14 ವರ್ಷದ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್, 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಅತ್ಯಂತ ಕಿರಿಯ ಭಾರತೀಯ ಅಥ್ಲೀಟ್. ಅನಾಹತ್ ಬ್ರಿಟಿಷ್ ಜೂನಿಯರ್ ಸ್ಕ್ವಾಷ್ ಓಪನ್ (2019) ಮತ್ತು ಯುಎಸ್ ಜೂನಿಯರ್ ಸ್ಕ್ವಾಷ್ ಓಪನ್ (2021) ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎನಿಸಿದ್ದಾರೆ.
ಬರ್ಮಿಂಗ್ ಹ್ಯಾಂ (ಜುಲೈ 29): ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಂನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕೂಟದಲ್ಲಿ ಪದಕ ಬೇಟೆ ಆರಂಭಿಸಲು ಭಾರತ ತಂಡ ಬರೋಬ್ಬರಿ 205 ಸದಸ್ಯರ ನಿಯೋಗದೊಂದಿಗೆ ಬಂದಿದೆ. ಪಿವಿ ಸಿಂಧು, ಲೊವ್ಲಿನಾ ಬೊರ್ಗೊಹೈನ್, ಮಹಿಳಾ ಕ್ರಿಕೆಟ್ ತಂಡ, ಮೀರಾಬಾಯಿ ಚಾನು ಮುಂತಾದವರು ಪದಕದ ನಿರೀಕ್ಷೆಯಲ್ಲಿದ್ದರೆ, 14 ವರ್ಷದ ಅನಾಹತ್ ಸಿಂಗ್ ಗೇಮ್ಸ್‌ನಲ್ಲಿ ತಮ್ಮ ಮ್ಯಾಜಿಕ್ ತೋರಿಸುವ ನಿರೀಕ್ಷೆಯಲ್ಲಿದ್ದಾರೆ. ಬರೀ 14 ವರ್ಷ ವಯಸ್ಸಿನ ಅನಾಹತ್ ಸಿಂಗ್ ಈಗ 9ನೇ ತರಗತಿಯಲ್ಲಿ ಓದುತ್ತಿದ್ದು, ಸ್ಕ್ವಾಷ್‌ನಲ್ಲಿ ತಮ್ಮ ಬಲ ತೋರಿಸಲಿದ್ದಾರೆ, ಬರ್ಮಿಂಗ್‌ಹ್ಯಾಂಗೆ ತೆರಳಿರುವ ಭಾರತದ ಕ್ರೀಡಾ ನಿಯೋಗದ ಲೆಕ್ಕಾಚಾರದ ಪ್ರಕಾರ, ಹಾಲಿ ಆವೃತ್ತಿಯಲ್ಲಿ ಭಾರತದ ಅತ್ಯಂತ ಕರಿಯ ಅಥ್ಲೀಟ್ ಇವರಾಗಿದ್ದಾರೆ.ಅನಾಹತ್ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಉತ್ತಮ ಆಟವಾಡುವ ಮೂಲಕ ಬರ್ಮಿಂಗ್‌ಹ್ಯಾಮ್‌ಗೆ ಟಿಕೆಟ್ ಗಳಿಸಿದ್ದಾರೆ. ಆಕೆ ತನ್ನ 11 ವಯೋಮಿತಿ ದಿನಗಳಿಂದಲೂ ಕ್ರೀಡಾ ವಲಯ ಅಚ್ಚರಿಯ ಕಣ್ಣುಗಳಿಂದ ನೀಡುವಂಥ ಪ್ರದರ್ಶನ ನೀಡಿದ್ದಾಳೆ. ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಆಡುವ ಮೂಲಕ ಅನಾಹತ್, ಸೀನಿಯರ್ ಮಟ್ಟದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಚಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲೂ ಕೂಡ ಅನಾಹತ್ ಈವರೆಗೂ ಸೀನಿಯರ್ ಮಟ್ಟದಲ್ಲಿ ಅಡಿರಲಿಲ್ಲ.
"ನಾನು ಮೊದಲು ಅನುಭವಿ ಆಟಗಾರರೊಂದಿಗೆ ಗೇಮ್ಸ್‌ನಲ್ಲಿ ಇರುವ ಬಗ್ಗೆ ಚಿಂತಿತಳಾಗಿದ್ದೆ. ಆದರೆ, ಹಿರಿಯ ಅಥ್ಲೀಟ್‌ಗಳೆಲ್ಲರೂ ನನಗೆ ಸಹಾಯ ಮಾಡಿದರು. ಅದರಿಂದಾಗಿ ಅವರೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗಿದೆ' ಎಂದು ಬರ್ಮಿಂಗ್ ಹ್ಯಾಂ ಗೇಮ್ಸ್ ಆರಂಭಕ್ಕೂ ಮುನ್ನ ಖಾಸಗಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅನಾಹತ್ ಮೊದಲು 6 ವರ್ಷದವಳಾಗಿದ್ದಾಗ ಬ್ಯಾಡ್ಮಿಂಟನ್ ಅಭ್ಯಾಸ ಆರಂಭಿಸಿದ್ದರು. ಈಕೆ ಸಹೋದರಿ ಅಮೀರಾ ಜೊತೆ ಆಗುತ್ತಿದ್ದಳು. ಎರಡು ವರ್ಷಗಳ ನಂತರ, ಅನಾಹತ್ ಸ್ಕ್ವ್ಯಾಷ್‌ನಲ್ಲಿ ಪ್ರೀತಿಯನ್ನು ಬೆಳೆಸಿಕೊಂಡರು, ಅನಾಹತ್ ಅವರ ಸಹೋದರಿ ಅಮೀರಾ ಈಗಾಗಲೇ ನವದೆಹಲಿಯ ಸಿರಿ ಫೋರ್ಟ್‌ನಲ್ಲಿ ಸ್ಕ್ವಾಷ್‌ಅನ್ನು ಆಡುತ್ತಿದ್ದರು. ಅದಾದ ಬಳಿಕ ಸ್ಕ್ವಾಷ್ ನಲ್ಲಿ ಪ್ರೀತಿ ಬೆಳೆಸಿಕೊಳ್ಳ ಅನಾಹತ್, ಅದ್ಭುತ ಪ್ರದರ್ಶನ ತೋರುವ ಮೂಲಕ, ಈ ಕ್ರೀಡೆಯನ್ನು ವೃತ್ತಿಪರವಾಗಿ ತೆಗೆದುಕೊಳ್ಳಲು ನಿರ್ಧರಿಸಿದರು. 8 ನೇ ವಯಸ್ಸಿನಲ್ಲಿ, ಅವರು ವೃತ್ತಿಪರ ತರಬೇತಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು ಮತ್ತು ಸ್ಪರ್ಧೆಗಳಿಗಾಗಿ ಭಾರತದಾದ್ಯಂತ ಪ್ರಯಾಣಿಸಲು ಆರಂಭಿಸಿದ್ದರು.
ಈ ಕಾರಣಕ್ಕೆ Commonwealth Gamesಗೆ ನೀರಜ್ ಚೋಪ್ರಾ ಅಲಭ್ಯ; ಇನ್ಯಾರು ಚಿನ್ನ ಗೆಲ್ಲಬಹುದು?
ಬ್ಯಾಡ್ಮಿಂಟನ್ ನನ್ನ ಆಸಕ್ತಿಯಾಗಿತ್ತು: "ನಾನು ನನ್ನ ಅಕ್ಕನ ಜೊತೆ ಸ್ಕ್ವಾಷ್ ತರಬೇತಿಗೆ ಹೋಗುತ್ತಿದ್ದೆ. ಒಂದು 15-20 ನಿಮಿಷಗಳ ಕಾಲ ಆಕೆಯೊಂದಿಗೆ ಆಡುವುದು ನನ್ನ ಉದ್ದೇಶವಾಗಿತ್ತು. ಆದರೆ, ಸ್ಕ್ವಾಚ್ ಕುರಿತಾಗಿ ನಾನು ಗಂಭೀರವಾಗಿರಲಿಲ್ಲ. ಯಾಕೆಂದರೆ, ನಾನು ಬ್ಯಾಡ್ಮಿಂಟನ್ ಕುರಿತಾಗಿ ಗಮನ ನೀಡಿದ್ದೆ. ನನ್ನ ಅಕ್ಕ ಬಂಗಾಳದಲ್ಲಿ ಟೂರ್ನಿ ಆಡುತ್ತಿದ್ದಳು. ಆಕೆಯೊಂದಿಗೆ ಹೋಗಿದ್ದ ನಾನು ಕೂಡ ಹೆಸರನ್ನು ನೋಂದಾಯಿಸಿದ್ದೆ. ಆದರೆ, ನನ್ನ ಆಟ ಬಹಳ ಉತ್ತಮವಾಗಿತ್ತು. ಆ ಬಳಿಕ ಸ್ಕ್ವಾಷ್‌ನ ಮೇಲೆ ಇನ್ನಷ್ಟು ವಿಶ್ವಾಸ ಮೂಡಿದ ಕಾರಣ ಅಭ್ಯಾಸ ಹೆಚ್ಚಿಸಿದೆ' ಎಂದು ಹೇಳಿದ್ದಾಳೆ.
ಬಾಕ್ಸಿಂಗ್ ತಾರೆ ಲವ್ಲೀನಾ ಕೋಚ್‌ಗೆ ಮಾನ್ಯತೆ: ವಿವಾದಕ್ಕೆ ತೆರೆ ಎಳೆದ ಐಒಎ
ಹಾರ್ವರ್ಡ್ ಸ್ಕ್ವಾಷ್ ಟೀಮ್‌ನಲ್ಲಿ ಅಕ್ಕ: ಸಹೋದರಿಯರಿಬ್ಬರ ಶ್ರಮ ಈಗ ಸಾರ್ಥಕವಾಗಿದೆ ಆಕೆಯ ಸಹೋದರಿ ಹಾರ್ವರ್ಡ್‌ನಲ್ಲಿ ಸ್ಕ್ವಾಷ್ ತಂಡದಲ್ಲಿದ್ದರೆ, ಅನಾಹತ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಆಕೆಯ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ, ಅನಾಹತ್ ಆರು ವರ್ಷಗಳಲ್ಲಿ 46 ರಾಷ್ಟ್ರೀಯ ಸರ್ಕ್ಯೂಟ್ ಪ್ರಶಸ್ತಿಗಳು, ಎರಡು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು ಮತ್ತು ಎಂಟು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬ್ರಿಟಿಷ್ ಜೂನಿಯರ್ ಸ್ಕ್ವಾಷ್ ಓಪನ್ (2019) ಮತ್ತು ಯುಎಸ್ ಜೂನಿಯರ್ ಸ್ಕ್ವಾಷ್ ಓಪನ್ (2021) ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಆಗಿದ್ದಾರೆ. ಪ್ರತಿಭಾವಂತೆಯಾಗಿರುವ ಅನಾಹತ್, ಚಿತ್ರಕಲೆ, ಪಿಯಾನೋ ನುಡಿಸಲು ಕೂಡ ಇಷ್ಟಪಡುತ್ತಾರೆ. ಆದರೆ, ಕ್ರೀಡಾ ಆಸಕ್ತಿಗಳಿಗೆ ಸಂಬಂಧಿಸಿದಂತೆ, ಅವಳು ಸ್ಕ್ವ್ಯಾಷ್ ಹೊರತುಪಡಿಸಿ ಬೇರೇನನ್ನೂ ನೋಡುವುದಿಲ್ಲ.
