Asianet Suvarna News Asianet Suvarna News

ಮೇರಿಕೋಮ್‌ ಸೇರಿ 12 ಬಾಕ್ಸರ್‌ಗಳು ಕ್ವಾರ್ಟರ್‌ಗೆ ಲಗ್ಗೆ

ಒಲಿಂಪಿಕ್ಸ್ ಪದಕ ವಿಜೇತೆ ಮೇರಿಕೋಮ್‌ ಸೇರಿದಂತೆ 12 ಭಾರತೀಯ ಬಾಕ್ಸರ್‌ಗಳು ಬಾಕ್ಸ್ಯಾಮ್‌ ಇಂಟರ್‌ನ್ಯಾಷನಲ್‌ ಪಂದ್ಯಾವಳಿಯಲ್ಲಿ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Mary Kom among 12 Indian Boxers to get direct entry into quarters of Boxam International tournament kvn
Author
New Delhi, First Published Mar 3, 2021, 9:16 AM IST

ನವದೆಹಲಿ(ಮಾ.03): ಆರು ಬಾರಿ ವಿಶ್ವ ಚಾಂಪಿಯನ್‌ ಆದ ಎಂ.ಸಿ. ಮೇರಿಕೋಮ್‌ ಮತ್ತು ಏಷ್ಯನ್‌ ಗೇಮ್ಸ್‌ ಸ್ವರ್ಣ ಪದಕ ವಿಜೇತ ಅಮಿತ್‌ ಪಂಘಾಲ್‌ ಸೇರಿದಂತೆ ಒಟ್ಟು 12 ಮಂದಿ ಭಾರತೀಯ ಬಾಕ್ಸರ್‌ಗಳು ಸ್ಪೇನ್‌ನಲ್ಲಿ ನಡೆಯುತ್ತಿರುವ ಬಾಕ್ಸ್ಯಾಮ್‌ ಇಂಟರ್‌ನ್ಯಾಷನಲ್‌ ಪಂದ್ಯಾವಳಿಯಲ್ಲಿ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಈ ಮೂಲಕ ಪದಕ ಖಚಿತಪಡಿಸಿಕೊಳ್ಳಲು ಇನ್ನೊಂದು ಹೆಜ್ಜೆ ಬಾಕಿ ಉಳಿದಿದೆ.

ಮುಂದಿನ ಯಾವುದೇ ಸ್ಪರ್ಧೆಯನ್ನು ಡ್ರಾ ಮಾಡಿಕೊಂಡರೂ ಪದಕ ಖಚಿತಗೊಳ್ಳಲಿದೆ. ಭಾರತೀಯ ಬಾಕ್ಸರ್‌ಗಳ ಪೈಕಿ 9 ಮಂದಿ ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದವರಾಗಿದ್ದು, ಉಳಿದ ಬಾಕ್ಸರ್‌ಗಳಿಗೂ ಸಾಮರ್ಥ್ಯ ಪ್ರದರ್ಶಿಸಲು ಮುಂದಿನ ಸ್ಪರ್ಧೆಗಳು ಮಹತ್ವದ್ದಾಗಿದೆ.

ಬಾಕ್ಸರ್‌ ವಿಜೇಂದರ್‌ ಸಿಂಗ್ ಮಾರ್ಚ್‌ನಲ್ಲಿ ಅಖಾಡಕ್ಕೆ

6 ವರ್ಷದ ಬಳಿಕ ಬೋಪಣ್ಣಗೆ ಮತ್ತೆ ಪಾಕ್‌ನ ಖುರೇಷಿ ಜೋಡಿ

ನವದೆಹಲಿ: ‘ಇಂಡೋ-ಪಾಕ್‌ ಎಕ್ಸ್‌ಪ್ರೆಸ್‌’ ಎಂದೇ ಖ್ಯಾತರಾಗಿದ್ದ ಭಾರತದ ರೋಹನ್‌ ಬೋಪಣ್ಣ ಹಾಗೂ ಪಾಕಿಸ್ತಾನದ ಐಸೆಮ್‌-ಉಲ್‌-ಹಕ್‌ ಖುರೇಷಿ 6 ವರ್ಷದ ಬಳಿಕ ಮತ್ತೆ ಒಂದಾಗುತ್ತಿದ್ದಾರೆ. ಈ ಜೋಡಿ ಇದೇ ಮಾ.15ರಿಂದ ಮೆಕ್ಸಿಕೋದಲ್ಲಿ ಆರಂಭಗೊಳ್ಳಲಿರುವ ಅಕಾಪುಲ್ಕೊ ಎಟಿಪಿ 500 ಟೆನಿಸ್‌ ಪಂದ್ಯಾವಳಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

2010ರಲ್ಲಿ ಬೋಪಣ್ಣ-ಖುರೇಷಿ ಜೋಡಿ ಯುಎಸ್‌ ಒಪನ್‌ನ ಪೈನಲ್‌ಗೇರಿ, ರನ್ನರ್‌ ಅಪ್‌ ಆಗಿತ್ತು. 2012ರಲ್ಲಿ ಒಲಿಂಪಿಕ್ಸ್‌ಗಾಗಿ ಖುರೇಷಿ ಜತೆ ಆಡುವುದನ್ನು ನಿಲ್ಲಿಸಿದ್ದ ಬೋಪಣ್ಣ, ಮಹೇಶ್‌ ಭೂಪತಿ ಜತೆ ಆಡಲು ಶುರು ಮಾಡಿದ್ದರು. ಬಳಿಕ 2014ರಲ್ಲಿ ಬೋಪಣ್ಣ-ಖುರೇಷಿ ಜೋಡಿ ಒಂದಾಗಿತ್ತು. ಅದೇ ವರ್ಷ ಈ ಜೋಡಿ ಕೊನೆಯ ಪಂದ್ಯ ಆಡಿತ್ತು.
 

Follow Us:
Download App:
  • android
  • ios