* ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ಅಕ್ಷತಾಗೆ ಒಲಿದ ಚಿನ್ನ* ಹೆಪ್ಟಾಥ್ಲಾನ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅಕ್ಷತಾ* ರೈಲ್ವೇಸ್‌ 13 ಚಿನ್ನ ಸೇರಿ ಒಟ್ಟು 36 ಪದಕ ಗೆದ್ದು ಮೊದಲ ಸ್ಥಾನ 

ವಾರಾಂಗಲ್‌(ಸೆ.20): 60ನೇ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ 1 ಚಿನ್ನದ ಪದಕ ಗೆದ್ದಿದೆ. ಹೆಪ್ಟಾಥ್ಲಾನ್‌ನಲ್ಲಿ ರಾಜ್ಯದ ಅಕ್ಷತಾ ಚಿನ್ನದ ಪದಕ ಜಯಿಸಿದರು. 

2ನೇ ಸ್ಥಾನ ಪಡೆದ ರೈಲ್ವೇಸ್‌ ಅಥ್ಲೀಟ್‌ಗಿಂತ ಅಕ್ಷತಾ 46 ಅಂಕ ಹೆಚ್ಚು ಪಡೆದರು. ಭಾನುವಾರ ಮುಕ್ತಾಯಗೊಂಡ ಕ್ರೀಡಾಕೂಟದಲ್ಲಿ ರೈಲ್ವೇಸ್‌ 13 ಚಿನ್ನ ಸೇರಿ ಒಟ್ಟು 36 ಪದಕ ಗೆದ್ದು ಮೊದಲ ಸ್ಥಾನ ಪಡೆಯಿತು.

ರಾಷ್ಟ್ರೀಯ ಕುಸ್ತಿ: ರಾಜ್ಯದ ಲೀನಾಗೆ ಕಂಚು

ಅಮೇಥಿ: ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದ ಅಂಡರ್‌-23 ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಲೀನಾ ಅಂತೋನಿ ಸಿದ್ದಿ 65 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

Scroll to load tweet…

ವಿಶ್ವ ಪ್ಯಾರಾ ಕ್ಲೈಂಬಿಂಗ್‌: ರಾಜ್ಯದ ಸುನಿತಾಗೆ ಒಲಿದ ಕಂಚು

ಉತ್ತರ ಕನ್ನಡದ ಹಳಿಯಾಳ ಮೂಲದ ಇವರ ಸಾಧನೆಯನ್ನು ರಾಜ್ಯ ಕ್ರೀಡಾ ಮತ್ತು ಯುವಜನ ಸೇವೆ ಸಚಿವ ನಾರಾಯಣಗೌಡ ಅವರು ಶ್ಲಾಘಿಸಿದ್ದು, ಟ್ವೀಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.