟ್ಟಬೇಕು. ಇದಕ್ಕೆ ಕಾರಣ ನಿಯಂತ್ರಣಕ್ಕೆ ಬಾರದ ಕೊರೋನಾ. ಇದು ಭಾರತದ ಪರಿಸ್ಥಿತಿದೆ. ಆದರೆ 7 ತಿಂಗಳ ಬಳಿಕ ಯಾವುದೇ ಮಾಸ್ಕ್ ಇಲ್ಲದೆ ಕ್ರೀಡಾಂಗಣದೊಳಗೆ ಬರೋಬ್ಬರಿ 30,000 ಕ್ರೀಡಾಭಿಮಾನಿಗಳು ಒಟ್ಟಿಗೆ ಪಂದ್ಯ ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ. ಇದು ನ್ಯೂಜಿಲೆಂಡ್‌ನಲ್ಲಿನ ಸದ್ಯದ ಸ್ಥಿತಿ.

ಫ್ರೆಂಚ್ ಚಾಂಪಿಯನ್ ಇಗಾ ಸ್ವಿಟೆಕ್ ವಿಶ್ವ ನಂ.17 ಆಟಗಾರ್ತಿ..!

7 ತಿಂಗಳ ಬಳಿಕ ವೆಲ್ಲಿಂಗ್ಟನ್‌ನ ಕ್ರೀಡಾಂಗಣದಲ್ಲಿ ರಗ್ಬಿ ಪಂದ್ಯ ಆಯೋಜಿಸಲಾಗಿದೆ. ಅದು ಕೂಡ ಕ್ರೀಡಾಭಿಮಾನಿಗಳಿಗೆ ಮುಕ್ತ ಪ್ರವೇಶದೊಂದಿಗೆ ಪಂದ್ಯ ಆರಂಭಗೊಂಡಿದೆ. ಬ್ಲೆಡಿಸ್ಲೋ ಕಪ್ ಟೆಸ್ಟ್ ಮ್ಯಾಚ್‌ಗೆ ಅಭಿಮಾನಿಗಳು ಯಾವುದೇ ಮಾಸ್ಕ್ ಧರಿಸಿದೆ, ಯಾವುದೇ ಅಂಜಿಕೆ ಇಲ್ಲದೆ 30,000 ಮಂದಿ ಹಾಜರಾಗಿದ್ದಾರೆ. 

ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಹಾಗೂ ಫ್ಲೋರಿಡಾದಲ್ಲಿ ನಡೆಯುತ್ತಿರುವ ಫುಟ್ಬಾಲ್ ಪಂದ್ಯಕ್ಕೆ ಸಾಕಷ್ಟು ನಿರ್ಬಂಧನೆ ವಿಧಿಸಲಾಗಿದೆ. ಕಾರಣ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರದ ಕಾರಣ ಕ್ರೀಡಾಭಿಮಾನಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಆದರೆ ನ್ಯೂಜಿಲೆಂಡ್‌ನಲ್ಲಿ ಎಲ್ಲರೂ ಮಾಸ್ಕ್ ಧರಿಸಿದೆ ಓಡಾಡುತ್ತಿದ್ದಾರೆ. 2 ತಿಂಗಳ ಹಿಂದೆ ನ್ಯೂಜಿಲೆಂಡ್ ಕೊರೋನಾ ಮುಕ್ತ ಮೊದಲ ದೇಶವಾಗಿತ್ತು.

 

ಸಾಮಾಜಿಕ ಜಾಲತಾಣದಲ್ಲಿ ಇದೀಗ ವೆಲ್ಲಿಂಗ್ಟನ್‌ನಲ್ಲಿ ಭಾನುವಾರ(ಅ.11)ನಡೆದ ರಗ್ಬಿ ಪಂದ್ಯದ ಫೋಟೋ ವೈರಲ್ ಆಗಿದೆ.  ಇಷ್ಟೇ ಅಲ್ಲ ನ್ಯೂಜಿಲೆಂಡ್ ಪ್ರಧಾನಿ ಜಾಸಿಂಡ ಅಡ್ರೆನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ನ್ಯೂಜಿಲೆಂಡ್‌ನಲ್ಲಿ ಕೊರೋನಾ ಸಂಪೂರ್ಣ ನಿಯಂತ್ರಕ್ಕೆ ಬಂದ ಕಾರಣ, ಕ್ರೀಡಾ ಚಟುವಟಿಕೆ ಸೇರಿದಂತೆ ಕೆಲ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ.

Follow Us:
Download App:
  • android
  • ios