ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಎಸ್‌ಎಸ್‌ಸಿಬಿ ಪ್ರಾಬಲ್ಯ
* ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸವೀರ್ಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ ಮಿಂಚಿನ ಪ್ರದರ್ಶನ
* ಸವೀರ್ಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್‌ನ ಐವರು ಬಾಕ್ಸರ್‌ಗಳು ಎರಡನೇ ಸುತ್ತು ಪ್ರವೇಶ
* ಬಳ್ಳಾರಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್
ಬಳ್ಳಾರಿ(ಸೆ.17): ರಾಷ್ಟ್ರೀಯ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎಸ್‌ಎಸ್‌ಸಿಬಿ(ಸವೀರ್ಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್)ನ ಐವರೂ ಬಾಕ್ಸರ್‌ಗಳು ಗೆಲ್ಲುವ ಮೂಲಕ ಪ್ರಾಬಲ್ಯ ಮೆರೆದಿದ್ದಾರೆ.
ಅಂತಾರಾಷ್ಟ್ರೀಯ ಪದಕ ವಿಜೇತ ದೀಪಕ್ ಕುಮಾರ್(51 ಕೆ.ಜಿ.), ಬಿಹಾರದ ಅಮಾನ್ ಕುಮಾರ್ ವಿರುದ್ಧ ಗೆದ್ದು 2ನೇ ಸುತ್ತು ಪ್ರವೇಶಿಸಿದರು. ಎಸ್‌ಎಸ್‌ಬಿಸಿಯ ಬರುನ್ ಸಿಂಗ್(48 ಕೆ.ಜಿ.), ಆಕಾಶ್(54 ಕೆ.ಜಿ.), ದಲ್ವೀರ್ ಸಿಂಗ್ ಥೋಮರ್(64 ಕೆ.ಜಿ.), ನವೀನ್ ಬೂರಾ(71 ಕೆ.ಜಿ.) ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ.
ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಸುಮಿತ್ ಶುಭಾರಂಭ
ಕರ್ನಾಟಕದ ರಯ್ಯಾನ್ ಎಂ.ಡಿ.(67 ಕೆ.ಜಿ.) ದೆಹಲಿಯ ಭೂಪೇಶ್ ರಾಹುಲ್ ವಿರುದ್ಧ ಗೆದ್ದರು. ಮಹಾರಾಷ್ಟ್ರದ ಅಜಯ್, ಯಶ್‌ಗೌಡ್, ಉತ್ತರ ಪ್ರದೇಶದ ಜಾವೆದ್, ಚಂಡೀಗಢದ ರೋಹಿತ್, ರಾಜಸ್ಥಾನದ ಜೈವರ್ಧನ್ ಕಸ್ನಿಯಾ 2ನೇ ಸುತ್ತು ಪ್ರವೇಶಿಸಿದರು.