Asianet Suvarna News Asianet Suvarna News

ಇಂದಿನಿಂದ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌

ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಲು ಕಿದಂಬಿ ಶ್ರೀಕಾಂತ್ ಹಾಗೂ ಪಿ.ವಿ. ಸಿಂಧು ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Indian Badminton Star Kidambi Srikanth PV Sindhu qualify for BWF World Tour Finals kvn
Author
Bangkok, First Published Jan 27, 2021, 7:54 AM IST

ಬ್ಯಾಂಕಾಕ್(ಜ.27)‌: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌ ಬುಧವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ವಿಶ್ವದ ಅಗ್ರ 8 ಆಟಗಾರರು ಮಾತ್ರ ಈ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದು, ಚೀನಾ ಹಾಗೂ ಜಪಾನ್‌ ಆಟಗಾರರು ಹೊರಗುಳಿಯಲು ನಿರ್ಧರಿಸಿದ ಕಾರಣ ಸಾಧಾರಣ ಪ್ರದರ್ಶನದ ಹೊರತಾಗಿಯೂ ಈ ಇಬ್ಬರಿಗೆ ಅರ್ಹತೆ ದೊರೆತಿದೆ. ಟೂರ್ನಿ ಕಳೆದ ವರ್ಷ ಡಿಸೆಂಬರ್‌ನಲ್ಲೇ ಚೀನಾದಲ್ಲಿ ನಡೆಯಬೇಕಿತ್ತು. ಕೋವಿಡ್‌ನಿಂದಾಗಿ ಮುಂದೂಡಲಾಗಿತ್ತು.

ಥಾಯ್ಲೆಂಡ್‌ ಓಪನ್‌: ಸಿಂಧು, ಸಮೀರ್‌ಗೆ ಸೋಲು; ಸಾತ್ವಿಕ್‌ಗೆ ಡಬಲ್‌ ಯಶಸ್ಸು

ಮಂಗಳವಾರ ಟೂರ್ನಿಯ ಡ್ರಾ ನಡೆಸಲಾಯಿತು. ಪುರುಷರ ಸಿಂಗಲ್ಸ್‌ನ ‘ಎ’ ಗುಂಪಿನಲ್ಲಿ ಶ್ರೀಕಾಂತ್‌ ಸ್ಥಾನ ಪಡೆದರೆ, ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಸಿಂಧುಗೆ ‘ಬಿ’ ಗುಂಪಿನಲ್ಲಿ ಸ್ಥಾನ ಲಭಿಸಿದೆ. ಲೀಗ್‌ ಹಂತದಲ್ಲಿ ಒಟ್ಟು 3 ಪಂದ್ಯಗಳು ನಡೆಯಲಿದ್ದು, ಅಗ್ರ 2 ಸ್ಥಾನ ಪಡೆಯುವ ಆಟಗಾರರು ಸೆಮಿಫೈನಲ್‌ ಪ್ರವೇಶಿಸಲಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯವಾದ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಿದಂಬಿ ಶ್ರೀಕಾಂತ್ ಆರಂಭದಲ್ಲೇ ಮುಗ್ಗರಿಸಿದರೆ, ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಂಡು ಟೂರ್ನಿಯಿಂದ ಹೊರಬಿದ್ದಿದ್ದರು.


 

Follow Us:
Download App:
  • android
  • ios