ಬ್ಯಾಂಕಾಕ್(ಜ.28)‌: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿಯಲ್ಲಿ ಆರಂಭಿಕ ಆಘಾತ ಅನುಭವಿಸಿದ್ದಾರೆ. 

ಅಗ್ರ 8 ಆಟಗಾರರು ಸ್ಪರ್ಧಿಸುತ್ತಿರುವ ಟೂರ್ನಿಯ ಪುರುಷರ ಸಿಂಗಲ್ಸ್‌ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಶ್ರೀಕಾಂತ್‌, ಗುಂಪು ಹಂತದ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್ನ ಆ್ಯಂಡರ್ಸ್‌ ಆ್ಯಂಟೋನ್ಸೆನ್‌ ವಿರುದ್ಧ 21-15, 16-21, 18-21 ಗೇಮ್‌ಗಳಲ್ಲಿ ವೀರೋಚಿತ ಸೋಲು ಅನುಭವಿಸಿದರು. ಗುರುವಾರ 2ನೇ ಪಂದ್ಯದಲ್ಲಿ ಚೈನೀಸ್‌ ತೈಪೆಯ ವಾಂಗ್‌ ತ್ಸು ವೀ ವಿರುದ್ಧ ಸೆಣಸಲಿದ್ದಾರೆ. 

ಇಂದಿನಿಂದ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌

ಮಹಿಳಾ ಸಿಂಗಲ್ಸ್‌ ‘ಬಿ’ ಗುಂಪಿನ ಪಂದ್ಯದಲ್ಲಿ ಸಿಂಧು, ವಿಶ್ವ ನಂ.1 ಚೈನೀಸ್‌ ತೈಪೆಯ ತೈ ತ್ಸು ಯಿಂಗ್‌ ವಿರುದ್ಧ 21-19, 12-21, 17-21 ಗೇಮ್‌ಗಳಲ್ಲಿ ಸೋಲುಂಡರು. ಗುರುವಾರ 2ನೇ ಪಂದ್ಯದಲ್ಲಿ ಥಾಯ್ಲೆಂಡ್‌ನ ರಚನಾಕ್‌ ಇಂಟನಾನ್‌ ವಿರುದ್ಧ ಸೆಣಸಲಿದ್ದಾರೆ. ಸೆಮೀಸ್‌ ಆಸೆ ಜೀವಂತವಾಗಿರಿಸಿಕೊಳ್ಳಲು ಸಿಂಧು, ಶ್ರೀಕಾಂತ್‌ ಇಬ್ಬರೂ 2ನೇ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.