Asianet Suvarna News Asianet Suvarna News

ರಾಷ್ಟ್ರೀಯ ಬಾಕ್ಸಿಂಗ್‌: ಹೊರಬಿದ್ದ ಗೌರವ್‌ ಬಿಧುರಿ

* ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಗೌರವ್‌ ಬಿಧುರಿಗೆ ಮೊದಲ ಸುತ್ತಿನಲ್ಲೇ ಶಾಕ್

* 57 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ರೈಲ್ವೇಸ್‌ನ ಗೌರವ್‌ ಹರ್ಯಾಣದ ಸಚಿನ್‌ ಎದುರು ಸೋಲು

* ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದಿದ್ದ ಗೌರವ್

National Boxing Championship Gaurav Bidhuri bows out after first round loss against Sachin kvn
Author
Ballari, First Published Sep 18, 2021, 8:55 AM IST
  • Facebook
  • Twitter
  • Whatsapp

ಬಳ್ಳಾರಿ(ಸೆ.18): ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ಬಾಕ್ಸರ್‌ ಗೌರವ್‌ ಬಿಧುರಿ ರಾಷ್ಟ್ರೀಯ ಪುರುಷರ ಚಾಂಪಿಯನ್‌ಶಿಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. 

ಶುಕ್ರವಾರ ನಡೆದ 57 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ರೈಲ್ವೇಸ್‌ನ ಗೌರವ್‌ ಹರಾರ‍ಯಣದ ಸಚಿನ್‌ ವಿರುದ್ಧ 1-4ರಿಂದ ಮುಗ್ಗರಿಸಿದರು. ದಕ್ಷಿಣ ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಅಂಕಿತ್‌ ಖತಾನ (75 ಕೆ.ಜಿ.) ಹಿಮಾಚಲ ಪ್ರದೇಶದ ಧರಂ ಪಾಲ್‌ ವಿರುದ್ಧ ಗೆದ್ದು ಕ್ವಾರ್ಟರ್‌ಫೈನಲ್‌ ತಲುಪಿದರು. 

ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಎಸ್‌ಎಸ್‌ಸಿಬಿ ಪ್ರಾಬಲ್ಯ

ತೆಲಂಗಾಣದ ಸಾವಿಯೊ ಡೊಮಿನಿಕ್‌(54 ಕೆ.ಜಿ.), ಗೋವಾದ ಅಶೋಕ್‌ ಪಾಟೀಲ್‌(67 ಕೆ.ಜಿ.), ಚಂಡೀಗಢದ ಕುಲದೀಪ್‌ ಕುಮಾರ್‌(48 ಕೆ.ಜಿ.) ಹಾಗೂ ಸಚಿನ್‌, ಮಹಾರಾಷ್ಟ್ರದ ನಿಖಿಲ್‌ ದುಬೆ(75 ಕೆ.ಜಿ.) ಕೂಡಾ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

Follow Us:
Download App:
  • android
  • ios