Asianet Suvarna News Asianet Suvarna News

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ; ನೀರಜ್ ಚೋಪ್ರಾ, ರವಿ ದಹಿಯಾ ಸೇರಿ 12 ಮಂದಿಗೆ ಖೇಲ್ ರತ್ನ!

  • 2021ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ
  • ಚಿನ್ನದ ಹುಡುಗ ನೀರಜ್ ಸೇರಿ 12 ಮಂದಿಗೆ ಖೇಲ್ ರತ್ನ ಪ್ರಶಸ್ತಿ
  • 35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಗೌರವ
National Sports Awards 2021 Neeraj Chopra among 12 athletes to be awarded Khel Ratna ckm
Author
Bengaluru, First Published Nov 2, 2021, 10:41 PM IST
  • Facebook
  • Twitter
  • Whatsapp

ನವದೆಹಲಿ(ನ.02): ಪ್ರಸಕ್ತ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ(National Sports Awards) ಪ್ರಕಟಗೊಂಡಿದೆ. ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಹಾಗೂ 35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಪ್ರಕಟಿಸಿದೆ. ಐವರು ಕೋಚ್‌ಗಳಿಗೆ  ದ್ರೋಣಾಚಾರ್ಯ ಪ್ರಶಸ್ತಿ ಘೋಷಿಸಿದೆ. ಟೊಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಚಿನ್ನದ ಪದಕ ಸಾಧನೆ ಮಾಡಿದ ನೀರಜ್ ಚೋಪ್ರಾ(Neeraj Chopra) ಸೇರಿದಂತೆ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಪ್ರಕಟಿಸಿದೆ.

Kannada Rajyotsava| ರೋಹನ್ ಬೋಪಣ್ಣ ಸೇರಿ ನಾಲ್ವರಿಗೆ ಒಲಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಡದಲ್ಲಿ ಪದಕ ಗೆದ್ದು ದೇಶದ ಕೀರ್ತಿ ಪತಾಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ ಕ್ರೀಡಾಪಟುಗಳಾದ ನೀರಜ್ ಚೋಪ್ರಾ, ರವಿ ಕುಮಾರ್ ದಹಿಯಾ, ಲೋವಿಲಿನಾ ಬೋರ್ಗೊಹೈನ್ ಸೇರಿದಂತೆ 12 ಕ್ರೀಡಾಪಟುಗಳು ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ(Major Dhyan Chand Khel Ratna ) ಪ್ರಶಸ್ತಿಗೆ ಭಾಜನರಾಗಿದ್ದಾರೆ.ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರೆ, ಟೀಂ ಇಂಡಿಯಾ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ:
ನೀರಜ್ ಚೋಪ್ರಾ (ಅಥ್ಲೆಟಿಕ್ಸ್), ರವಿಕುಮಾರ್ (ಕುಸ್ತಿ), ಲೊವ್ಲಿನಾ (ಬಾಕ್ಸಿಂಗ್), ಶ್ರೀಜೇಶ್ ಪಿಆರ್ (ಹಾಕಿ), ಅವನಿ ಲೆಖರಾ (ಪ್ಯಾರಾ ಶೂಟಿಂಗ್), ಸುಮಿತ್ ಅಂಟಿಲ್ (ಪ್ಯಾರಾ ಅಥ್ಲೆಟಿಕ್ಸ್), ಪ್ರಮೋದ್ ಭಗತ್ (ಪ್ಯಾರಾ ಬ್ಯಾಡ್ಮಿಂಟನ್), ಕೃಷ್ಣ ನಗರ (ಪ್ಯಾರಾ ಬ್ಯಾಡ್ಮಿಂಟನ್), ಮನೀಶ್ ನರ್ವಾಲ್ (ಪ್ಯಾರಾ ಶೂಟಿಂಗ್), ಮಿಥಾಲಿ ರಾಜ್ (ಕ್ರಿಕೆಟ್), ಸುನಿಲ್ ಛೆಟ್ರಿ (ಫುಟ್ಬಾಲ್), ಮತ್ತು ಮನ್‌ಪ್ರೀತ್ ಸಿಂಗ್ (ಹಾಕಿ) ಪ್ರತಿಷ್ಠಿತ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿದ್ದರು. ಹೆಸರು ಬದಲಾವಣೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಪರ ವಿರೋಧದ ನಡುವೆ ಹಾಕಿ ದಂತಕತೆ ಮೇಜರ್ ಧ್ಯಾನ್‌ಚಂದ್ ಹೆಸರನ್ನು ದೇಶದ ಪ್ರತಿಷ್ಠಿತ ಕ್ರೀಡಾಾ ಪ್ರಶಸ್ತಿಗೆ ಇಡಲಾಗಿದೆ. ಇದೀಗ ಬದಲಾದ ಹೆಸರಿನಲ್ಲಿ ಇದೇ ಮೊದಲ ಬಾರಿಗೆ ಖೇಲ್ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. 

35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ(Arjuna Award) ಘೋಷಿಸಲಾಗಿದೆ. ಅರ್ಜುನ್ ಪ್ರಶಸ್ತಿಗೆ ಭಾಜನರಾದ ಕ್ರೀಡಾಪಟುಗಳ ವಿವರ ಇಲ್ಲಿದೆ

ಅರ್ಪಿಂದರ್ ಸಿಂಗ್(ಅಥ್ಲಿಟಿಕ್ಸ್), ಸಿಮ್ರನ್‌ಜಿತ್ ಕೌರ್(ಬಾಕ್ಸಿಂಗ್), ಶಿಖರ್ ಧವನ್(ಕ್ರಿಕೆಟ್) ಸಿಎ ಭವಾನಿ ದೇವಿ(ಫೆನ್ಸಿಂಗ್), ಮೋನಿಕಾ(ಹಾಕಿ), ವಂದನಾ ಕಟಾರಿಯಾ(ಹಾಕಿ), ಸಂದೀಪ್ ನರ್ವಾಲ್(ಕಬಡ್ಡಿ)ಹಿಮಾನಿ ಉತ್ತಮ್ ಪರಾಬ್(ಮಲ್ಲಕಂಬ), ಅಭಿಷೇಕ್ ವರ್ಮಾ(ಶೂಟಿಂಗ್), ಅಂಕಿತಾ ರೈನಾ(ಟೆನಿಸ್), ದೀಪಕ್ ಪೂನಿಯಾ(ರಸ್ಲಿಂಗ್) ದಿಲ್‌ಪ್ರೀತ್ ಸಿಂಗ್(ಹಾಕಿ), ಹರ್ಮನ್‌ಪ್ರೀತ್ ಸಿಂಗ್(ಹಾಕಿ), ರೂಪಿಂದರ್ ಪಾಲ್ ಸಿಂಗ್ (ಹಾಕಿ),  ಸುರೇಂದರ್ ಕುಮಾರ್ (ಹಾಕಿ), ಅಮಿತ್ ರೋಹಿದಾಸ್ (ಹಾಕಿ), ಬೀರೇಂದ್ರ ಲಾಕ್ರಾ (ಹಾಕಿ), ಸುಮಿತ್ (ಹಾಕಿ), ನೀಲಕಂಠ ಶರ್ಮಾ (ಹಾಕಿ), ಹಾರ್ದಿಕ್ ಸಿಂಗ್ (ಹಾಕಿ), ವಿವೇಕ್ ಸಾಗರ್ ಪ್ರಸಾದ್ (ಹಾಕಿ), ಗುರ್ಜಂತ್ ಸಿಂಗ್ (ಹಾಕಿ), ಮನದೀಪ್ ಸಿಂಗ್ (ಹಾಕಿ), ಶಂಶೇರ್ ಸಿಂಗ್ (ಹಾಕಿ), ಲಲಿತ್ ಕುಮಾರ್ ಉಪಾಧ್ಯಾಯ (ಹಾಕಿ), ವರುಣ್ ಕುಮಾರ್ (ಹಾಕಿ), ಸಿಮ್ರಂಜೀತ್ ಸಿಂಗ್ (ಹಾಕಿ), ಯೋಗೇಶ್ ಕಥುನಿಯಾ (ಪ್ಯಾರಾ ಅಥ್ಲೆಟಿಕ್ಸ್), ನಿಶಾದ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್), ಪ್ರವೀಣ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್), ಸುಹಾಶ್ ಯತಿರಾಜ್ (ಪ್ಯಾರಾ ಬ್ಯಾಡ್ಮಿಂಟನ್), ಸಿಂಗ್ರಾಜ್ ಅಧಾನ (ಪ್ಯಾರಾ ಶೂಟಿಂಗ್), ಭಾವಿನಾ ಪಟೇಲ್ (ಪ್ಯಾರಾ ಟೇಬಲ್ ಟೆನಿಸ್), ಹರ್ವಿಂದರ್ ಸಿಂಗ್ (ಪ್ಯಾರಾ ಆರ್ಚರಿ), ಶರದ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್)

ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕೋಚ್:
ಸರ್ಪಾಲ್ ಸಿಂಗ್ (ಹಾಕಿ)
ಅಶನ್ ಕುಮಾರ್(ಕಬಡ್ಡಿ)
T. P. ಔಸೆಫ್ (ಅಥ್ಲೆಟಿಕ್ಸ್)
ಸರ್ಕಾರ್ ತಲ್ವಾರ್ (ಕ್ರಿಕೆಟ್)
ತಪನ್ ಕುಮಾರ್  (ಈಜು)

ಮೇಜರ್ ಧ್ಯಾನ್‌ಚಂದ್ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ 
ದೇವಿಂದರ್ ಸಿಂಗ್ ಗರ್ಚಾ( ಹಾಕಿ)
ವಿಕಾಸ್ ಕುಮಾರ್ (ಕಬಡ್ಡಿ)
ಸಜ್ಜನ್ ಸಿಂಗ್( ಕುಸ್ತಿ)
ಲೇಖಾ ಕೆ.ಸಿ. (ಬಾಕ್ಸಿಂಗ್)
ಅಭಿಜೀತ್ ಕುಂಟೆ (ಚೆಸ್)

Follow Us:
Download App:
  • android
  • ios