ನವದೆಹಲಿ(ಡಿ.08): ಭಾರತದ ದಿಗ್ಗಜ ಕ್ರೀಡಾಪಟು, ಮಾಜಿ ಅಥ್ಲೀಟ್‌ ಅಂಜು ಬಾಬಿ ಜಾರ್ಜ್ ತಮಗಿರುವುದು ಒಂದೇ ಕಿಡ್ನಿ ಎನ್ನುವ ಆಶ್ಚರ್ಯಕರ ವಿಚಾರವನ್ನು ಸೋಮವಾರ ಬಹಿರಂಗ ಪಡಿಸಿದ್ದಾರೆ. 

ನೀವು ನಂಬುತ್ತೀರೋ ಇಲ್ಲವೋ, ಕೇವಲ ಒಂದು ಕಿಡ್ನಿಯಿದ್ದರೂ ವಿಶ್ವದ ಅಗ್ರ ಅಥ್ಲೀಟ್‌ಗಳಾಗಿ ಬೆಳೆದ ಕೆಲವೇ ಕೆಲವರ ನಾನು ಸಹಾ ಒಬ್ಬಳು. ಸಣ್ಣ ಪೇಯ್ನ್ ಕಿಲ್ಲರ್(ನೋವು ನಿವಾರಕ) ಮಾತ್ರೆ ನುಂಗಿದರೂ ನನಗೆ ಅಲರ್ಜಿಯಾಗುತ್ತದೆ. ಆದರೂ ನಾನು ಸಾಧಿಸಿದೆ. ಇದನ್ನು ಜಾದು ಎನ್ನಬೇಕೋ ಅಥವಾ ಕೋಚ್‌ನ ಪ್ರತಿಭೆ ಎನ್ನಬೇಕೋ ತಿಳಿದಿಲ್ಲ ಎಂದು ಅಂಜು ಬಾಬಿ ಜಾರ್ಜ್ ಟ್ವೀಟ್‌ ಮಾಡಿದ್ದಾರೆ.

ಎಫ್‌2 ರೇಸ್‌ ಗೆದ್ದ ಮೊದಲ ಭಾರತೀಯ ಜೆಹನ್ ದಾರೂವಾಲಾ

ಅಂಜು ಬಾಬಿ ಬಾರ್ಜ್ 2003ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಸೇರಿ ಹಲವು ಪದಕ ಗೆದ್ದಿದ್ದಾರೆ.