* 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ನಡೆದಿತ್ತಂತೆ ಬಾಕ್ಸಿಂಗ್‌ನಲ್ಲಿ ಮೋಸ* 10ಕ್ಕೂ ಹೆಚ್ಚು ಪಂದ್ಯಗಳಲ್ಲಿ ಮೋಸ ನಡೆದಿರುವ ಶಂಕೆ* ಮೆಕ್ಲಾರೆನ್‌ ಗ್ಲೋಬಲ್‌ ಸ್ಪೋರ್ಟ್ಸ್‌ ಸೊಲ್ಯೂಷನ್ಸ್‌ ತನಿಖೆ

ನವದೆಹಲಿ(ಅ.01): ಹಣ ಮತ್ತು ಇತರೆ ಪ್ರಯೋಜನಗಳಿಗಾಗಿ 2016ರ ರಿಯೋ ಒಲಿಂಪಿಕ್ಸ್‌ನ (Rio Olympics) 10ಕ್ಕೂ ಹೆಚ್ಚು ಬಾಕ್ಸಿಂಗ್‌ (Boxing) ಪಂದ್ಯಗಳಲ್ಲಿ ಮೋಸ ನಡೆದಿದೆ ಎಂದು ಸ್ವತಂತ್ರ ತನಿಖಾ ತಂಡ ಬಹಿರಂಗಪಡಿಸಿದೆ. 

ಮೆಕ್ಲಾರೆನ್‌ ಗ್ಲೋಬಲ್‌ ಸ್ಪೋರ್ಟ್ಸ್‌ ಸೊಲ್ಯೂಷನ್ಸ್‌ ತನಿಖೆ ನಡೆಸಿ ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆ(ಎಐಬಿಎ)ಗೆ ವರದಿ ಸಲ್ಲಿಸಿದೆ. ‘ಪಂದ್ಯಗಳಲ್ಲಿ ಹಣಕ್ಕಾಗಿ, ಎಐಬಿಎ ಲಾಭಕ್ಕಾಗಿ ಅಥವಾ ರಾಷ್ಟ್ರೀಯ ಸಂಸ್ಥೆಗಳು, ಒಲಿಂಪಿಕ್ಸ್‌ (Olympics) ಸಮಿತಿ ಹಾಗೂ ಪಂದ್ಯದ ಆಯೋಜಕರ ಆರ್ಥಿಕ ಲಾಭಕ್ಕಾಗಿ ಮೋಸ ನಡೆದಿದೆ ಎಂದು ತಿಳಿಸಲಾಗಿದೆ.

IPL 2021: ಈ ಕಾರಣಕ್ಕಾಗಿ ಒಂದೂ ಪಂದ್ಯವನ್ನಾಡದೇ ಮುಂಬೈ ಇಂಡಿಯನ್ಸ್‌ನಿಂದ ಹೊರಬಿದ್ದ ಅರ್ಜುನ್‌ ತೆಂಡುಲ್ಕರ್

ಹೀಗಾಗಿ 2 ಫೈನಲ್‌ ಸೇರಿದಂತೆ 14 ಪಂದ್ಯಗಳ ಮೇಲೆ ಪರಿಶೀಲನೆ ನಡೆಯಲಿದೆ. ವರದಿ ಬಳಿಕ ಪ್ರತಿಕ್ರಿಯಿಸಿದ ಎಐಬಿಎ, ಮುಂದಿನ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ಗಳಲ್ಲಿ ರೆಫ್ರಿಗಳಿಗೆ ಹಾಗೂ ಜಡ್ಜ್‌ಗಳಿಗೆ ಕಠಿಣ ಆಯ್ಕೆ ಪ್ರಕ್ರಿಯೆ ಇರಲಿದೆ ಎಂದು ತಿಳಿಸಿದೆ.

ಏಷ್ಯನ್‌ ಟಿಟಿ: ಭಾರತ ತಂಡಕ್ಕೆ ಪದಕ ಖಚಿತ

ದೋಹಾ: ಏಷ್ಯನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪನ್‌ನಲ್ಲಿ ಭಾರತ ಪುರುಷರ ತಂಡಕ್ಕೆ ಮೊದಲ ಪದಕ ಖಚಿತವಾಗಿದೆ. ಬುಧವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಇರಾನ್‌ ವಿರುದ್ಧ ಭಾರತ 3-1ರಿಂದ ಗೆಲುವು ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿತು. 

ಮೊದಲ ಪಂದ್ಯದಲ್ಲಿ ಭಾರತದ ಶರತ್‌ಕುಮಾರ್‌ ನಿಮಾ ಅಲಮಿಯನ್‌ ವಿರುದ್ಧ ಗೆದ್ದು 1-0 ಮುನ್ನಡೆ ಒದಗಿಸಿದರು. ಬಳಿಕ ನೊಶಾದ್‌ ಅಲಮಿಯನ್‌ರನ್ನು ಜಿ.ಸತ್ಯನ್‌ ಸೋಲಿಸಿದರು. ಮುಂದಿನ ಪಂದ್ಯದಲ್ಲಿ ಹರ್ಮಿತ್‌ ದೇಸಾಯಿ ಅಮಿರ್‌ ಹೊಸೈನ್‌ ವಿರುದ್ಧ ಸೋಲುಂಡರು. ಆದರೆ ರಿವರ್ಸ್‌ ಸಿಂಗಲ್ಸ್‌ನಲ್ಲಿ ಶರತ್‌ ಗೆಲುವು ಸಾಧಿಸಿ ತಂಡವನ್ನು ಸೆಮೀಸ್‌ಗೇರಿಸಿದರು. ಶುಕ್ರವಾರ ಸೆಮಿಫೈನಲ್‌ನಲ್ಲಿ ಭಾರತ, ಕೊರಿಯಾ ವಿರುದ್ಧ ಸೆಣಸಲಿದೆ.

ಸುದೀರ್‌ಮನ್‌ ಕಪ್‌: ಭಾರತಕ್ಕೆ 11ನೇ ಸ್ಥಾನ

ವಾಂಟಾ(ಫಿನ್ಲೆಂಡ್‌): ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ (Badminton) ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ ತಲುಪಲು ವಿಫಲವಾದ ಭಾರತ 11ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಬುಧವಾರ ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ಅತಿಥೇಯ ಫಿನ್ಲೆಂಡ್‌ ವಿರುದ್ಧ 4-1ರಿಂದ ಗೆಲುವು ಸಾಧಿಸಿತು. ಆದರೆ ಮೊದಲೆರಡು ಪಂದ್ಯ ಸೋತಿದ್ದ ಭಾರತಕ್ಕೆ ಕ್ವಾರ್ಟರ್‌ ತಲುಪಲು ಈ ಗೆಲುವು ಸಾಕಾಗಲಿಲ್ಲ. ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ಥಾಯ್ಲೆಂಡ್‌ ವಿರುದ್ಧ 1-4ರಲ್ಲಿ ಸೋಲು ಕಂಡಿತ್ತು. ನಂತರ ಹಾಲಿ ಚಾಂಪಿಯನ್‌ ಚೀನಾ ವಿರುದ್ಧ 0-5ರಿಂದ ಸೋಲನುಭವಿಸಿತ್ತು. ಟೂರ್ನಿಯಲ್ಲಿ 16 ತಂಡಗಳು ಸ್ಪರ್ಧಿಸಿವೆ.