ಬಾಕ್ಸಿಂಗ್ ತಾರೆ ಲವ್ಲೀನಾ ಕೋಚ್‌ಗೆ ಮಾನ್ಯತೆ: ವಿವಾದಕ್ಕೆ ತೆರೆ ಎಳೆದ ಐಒಎ
ಬಾಕ್ಸಿಂಗ್ ತಾರೆ ಲವ್ಲೀನಾ ಕೋಚ್‌ಗೆ ಮಾನ್ಯತೆ: ವಿವಾದಕ್ಕೆ ತೆರೆ ಎಳೆದ ಐಒಎ
ಲವ್ಲೀನಾ ಬೊರ್ಗೊಹೈನ್ ವೈಯಕ್ತಿಕ ಕೋಚ್ ಸಂಧ್ಯಾ ಗುರುಂಗ್‌ಗೆ ಕ್ರೀಡಾಗ್ರಾಮ ಪ್ರವೇಶಿಸಲು ಅವಕಾಶ
ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ ಜುಲೈ 28ರಿಂದ ಆರಂಭ
ಬರ್ಮಿಂಗ್‌ಹ್ಯಾಮ್(ಜು.27): ಭಾರತದ ತಾರಾ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಅವರ ವೈಯಕ್ತಿಕ ಕೋಚ್ ಸಂಧ್ಯಾ ಗುರುಂಗ್ ಅವರಿಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಮಂಗಳವಾರ ಮಾನ್ಯತೆ ನೀಡಿದ್ದು, ಕಾಮನ್‌ವೆಲ್ತ್ ಕ್ರೀಡಾ ಗ್ರಾಮಕ್ಕೆ ಪ್ರವೇಶ ದೊರೆತಿದೆ. ಇದರೊಂದಿಗೆ ಐಒಎ ವಿವಾದಕ್ಕೆ ತೆರೆ ಎಳೆದಿದೆ. ‘ತಮ್ಮ ಕೋಚ್‌ಗೆ ಮಾನ್ಯತೆ ನೀಡದ ಕಾರಣ, ಅವರು ಕ್ರೀಡಾ ಗ್ರಾಮದ ಹೊರಗೆ ಇರುವಂತಾಗಿದೆ. ಇದರಿಂದ ತಮ್ಮ ಅಭ್ಯಾಸಕ್ಕೆ ಅಡ್ಡಿಯಾಗುತ್ತಿದ್ದು, ಮಾನಸಿಕ ಕಿರುಕುಳ ಎದುರಿಸುತ್ತಿದ್ದೇನೆ’ ಎಂದು ಲವ್ಲೀನಾ ಸೋಮವಾರ ಟ್ವೀಟರ್‌ನಲ್ಲಿ ಅಳಲು ತೋಡಿಕೊಂಡಿದ್ದರು. ಕೇಂದ್ರ ಕ್ರೀಡಾ ಸಚಿವಾಲಯ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಐಒಎಗೆ ಸೂಚಿಸಿತ್ತು.
ಲವ್ಲೀನಾ ಬೊರ್ಗೊಹೈನ್‌ಗೆ ಕೋಚ್ ಒದಗಿಸುವ ವಿಚಾರದಲ್ಲಿ ಭಾರತೀಯ ಬಾಕ್ಸಿಂಗ್ ಫೆಡರೇಶನ್(ಬಿಎಫ್‌ಐ) ಮತ್ತು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ತಮ್ಮ ತಮ್ಮ ಸಮರ್ಥನೆಗಳನ್ನು ನೀಡಿದ್ದವು. ಒಟ್ಟು ಸ್ಪರ್ಧಿಗಳ ಮೂರನೇ ಒಂದು ಭಾಗದಷ್ಟು ಸಹಾಯಕ ಸಿಬ್ಬಂದಿಯನ್ನು ಕ್ರೀಡಾಕೂಟಕ್ಕೆ ಕಳುಹಿಸಲಾಗುತ್ತದೆ. ಅದರಂತೆ ಭಾರತೀಯ ಬಾಕ್ಸಿಂಗ್ ತಂಡದಲ್ಲಿ 12 ಸ್ಪರ್ಧಿಗಳಿದ್ದು(8 ಪುರುಷರು, 4 ಮಹಿಳೆಯರು), ಕೋಚ್ ಸೇರಿ ನಾಲ್ವರು ಸಹಾಯಕ ಸಿಬ್ಬಂದಿಗೆ ಅವಕಾಶವಿತ್ತು. ಆದರೆ ಐಒಎ ಬಳಿ ಮನವಿ ಮಾಡಿದ್ದರಿಂದ 4ರ ಬದಲು 8 ಸಹಾಯಕ ಸಿಬ್ಬಂದಿಯನ್ನು ಕಳುಹಿಸಿದ್ದೇವೆ ಎಂದು ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ ಹೇಳಿತ್ತು. ಐರ್ಲೆಂಡ್‌ನಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಕೋಚ್ ಸಂಧ್ಯಾ ಅವರು ಲವ್ಲೀನಾ ಬೊರ್ಗೊಹೈನ್ ಅವರೊಂದಿಗಿದ್ದರು ಎಂದು ಬಿಎಫ್‌ಐ ತಿಳಿಸಿತ್ತು.
ಲವ್ಲೀನಾ ಕಿರುಕುಳ ಆರೋಪ: ಕೋಚ್ ಬದಲಿಸಿದ ತೀರ್ಮಾನ ಸಮರ್ಥಿಸಿಕೊಂಡ ಬಿಎಫ್ಐ, ಒಲಿಂಪಿಕ್ ಸಂಸ್ಥೆ.!
ಇನ್ನು ಐಒಎ ಪ್ರಧಾನ ಕಾರ‍್ಯದರ್ಶಿ ರಾಜೀವ್ ಮೆಹ್ತಾ ಪ್ರತಿಕ್ರಿಯಿಸಿ, ‘ಬಿಎಫ್‌ಐ ಯಾವ ಕೋಚ್‌ಗಳ ಹೆಸರನ್ನು ಸೂಚಿಸಿತ್ತೋ ಆ ಕೋಚ್‌ಗಳನ್ನು ಕಳುಹಿಸಿದ್ದೇವೆ. ನಿಯಮದ ಪ್ರಕಾರ ನಾಲ್ವರು ಸಿಬ್ಬಂದಿಗೆ ಮಾತ್ರ ಅವಕಾಶವಿದೆ. ಆದರೆ 8 ಸಿಬ್ಬಂದಿಯನ್ನು ಕಳುಹಿಸಿದ್ದೇವೆ. ಇದಕ್ಕಿಂತ ಹೆಚ್ಚು ಏನು ಮಾಡಲು ಸಾಧ್ಯ’ ಎಂದಿದ್ದರು.
ಭ್ರಷ್ಟಾಚಾರ ಸುಳಿಯಲ್ಲಿ ಟೋಕಿಯೋ ಒಲಿಂಪಿಕ್ಸ್ ಕಾರ‍್ಯಕಾರಿ ಸಮಿತಿ ಸದಸ್ಯ!
ಟೋಕಿಯೋ: ಕಳೆದ ವರ್ಷ ನಡೆದಿದ್ದ ಟೋಕಿಯೋ ಒಲಿಂಪಿಕ್ಸ್‌ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ಹರುಯುಕಿ ತಕಹಾಶಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ತನಿಖೆ ಆರಂಭಗೊಂಡಿದೆ. ಒಲಿಂಪಿಕ್ಸ್‌ನ ಅಧಿಕೃತ ಉಡುಪುಗಳನ್ನು ತಯಾರು ಮಾಡಿ ಪೂರೈಸಿದ್ದ ಏಒಕಿ ಹೋಲ್ಡಿಂಗ್‌್ಸ ಎನ್ನುವ ಸಂಸ್ಥೆಗೆ ಟೆಂಡರ್ ನೀಡಲು ತಕಹಾಶಿ 45 ಮಿಲಿಯನ್ ಯೆನ್(ಅಂದಾಜು 2.63 ಕೋಟಿ ರು.) ಲಂಚ ಪಡೆದಿದ್ದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.