ಭಾರತದ ತಾರಾ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಮಾರ್ಚ್‌ನಲ್ಲಿ ಮತ್ತೆ ರಿಂಗ್‌ನೊಳಗೆ ಅಬ್ಬರಿಸಲು ರೆಡಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಫೆ.23): ಬಾಕ್ಸಿಂಗ್‌ ಅಭಿಮಾನಿಗಳಿಗೆ ಇದು ಸಿಹಿ ಸುದ್ದಿ. ಭಾರತದ ಜನಪ್ರಿಯ ವೃತ್ತಿಪರ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಮುಂದಿನ ತಿಂಗಳು ಮತ್ತೆ ಅಖಾಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಕೊರೋನಾ ಸೋಂಕಿನಿಂದಾಗಿ ಯಾವುದೇ ಸ್ಪರ್ಧೆಗಳು ಇಲ್ಲದಿದ್ದರೂ ನಿರಂತರ ತಾಲೀಮಿನಲ್ಲಿ ತೊಡಗಿಕೊಂಡಿದ್ದ ವಿಜೇಂದರ್‌ ಮಾರ್ಚ್‌ನಲ್ಲಿ ಸ್ಪರ್ಧೆಗಿಳಿಯಲಿದ್ದು, ಎದುರಾಳಿ ಯಾರೆನ್ನುವುದನ್ನು ಹಾಗೂ ಸ್ಪರ್ಧೆ ಭಾರತದಲ್ಲಿಯೇ ನಡೆಸಲಾಗುತ್ತದೆಯೇ ಅಥವಾ ಬೇರೆ ದೇಶದಲ್ಲಿ ನಡೆಯಲಿದೆಯೇ ಎನ್ನುವುದನ್ನು ಇನ್ನಷ್ಟೇ ಪ್ರಕಟಿಸಲಾಗುವುದು ಎಂದು ಪ್ರಾಯೋಜಕರು ತಿಳಿಸಿದ್ದಾರೆ. ವಿಜೇಂದರ್‌ 2019ರ ನವೆಂಬರ್‌ನಲ್ಲಿ ತಮ್ಮ ವೃತ್ತಿ ಜೀವನದ ಸತತ 12ನೇ ಜಯ ಸಾಧಿಸಿದ್ದರು. ಆ ಬಳಿಕ ಕೊರೋನಾದಿಂದ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. 

ವಿಜೇಂದರ್‌ಗೆ ಸತತ 12ನೇ ಗೆಲು​ವು!

ಮಾಂಟೇನೆಗ್ರೊ ಬಾಕ್ಸಿಂಗ್‌: ಭಾರತಕ್ಕೆ ಮತ್ತೆರಡು ಚಿನ್ನ

ನವದೆಹಲಿ: ಭಾರತೀಯ ಮಹಿಳಾ ಬಾಕ್ಸರ್‌ಗಳಾದ ಬೇಬಿರೊಜಿಸನಾ ಚಾನು ಮತ್ತು ಅರುಂಧತಿ ಚೌಧರಿ ಅವರು ಮಾಂಟೇನೆಗ್ರೊದ ಬುದ್ವಾದಲ್ಲಿ ನಡೆಯುತ್ತಿರುವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನ 51 ಕೆ.ಜಿ. ಮತ್ತು 69 ಕೆ.ಜಿ. ವಿಭಾಗದಲ್ಲಿ ಇನ್ನೆರಡು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 

ಒಟ್ಟು 5 ಸ್ವರ್ಣ ಪದಕ ಗೆಲ್ಲುವ ಮೂಲಕ ಭಾರತೀಯ ಮಹಿಳೆಯರು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತ ಒಟ್ಟು 10 ಪದಕಗಳನ್ನು ಗೆದ್ದುಕೊಂಡಿದ್ದು ಅವುಗಳಲ್ಲಿ 5 ಚಿನ್ನ, 3 ಬೆಳ್ಳಿ ಮತ್ತು 2 ಕಂಚು ಸೇರಿವೆ. ಸೋಮವಾರ ನಡೆದ ಸ್ಪರ್ಧೆಗಳಲ್ಲಿ ಲೂಕಿ ರಾಣಾ(64ಕೆ.ಜಿ.) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಚಿನ್ನ ಗೆದ್ದ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಉಜ್ಬೇಕಿಸ್ತಾನ (2 ಚಿನ್ನ) ಮತ್ತು ಚೆಕ್‌ ಗಣರಾಜ್ಯ(1ಚಿನ್ನ) ನಂತರದ ಎರಡು ಸ್ಥಾನದಲ್ಲಿದೆ.